Get Updates
Get notified of breaking news, exclusive insights, and must-see stories!

ವಿದ್ಯುತ್‌ ಬಳಕೆದಾರರಿಗೆ ಸಬ್ಸಿಡಿ ನೀಡುವುದು ಸಾಧ್ಯವಿಲ್ಲ : ಕೃಷ್ಣ

ಬೆಂಗಳೂರು : ವಿದ್ಯುತ್‌ ಬಳಕೆದಾರರಿಗೆ ಇನ್ನು ಮುಂದೆ ಯಾವುದೇ ಸಬ್ಸಿಡಿ ನೀಡಲು ಸಾಧ್ಯವಿಲ್ಲ , ಇದು ಸರಕಾರಕ್ಕೆ ಭಾರಿ ಹೊರೆಯಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹೇಳಿದ್ದಾರೆ. ವಿದ್ಯುತ್‌ ವಲಯಕ್ಕೆ 2,800 ಕೋಟಿ ರುಪಾಯಿ ಸಬ್ಸಿಡಿಯನ್ನು ಸರಕಾರ ನೀಡಿದೆ. ಎಷ್ಟು ದಿನ ಈ ಸಬ್ಸಿಡಿ ಹೊರೆ ಹೊರಲು ಸಾಧ್ಯ, ಈಗ ಸಬ್ಸಿಡಿಗೆ ಕೊನೆ ಹೇಳುವ ಕಾಲ ಸನ್ನಿಹಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ವಿದ್ಯುತ್‌ ನಿಗಮದ 31ನೇ ಸಂಸ್ಥಾಪನಾ ದಿನದ ಅಂಗವಾಗಿ ಹೊಟೆಲ್‌ ಏಟ್ರಿಯಾದಲ್ಲಿ ಏರ್ಪಡಿಸಲಾಗಿದ್ದ, ವಿದ್ಯುತ್‌ ಉತ್ಪಾದನೆ - ಜಾಗತಿಕ ಧೋರಣೆ - ಪರಿವರ್ತನೆ ನಿರ್ವಹಣೆ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಗುಣಮಟ್ಟದ ವಿದ್ಯುತ್ತನ್ನು ಸಮರ್ಪಕ ದರದಲ್ಲಿ ನೀಡಲು ಸಬ್ಸಿಡಿ ಅಗತ್ಯವಿದೆಯೇ ಎಂಬ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ರಚನೆ ಆದ ಮೇಲೆ ಎಲ್ಲ ರೀತಿಯ ಸಬ್ಸಿಡಿ ರದ್ದು ಪಡಿಸಬೇಕು ಎಂದು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮಕ್ಕೆ ಸೂಚಿಸಲಾಗಿದೆ. ಈಹೊತ್ತು ರಾಜ್ಯದಲ್ಲಿ ಒಟ್ಟು 70 ಲಕ್ಷ ಗ್ರಾಹಕರಿದ್ದಾರೆ ಎಂದು ಕರ್ನಾಟಕ ವಿದ್ಯುತ್‌ ನಿಗಮದ ಅಧ್ಯಕ್ಷರೂ ಆಗಿರುವ ಕೃಷ್ಣ ತಿಳಿಸಿದರು.

ಕರ್ನಾಟಕ ವಿದ್ಯುತ್‌ ನಿಗಮಕ್ಕೆ ಮುಂದಿನ 5 -6 ವರ್ಷಗಳಲ್ಲಿ ಹೊಸ ವಿದ್ಯುತ್‌ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಮತಿ ನೀಡಲಾಗಿದೆ. ಈ ಗುರಿಸಾಧನೆಗೆ ಎಲ್ಲ ಸಿಬ್ಬಂದಿಯೂ ಸಮರ್ಪಣಾ ಭಾವದಿಂದ ನೆರವಾಗಬೇಕು ಎಂದರು. ಗ್ರಾಹಕರಿಗೆ ತಾವು ಬಳಸುತ್ತಿರುವ ವಿದ್ಯುತ್‌ಗೆ ಸಮರ್ಪಕ ದರ ನೀಡುತ್ತಿದ್ದೇವೆ ಎಂಬ ಭಾವನೆ ಬರುವಂತೆ ಅರಿವು ಮೂಡಿಸಬೇಕು ಎಂದು ಕೃಷ್ಣ ತಿಳಿಸಿದರು.

ಬೆಂಗಳೂರು - ಮೈಸೂರು ರಸ್ತೆಯ ಬಿಡದಿ, ಬಳ್ಳಾರಿಯ ವಿಜಯನಗರ, ರಾಯಚೂರಿನ ಥರ್ಮಲ್‌ ವಿದ್ಯುತ್‌ನ 7ನೇ ಘಟಕಗಳಲ್ಲಿ ಈ ವರ್ಷಾಂತ್ಯದಲ್ಲೇ ವಿದ್ಯುತ್‌ ಉತ್ಪಾದನೆ ಆರಂಭವಾಗಲಿದೆ. ಇದರಿಂದ ರಾಜ್ಯದ ವಿದ್ಯುತ್‌ ಕ್ಷಾಮ ಕೊಂಚಮಟ್ಟಿಗೆ ತಗ್ಗಲಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಿದ್ಯುತ್‌ ಸೇವಾ ಸೌಲಭ್ಯಗಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ವಿ.ಜೆ. ವರ್ಮಾ ಅವರು, ರಾಷ್ಟ್ರದ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ ಶೇ.40ರಷ್ಟು ನೀರಾವರಿಗೆ ಬಳಕೆಯಾಗುತ್ತಿದೆ. ಮುಂದಿನ 10 ವರ್ಷಗಳ ಅವಧಿಯಲ್ಲಿ ವಿದ್ಯುತ್‌ ಬೇಡಿಕೆ 10 ಸಾವಿರ ಮೆಗಾವ್ಯಾಟ್‌ಗೆ ಏರಲಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಇಂಧನ ಮತ್ತು ವಿದ್ಯುತ್‌ ಖಾತೆ ರಾಜ್ಯ ಸಚಿವ ವೀರಕುಮಾರ ಪಾಟೀಲ್‌, ಇಂಧನ ಇಲಾಖೆ ಕಾರ್ಯದರ್ಶಿ ಕೆ.ಪಿ. ಪಾಂಡೆ, ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿ ರಾಮಲಿಂಗಂ ಮೊದಲಾದವರು ಪಾಲ್ಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+