ಪಾಕ್ನ ಹಠಮಾರಿತನವೇ ಮಾತುಕತೆ ವೈಫಲ್ಯಕ್ಕೆ ಕಾರಣ -ಅಟಲ್
ನವದೆಹಲಿ : ಗಡಿಯಾಚೆಯ ಭಯೋತ್ಪಾದನೆ ನಿಗ್ರಹದ ಯಾವುದೇ ಪ್ರಸ್ತಾವವನ್ನು ಖಂಡತುಂಡವಾಗಿ ತಿರಸ್ಕರಿಸಿ, ಕಾಶ್ಮೀರವನ್ನೇ ಪ್ರಮುಖ ವಿಷಯವನ್ನಾಗಿಸಲು ಪಟ್ಟು ಹಿಡಿದ ಪಾಕಿಸ್ತಾನವೇ ಮಾತುಕತೆ ವೈಫಲ್ಯಕ್ಕೆ ಸಂಪೂರ್ಣ ಹೊಣೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಗ್ರಾ ಶೃಂಗ ಸಭೆಯ ನಂತರದ ಪ್ರಥಮ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ.
ಗಡಿಯಾಚೆಯ ಭಯೋತ್ಪಾದನಾ ಕೃತ್ಯಗಳನ್ನು ಸ್ವಾತಂತ್ರ್ಯ ಹೋರಾಟವೆಂದೇ ಪಾಕ್ ಅಧ್ಯಕ್ಷ ಜನರಲ್ ಮುಷರ್ರಪ್ ಪದೇ ಪದೇ ಹೇಳುತ್ತಾರೆ. ಅಲ್ಲದೆ ಕಾಶ್ಮೀರದ ವಿಷಯ ಇತ್ಯರ್ಥವಾಗದ ಹೊರತು ಎರಡೂ ರಾಷ್ಟ್ರಗಳ ಸಂಬಂಧ ಸುಧಾರಣೆಗೊಳ್ಳದೆಂಬ ಇಸ್ಲಾಮಾಬಾದ್ನ ಆಗ್ರಹ, ಕಗ್ಗಂಟಿಗೆ ಇನ್ನೊಂದು ಕಾರಣ ಎಂದ ಪ್ರಧಾನಿ ಕರಡು ಹೇಳಿಕೆಗೆ ಸಹಿ ಹಾಕುವ ಹಂತಕ್ಕೆ ಬಂದಿದ್ದೆವು ಎಂಬ ಆದೇಶದ ಪ್ರತಿಪಾದನೆಯನ್ನು ತಳ್ಳಿ ಹಾಕಿದರು. ನಿಯೋಗ ಮಟ್ಟದ ಮಾತುಕತೆಯಲ್ಲಿ ಮಾತ್ರ ಇದನ್ನು ಚರ್ಚಿಸಲಾಗಿದೆ ಎಂದು ಅವರು ವಿವರಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್ ಸಿಂಗ್ ಅವರಿಂದಾಗಿ ಮಾತುಕತೆ ವಿಫಲವಾಗಿದೆ ಎಂಬ ಆಪಾದನೆಗಳನ್ನು ತಿರಸ್ಕರಿಸುತ್ತಾ ಪ್ರಧಾನಿ, ಮಾತುಕತೆ ವೇಳೆ ಸಂಪುಟ ಮಟ್ಟದ ಬೈಠಕ್ಗಳು ನಡೆದಿವೆ. ಯಾವುದಾದರೂ ಲೋಪವಿದ್ದರೆ ಸಚಿವ ಸಂಪುಟದ ಮುಖ್ಯಸ್ಥನಾಗಿ ಅದು ನನ್ನದೇ ತಪ್ಪು ಎಂದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications