ಜಗತ್ತಿನ 144 ನಗರಿಗಳಲ್ಲಿ ಚೀಪೆಸ್ಟ್ ಯಾವುದು?
ಬೆಂಗಳೂರು : ಜಗತ್ತಿನ 144 ನಗರಿಗಳ ಪೈಕಿ ಬೆಂಗಳೂರು ಅಗ್ಗಾತಿ ಅಗ್ಗ. ಅಂತರರಾಷ್ಟ್ರೀಯ ಸಲಹೆಗಾರ ವಿಲಿಯಂ ಮರ್ಸರ್ ಬೆಂಗಳೂರನ್ನು ‘ಚೀಪೆಸ್ಟ್ ಕಾಸ್ಟ್ ಆಫ್ ಲಿವಿಂಗ್ ಸಿಟಿ’ ಎಂದು ಸಮೀಕ್ಷೆ ನಡೆಸಿ ಸಾರಿದ್ದಾರೆ. ಆದರೆ ದೇಶೀ ಹಾಗೂ ವಿದೇಶೀ ಐಟಿ ಪರಿಣತರು ಮರ್ಸರ್ ಮಾತನ್ನು ಒಪ್ಪಲು ಸಿದ್ಧರಿಲ್ಲ. ಬೆಂಗಳೂರು ಅದು ಹೇಗೆ ಅಗ್ಗಾತಿ ಅಗ್ಗ ನಗರಿ ಹೇಳಿ ಎಂಬ ಮರುಪ್ರಶ್ನೆ ಅವರದು. ಈ ಹಿನ್ನೆಲೆಯಲ್ಲಿ ಟೈಮ್ಸ್ ಆಫ್ ಇಂಡಿಯಾ ಡಾಟ್ ಕಾಂ ಕೆಲವರನ್ನು ಮಾತಾಡಿಸಿದೆ....
ತಿಂಗಳ ಖರ್ಚು 2900 ಡಾಲರ್ : ಬೆಂಗಳೂರು ಲ್ಯಾಬ್ಸ್‌ನ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಟಿ.ಜಿ.ರಮೇಶ್ ಅವರ ಪ್ರಕಾರ ಬೆಂಗಳೂರಲ್ಲಿ ಒಂದು ಕುಟುಂಬದ ತಿಂಗಳ ಖರ್ಚು ಇಂತಿದೆ : 3 ಬೆಡ್ ರೂಮಿನ ಫ್ಲಾಟ್‌ಗೆ ಬಾಡಿಗೆ- 200 ಡಾಲರ್, ಕಾರಿನ ನಿರ್ವಹಣೆ- 300 ಡಾಲರ್, ದಿನಸಿ ವಗೈರೆ- 600 ಡಾಲರ್, ಓಡಾಟ, ಪಾರ್ಟಿ, ಪೆಟ್ರೋಲು, ಬಟ್ಟೆ ಖರೀದಿ- 500 ಡಾಲರ್. 900 ಡಾಲರ್ ಆದಾಯ ತೆರಿಗೆಯಾದರೆ, ಉಳಿತಾಯ 400 ಡಾಲರ್. ಒಟ್ಟು ಲೆಕ್ಕ ಹಾಕಿ ; ಈ ಮೊತ್ತವನ್ನು ಸಂಪಾದಿಸುವ ಎಷ್ಟು ಮಂದಿ ಬೆಂಗಳೂರಲ್ಲಿದ್ದಾರೆ ? ಬೆಂಗಳೂರಲ್ಲಿ ಉಳಿತಾಯ ಮಾಡುವ ಮಂದಿ ಹೆಚ್ಚಾದರೆ ಮಾತ್ರ ಅದನ್ನು ಅಗ್ಗಾತಿ ಅಗ್ಗ ನಗರಿ ಎನ್ನಬಹುದು.
ಮರ್ಸರ್ ಈಸ್ ರಾಂಗ್ : ಕ್ಯಾಡೆನ್ಸ್ ಡಿಸೈನ್ ಸಿಸ್ಟಂಸ್‌ನ ಹಿಮಾಂಶು ಸಿಂಗ್ ವಾದವೇ ಬೇರೆ- ಬಹುಶಃ ಮರ್ಸರ್ ಅವರು ಡಾಲರ್‌ಗಳನ್ನು ಸ್ಥಳೀಯ ಕರೆನ್ಸಿಗೆ ಪರಿವರ್ತಿಸಿ ಸಮೀಕ್ಷೆ ನಡೆಸಿದ್ದಾರೆ. ಹೀಗೆ ಮಾಡಿದಾಗ ಏಷ್ಯಾದ ಯಾವುದೇ ನಗರದಲ್ಲಿ ಜೀವನ ವೆಚ್ಚ ಕಡಿಮೆ ಎಂದು ತೋರುತ್ತದೆ. ಆದರೆ ಸರಾಸರಿ ತಲಾದಾಯ ಪರಿಗಣಿಸಿ ಸಮೀಕ್ಷೆ ನಡೆಸಿದಾಗಷ್ಟೇ ವಾಸ್ತವಾಂಶ ತಿಳಿಯುವುದು. ಬೆಂಗಳೂರಿನಲ್ಲಿ ಜೀವನ ವೆಚ್ಚ ಅತಿ ಕಡಿಮೆಯೇನೂ ಇಲ್ಲ.
ಬೀರು, ಬರ್ಗರ್ರು ಇಲ್ಲಿ ತುಟ್ಟಿ : ಸನ್ ಮೈಕ್ರೋ ಸಿಸ್ಟಂಸ್‌ನ ಮಾರಾಟ ವಿಭಾಗದ ನಿರ್ದೇಶಕ ವಿಶಾಲ್ ಧೂಪರ್ ಬೆಂಗಳೂರಿನ ಕೆಲವು ದರಗಳನ್ನು ಇತರೆ ದೇಶದ ನಗರಿಗಳ ದರದೊಂದಿಗೆ ಹೋಲಿಸಿ, ಇದು ಅಗ್ಗಾತಿ ಅಗ್ಗ ನಗರಿ ಖಂಡಿತ ಅಲ್ಲ ಎನ್ನುತ್ತಾರೆ. ಅವರ ಪ್ರಕಾರ- ಥೈಲ್ಯಾಂಡ್, ಮಲೇಷಿಯಾ, ಇಂಡೋನೇಷಿಯಾ, ಆಸ್ಟ್ರೇಲಿಯಾ, ಅಮೆರಿಕ ಮತ್ತು ಸಿಂಗಪೂರ್ ದೇಶಗಳಲ್ಲಿನ ನಗರಗಳ ಪಂಚಾತಾರಾ ಹೊಟೇಲುಗಳಲ್ಲಿನ ದರಕ್ಕಿಂತ ಬೆಂಗಳೂರಿನ ಪಂಚತಾರಾ ಹೊಟೇಲುಗಳಲ್ಲಿನ ದರ ಹೆಚ್ಚು.
ತೆರಿಗೆಯ ಕಾರಣ ಬೆಂಗಳೂರಲ್ಲಿ ಕಾರನ್ನು ಕೊಂಡರೆ ತಗಲುವ ವೆಚ್ಚ ಇತರೆ ದೇಶಗಳ ನಗರಗಳಿಗಿಂತ ಹೆಚ್ಚು. ಸಿಂಗಪೂರ್‌ನಲ್ಲಿ ಒಂದು ಬರ್ಗರ್ ಬೆಲೆ 5 ಡಾಲರ್. ಅಮೆರಿಕಾದಲ್ಲಿ 2 ಡಾಲರ್. ಬೆಂಗಳೂರಲ್ಲೂ ಇದಕ್ಕಿಂತ ಅಗ್ಗದ ಬೆಲೆಗೆ ಬರ್ಗರ್ ಸಿಗುವುದಿಲ್ಲ. ಬೆಂಗಳೂರಿನ ಪಂಚತಾರಾ ಹೊಟೇಲುಗಳಲ್ಲಿ ಬಿಯರ್ ಬೆಲೆಯೂ ಬೇರೆ ದೇಶಗಳ ಹೊಟೇಲುಗಳಿಗಿಂತ ಹೆಚ್ಚಾಗೇ ಇದೆ.
ಕೋಲ್ಕತಾ, ಪುಣೆ ಹಾಗೂ ಚೆನ್ನೈನಲ್ಲಿನ ಜೀವನ ನಿರ್ವಹಣಾ ವೆಚ್ಚ ಬೆಂಗಳೂರಿಗಿಂತ ಕಡಿಮೆಯಾಗೇ ಇದೆ. ಹೀಗಿರುವಾಗ ಜಗತ್ತಿನಲ್ಲೇ ಚೀಪೆಸ್ಟ್ ಸಿಟಿ ಅನ್ನೋದು ಹೇಗೆ ಸ್ವಾಮಿ ಎಂಬುದು ಒಟ್ಟಾರೆ ಐಟಿ ಪರಿಣತರ ಅಭಿಪ್ರಾಯ. ಆದರೆ ಮರ್ಸರ್ ಪ್ರಕಾರ ಬೆಂಗಳೂರು ಖಂಡಿತ ಅಗ್ಗಾತಿ ಅಗ್ಗ ನಗರಿ. ಇದಕ್ಕೆ ನೀವೇನಂತೀರಿ ?
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications