ಕಾಶ್ಮೀರ ಕಣಿವೆಯಲ್ಲಿನ ರಕುತದ ನೆರೆಗೆ ಮುಷರ್ರಫ್ ಹೇಳಿಕೆ ಕಾರಣವೆ?
ನವದೆಹಲಿ : ದೋಡಾ ಹಾಗೂ ಅಮರ್‌ನಾಥ್‌ನಲ್ಲಿ ನಡೆದ 13 ಜನರ ಹತ್ಯೆಗೆ ಪರೋಕ್ಷವಾಗಿ ಪಾಕಿಸ್ತಾನವೇ ಕಾರಣ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವುದು ಹತ್ಯಾಕಾಂಡವಲ್ಲ, ಸ್ವಾತಂತ್ರ್ಯ ಹೋರಾಟ ಎಂದು ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ಹೇಳಿರುವುದೇ ಭಯೋತ್ಪಾದಕರಿಗೆ ಬೆನ್ನುತಟ್ಟಿದಂತಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಕಿಡಿ ಕಾರಿದ್ದಾರೆ.
ಸ್ಟಾರ್ ಟಿವಿಯ ಸ್ಟಾರ್ ರವಿವಾರ್ ಎಂಬ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಸೋಮವಾರ ಸಚಿವೆ ಈ ಮಾತುಗಳನ್ನಾಡಿದರು. ಭಾರತದಲ್ಲಿನ ಪಾಕ್ ದೂತಾವಾಸದ ಪ್ರಮುಖ ಅಶ್ರಫ್ ಜಹಾಂಗೀರ್ ಹಾಗೂ ಸುಷ್ಮಾ ಅವರೊಂದಿಗೆ ಮಾತುಕತೆಯ ಕಾರ್ಯಕ್ರಮ ಇದಾಗಿತ್ತು. ಆಗ್ರಾ ಶೃಂಗಸಭೆಯ ಬಗ್ಗೆ ಎರಗಿದ ಪ್ರಶ್ನೆಗಳಿಗೆ ಇಬ್ಬರೂ ಉತ್ತರಿಸುತ್ತಿದ್ದರು.
ಒಂದು ಹಂತದಲ್ಲಿ ಮುಷರ್ರಫ್ ಅವರನ್ನು ಅಶ್ರಫ್ ಸಮರ್ಥಿಸಿಕೊಂಡಾಗ ಸುಷ್ಮಾ ಕ್ರುದ್ಧರಾದರು. ಪರಿಣಾಮ ಇಬ್ಬರ ನಡುವೆ ತೂ ತೂ.. ಮೇಮೇ... ಶುರುವಾಯಿತು. ಖಂಡಾತುಂಡಾಗಿ ಮಾತಾಡಿದ ಸುಷ್ಮಾ, ಮುಷರ್ರಫ್ ಅವರ ಹೇಳಿಕೆ ಭಯೋತ್ಪಾದನೆಗೆ ಮುಕ್ತ ಬೆಂಬಲ ಸೂಚಿಸಿದಂತಾಗಿದೆ. ಇದೇ ರೀತಿ ಮುಗ್ಧ ಜನರನ್ನು ನೀವು ಕೊಲ್ಲುತ್ತಾ ಹೋದಲ್ಲಿ , ನವದೆಹಲಿ- ಇಸ್ಲಾಮಾಬಾದ್ ನಡುವೆ ಶಾಂತಿ ಸಂಧಾನದ ಪ್ರಕ್ರಿಯೆ ಮುಂದುವರೆಸುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಮುಷರ್ರಫ್ ಆಗ್ರಾ ಭೇಟಿಯ ವೇಳೆ ತಮ್ಮ ಸುದ್ದಿ ಹೇಳಿಕೆಯಲ್ಲಿ ಕಾಶ್ಮೀರ ವಿವಾದದ ವಿಷಯ ಪ್ರಸ್ತಾಪಿಸದ ಕಾರಣ ಸುಷ್ಮಾ ಸ್ವರಾಜ್ ಅವರನ್ನು ಮುಷರ್ರಫ್ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications