Get Updates
Get notified of breaking news, exclusive insights, and must-see stories!

ದಾವಣಗೆರೆ ಸೇರಿದಂತೆ 5 ನಗರಸಭೆಗೆ ಮಹಾನಗರ ಪಾಲಿಕೆಯ ಬಡ್ತಿ

ಬೆಂಗಳೂರು : ಬಳ್ಳಾರಿ, ಭದ್ರಾವತಿ, ದಾವಣಗೆರೆ, ಶಿವಮೊಗ್ಗ ಹಾಗೂ ತುಮಕೂರು ನಗರಸಭೆಗಳನ್ನು ಮಹಾನಗರ ಪಾಲಿಕೆಗಳಾಗಿ ಪರಿವರ್ತಿಸಲು ಸರ್ಕಾರ ಉದ್ದೇಶಿಸಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಹೇಳಿದ್ದಾರೆ.

ಐದು ನಗರಸಭೆಗಳನ್ನು ಮಹಾನಗರ ಪಾಲಿಕೆಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ 2001 ರ ಜನಗಣತಿ ಮಾಹಿತಿಗೆ ಕಾಯಲಾಗುತ್ತಿದೆ ಎಂದು ಸೋಮವಾರ ವಿಧಾನಪರಿಷತ್ತಿನಲ್ಲಿ ಸಚಿವ ಚಿಮ್ಮನಕಟ್ಟಿ ಹೇಳಿದರು. ಜನಗಣತಿ ವರದಿ ಲಭ್ಯವಾದ ನಂತರ ಆಯಾ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ಮಹಾ ನಗರಪಾಲಿಕೆಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ನೀಡುವುದಾಗಿ ಶಾಸಕ ಚನ್ನಬಸವಯ್ಯ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ತಿಳಿಸಿದರು.

ಮಹಾನಗರ ಪಾಲಿಕೆಯನ್ನಾಗಿ ನಗರ ಪಾಲಿಕೆಗಳನ್ನು ಪರಿವರ್ತಿಸಲು ಕೆಳಕಂಡ ಅಂಶಗಳನ್ನು ಪರಿಗಣಿಸುವುದಾಗಿ ಚಿಮ್ಮನಕಟ್ಟಿ ಹೇಳಿದರು. ಅವುಗಳೆಂದರೆ-

  • ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಲು ಉದ್ದೇಶಿಸಿರುವ ನಗರಪಾಲಿಕೆಯಲ್ಲಿ 3 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರಬೇಕು.
  • ಆ ನಗರಸಭೆಯ ಆದಾಯ 6 ಕೋಟಿಗಿಂತ ಹೆಚ್ಚಾಗಿರಬೇಕು ಹಾಗೂ
  • ಪ್ರತಿ ಚದರ ಕಿಮೀಗೆ 3 ಸಾವಿರ ಜನಸಾಂದ್ರತೆ ಇರಬೇಕು.
(ಇನ್ಫೋ ವಾರ್ತೆ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+