ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರನಾಥದಲ್ಲಿ ನಗಲಿರುವ ವಿಶ್ವದ ಅತಿ ಎತ್ತರದ ಬುದ್ಧ ಪ್ರತಿಮೆ

By Staff
|
Google Oneindia Kannada News

ಲಕ್ನೋ : ವಿಶ್ವದ ಅತ್ಯಂತ ಎತ್ತರದ ಬುದ್ಧ ಪ್ರತಿಮೆಯ ನೀಲನಕ್ಷೆಯನ್ನು ಉತ್ತರ ಪ್ರದೇಶ ಸರ್ಕಾರ ಅಂತಿಮಗೊಳಿದೆ. ಈ ಪ್ರತಿಮೆ ಸಾರನಾಥದಲ್ಲಿ ತಲೆಯೆತ್ತಿ ನಿಲ್ಲಲಿದೆ.

ತಮ್ಮ ಆರು ವರ್ಷಗಳ ಅವಧಿಯಲ್ಲಿ ಉಪಕುಲಪತಿಗಳು ಶಿಕ್ಷಣವನ್ನು ವಾಣಿಜ್ಯೀಕರಣ ಮಾಡುತ್ತಿದ್ದಾರೆ. ಅದರಲ್ಲಿ ಜ್ಯೋತಿಷ್ಯ ಕೋರ್ಸ್‌ ಅಳವಡಿಕೆಯ ಪ್ರಯತ್ನವೂ ಒಂದಾಗಿದೆ ಎಂದು ಚೆಂಗಪ್ಪ ಆಪಾದಿಸಿದ್ದಾರೆ.

ಇತ್ತೀಚೆಗಷ್ಟೇ ಆಪ್ಘಾನಿಸ್ತಾನದ ಬಮಿಯಾನ್‌ನಲ್ಲಿ ವಿಶ್ವದ ಅತಿ ಎತ್ತರದ ಬುದ್ಧ ಪ್ರತಿಮೆಯನ್ನು ತಾಲಿಬಾನ್‌ ಮಿಲಿಟರಿ ಆಡಳಿತ ನಾಶ ಮಾಡಿತ್ತು . ಇದೀಗ ಅಂತದೇ ಪ್ರತಿಮೆ ಉತ್ತರ ಪ್ರದೇಶದ ಸಾರನಾಥದಲ್ಲಿ ರೂಪುಗೊಳ್ಳಲಿದ್ದು , ಬಮಿಯಾನದಲ್ಲಿ ನಾಶಗೊಂಡ ಬುದ್ಧ ಸಾರನಾಥದಲ್ಲಿ ನಗಲಿದ್ದಾನೆ.

ಹೈದರಾಬಾದ್‌ನ ಹುಸೇನ್‌ ಸಾಗರದಲ್ಲಿರುವ ಮಹಾವೀರ ಪ್ರತಿಮೆಯ ಶಿಲ್ಪಿ ಗಣಪತಿ ಸ್ಥಪತಿ ಅವರ ಮುಂದಾಳತ್ವದಲ್ಲಿ ಸಾರನಾಥ ಬುದ್ಧ ಪ್ರತಿಮೆ ರೂಪುಗೊಳ್ಳಲಿದೆ. ಮುಸ್ಲಿಂ ಮೂಲಭೂತವಾದಿಗಳಿಂದ ಆಪ್ಘಾನಿಸ್ತಾನದಲ್ಲಿ ನಾಶಗೊಂಡ ಬುದ್ಧ ಪ್ರತಿಮೆ ಸದ್ಯದಲ್ಲಿಯೇ ಸಾರನಾಥದಲ್ಲಿ ಸಾಕಾರಗೊಳ್ಳಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ರಾಜನಾಥ್‌ ಸಿಂಗ್‌ ಘೋಷಿಸಿದ್ದಾರೆ. ಚುನಾರ್‌ ಶಿಲ್ಪವನ್ನು ಬುದ್ಧ ಪ್ರತಿಮೆ ಕೆತ್ತನೆಗೆ ಬಳಸಲಾಗುವುದು ಎಂದು ರಾಜ್ಯ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶೈಲೇಶ್‌ ಕೃಷ್ಣ ತಿಳಿಸಿದ್ದಾರೆ.

ಪ್ರಸ್ತುತ ತಿರುವನಂತಪುರದಲ್ಲಿ ನ 120 ಅಡಿಗಳ ಮೂರ್ತಿ ದೇಶದ ಅತ್ಯಂತ ಎತ್ತರದ ಮೂರ್ತಿ ಎನ್ನುವ ಅಗ್ಗಳಿಕೆಗೆ ಪಾತ್ರವಾಗಿದ್ದು , ಸಾರನಾಥದಲ್ಲಿನ ಪ್ರತಿಮೆ 180 ಅಡಿ ಎತ್ತರ ಇರುವುದು. ಲಕ್ನೋ ಕಲಾ ಕಾಲೇಜಿನ ಶಿಕ್ಷಕರು ಹಾಗೂ ಶಿಲ್ಪಿಗಳು ಕೂಡ ಬುದ್ಧ ಪ್ರತಿಮೆ ಕೆತ್ತನೆಯಲ್ಲಿ ಪಾಲ್ಗೊಳ್ಳುವರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X