Get Updates
Get notified of breaking news, exclusive insights, and must-see stories!

ವೀರಪ್ಪನ್‌ನನ್ನು ಬಂಧಿಸಿ ಶಿಕ್ಷಿಸಲು ಡಾ.ರಾಜ್‌ ಪುತ್ರರ ಆಗ್ರಹ

ಬೆಂಗಳೂರು : ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪನ್‌ ಅಪಹರಿಸಿ ವರ್ಷವೇ ಕಳೆದರೂ, ಅಪಹರಣಕಾರನ ಬಂಧನ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಡಾ. ರಾಜ್‌ ಅಭಿಮಾನಿ ಸಂಘದವರು, ರಾಜ್‌ ಅಪಹರಣವಾಗಿದ್ದ ಭೀಮನ ಅಮಾವಾಸ್ಯೆ ದಿನವನ್ನು ಕರಾಳದಿನವನ್ನಾಗಿ ಆಚರಿಸಿದರು.

ಮೈಸೂರು ಬ್ಯಾಂಕ್‌ ವೃತ್ತದ ಬಳಿ ಶುಕ್ರವಾರ ನಡೆದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್‌ ಪುತ್ರರಾದ ಪುನೀತ್‌ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ನರಹಂತಕನನ್ನು ಕೂಡಲೇ ಬಂಧಿಸಿ ಉಗ್ರವಾಗಿ ಶಿಕ್ಷಿಸುವಂತೆ ಸರಕಾರವನ್ನು ಒತ್ತಾಯಿಸಿದರು.

ಕ್ಷಮಾದಾನ - ಶರಣಾಗತಿ ಸರಕಾರಕ್ಕೆ ಬಿಟ್ಟ ವಿಷಯ ಎಂದ ಅವರು, ಕಳೆದ ವರ್ಷದ ಘಟನೆಯನ್ನು ನೆನೆಸಿಕೊಂಡರೇ ಮೈ ಜುಂ ಎನ್ನುತ್ತದೆ ಎಂದರು. ನೂರಾರು ಸಂಖ್ಯೆಯಲ್ಲಿದ್ದ ರಾಜ್‌ ಅಭಿಮಾನಿಗಳು ವೀರಪ್ಪನ್‌ ಭೂತ ದಹನ ಮಾಡಿ, ಕಾಡುಗಳ್ಳನ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕರಾಳ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಜ್‌ ಅಭಿಮಾನಿಗಳ ಸಂಘದ ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೆ.ಸಿ.ಎನ್‌. ಚಂದ್ರಶೇಖರ್‌, ಮೊದಲಾದವರು ಪಾಲ್ಗೊಂಡಿದ್ದರು. ಅಭಿಮಾನಿಗಳು ಇಲ್ಲಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನೂ ಸಲ್ಲಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+