‘ಕೇಂದ್ರ ಸಂಸ್ಕೃತಿ ಇಲಾಖೆ ಪ್ರೀತ್ಯರ್ಥ ಮಂಗಳೂರು ವಿವಿಯಲ್ಲಿ ಜ್ಯೋತಿಷ್ಯ’
ಮಂಗಳೂರು : ವಿಶ್ವವಿದ್ಯಾಲಯ ಪಾಠಪಟ್ಟಿಯಲ್ಲಿ ಜ್ಯೋತಿಷ್ಯವನ್ನು ಅಳವಡಿಸುವ ಕುರಿತು ರಾಜ್ಯದಲ್ಲಿ ಪರವಿರೋಧ ಚರ್ಚೆಗಳನ್ನು ನಡೆಯುತ್ತಿರುವಾಗಲೇ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಜ್ಯೋತಿಷ್ಯ ಕೋರ್ಸನ್ನು ಆರಂಭಿಸುವುದಾಗಿ ಉಪಕುಲಪತಿ ಎಸ್. ಗೋಪಾಲ್ ಪ್ರಕಟಿಸಿದ್ದರು. ಕಳೆದೆರಡು ತಿಂಗಳಿನಿಂದ ಈ ಬಗ್ಗೆ ಯಾವುದೇ ವಿವಾದಗಳು ಕಾಣಿಸಿಲ್ಲವಾದರೂ, ಶನಿವಾರ ಜ್ಯೋತಿಷ್ಯ ಕೋರ್ಸು ಅಳವಡಿಕೆಯ ವಿರುದ್ಧ ಸಿಂಡಿಕೇಟ್ ಹಾಗೂ ಸೆನೆಟ್‌ನ ಮಾಜಿ ಸದಸ್ಯ ಎಸ್. ಜಿ. ಚೆಂಗಪ್ಪ ದನಿಯೆತ್ತಿದ್ದಾರೆ.
ತಮ್ಮ ಆರು ವರ್ಷಗಳ ಅವಧಿಯಲ್ಲಿ ಉಪಕುಲಪತಿಗಳು ಶಿಕ್ಷಣವನ್ನು ವಾಣಿಜ್ಯೀಕರಣ ಮಾಡುತ್ತಿದ್ದಾರೆ. ಅದರಲ್ಲಿ ಜ್ಯೋತಿಷ್ಯ ಕೋರ್ಸ್ ಅಳವಡಿಕೆಯ ಪ್ರಯತ್ನವೂ ಒಂದಾಗಿದೆ ಎಂದು ಚೆಂಗಪ್ಪ ಆಪಾದಿಸಿದ್ದಾರೆ.
ಉಪಕುಲಪತಿ ಹುದ್ದೆಯಲ್ಲಿ ಗೋಪಾಲ್ ಅವರ ಎರಡನೇ ಅವಧಿ ಮುಗಿಯುತ್ತಿದ್ದಂತೆಯೇ ಅವರಿಂದಾಗಿ ಬಡ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಎಷ್ಟು ಅನನುಕೂಲವಾಗಿದೆ ಎಂಬುದು ಬೆಳಕಿಗೆ ಬರುತ್ತಿದೆ ಎಂದು ಚೆಂಗಪ್ಪ ಉದಾಹರಣೆ ಸಮೇತ ಖಂಡಿಸಿದರು.
ವಿವಿಯಲ್ಲಿ ಎಂಬಿಎ ಮತ್ತು ಎಂಸಿಎ ಪೇಮೆಂಟ್ ಸೀಟುಗಳು ಆರಂಭವಾಗಿದ್ದು ಇತರ ಕೋರ್ಸುಗಳೂ ಇದೇ ಪದ್ಧತಿಯನ್ನು ಅನುಸರಿಸಲು ಪ್ರಯತ್ನಿಸುತ್ತಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಂದ ಶಿಕ್ಷಣದ ಹಕ್ಕು ಕಸಿದುಕೊಂಡಂತಾಗಿದೆ. ಇವೆಲ್ಲದರ ಜೊತೆಗೆ ಜ್ಯೋತಿಷ್ಯ ಕೋರ್ಸು ಆರಂಭಿಸುವ ಬಗ್ಗೆ ಆಸಕ್ತಿ ತೋರಿಸುವ ಮೂಲಕ ಉಪಕುಲಪತಿಗಳು ಕೇಂದ್ರಸಂಸ್ಕೃತಿ ಇಲಾಖೆಯನ್ನು ತೃಪ್ತಿಪಡಿಸ ಹೊರಟಿದ್ದಾರೆ ಎಂದು ಚೆಂಗಪ್ಪ ಹೇಳಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications