ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗರಿಗೆ ಮನೆ ಹತ್ತಿರದಲ್ಲೇ ಕೆಎಸ್‌ಆರ್‌ಟಿಸಿ ಬಸ್‌ ಹತ್ತುವ ಭಾಗ್ಯ

By Staff
|
Google Oneindia Kannada News

ಬೆಂಗಳೂರು : ಖಾಸಗಿಯವರೊಂದಿಗೆ ತುರುಸಿನ ಸ್ಪರ್ಧೆ ಎದುರಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಗರದ ವಿವಿಧ ಜಾಗೆಗಳಿಂದ ಪ್ರಯಾಣಿಕರನ್ನು ಪಿಕ್‌ಅಪ್‌ ಮಾಡುವ ಹೊಸ ಸವಲತ್ತನ್ನು ಜಾರಿಗೆ ತಂದಿದೆ. ಅಂದರೆ, ಮನೆ ಹತ್ತಿರದ ನಿಲ್ದಾಣದಿಂದಲೇ ಪ್ರಯಾಣಿಕರನ್ನು ಹೆಕ್ಕುವುದು. ಬೆಂಗಳೂರಿಂದ 28 ಪ್ರಮುಖ ಪ್ರದೇಶಗಳಿಗೆ ಸಂಚರಿಸುವ ಬಸ್‌ಗಳು ಈ ಸೌಕರ್ಯಕ್ಕೆ ಒಳಪಟ್ಟಿವೆ. ದಿನಗಳೆದಂತೆ ಈ ಸೌಕರ್ಯವನ್ನು ನಿಗಮ ವಿಸ್ತರಿಸಲಿದೆ.

ಸಾಮಾನ್ಯ ಗುತ್ತಿಗೆ ರೂಪದ ಮುಂಗಡ ಸೀಟು ಕಾಯ್ದಿರಿಸುವಿಕೆ ಹಾಗೂ ಮರುಪಾವತಿಗೆ ಅನುಕೂಲವಾಗುವಂತೆ ಬೆಂಗಳೂರು, ಮೈಸೂರು ಹಾಗೂ ಮಂಗಳೂರುಗಳಲ್ಲಿ ಏಕ ಗವಾಕ್ಷಿ ಪದ್ಧತಿಯನ್ನೂ ಜಾರಿಗೆ ತರಲಾಗಿದೆ. ಯಾವ ಯಾವ ಡಿಪೋಗಳಲ್ಲಿ ಎಷ್ಟೆಷ್ಟು ಬಸ್‌ಗಳಿವೆ, ಪ್ರಯಾಣಿಕರು ಯಾವ ಡಿಪೋಗೆ ಹತ್ತಿರವಾಗಿದ್ದಾರೆ ಎಂಬೆಲ್ಲಾ ವಿಷಯಗಳ ಬಗ್ಗೆ ಪೂರಾ ಮಾಹಿತಿಯುಳ್ಳ ಅಧಿಕಾರಿಯಾಬ್ಬರು ಈ ವ್ಯವಸ್ಥೆಯ ಸಂಯೋಜಕರಾಗಿರುತ್ತಾರೆ.

ಕೆಎಸ್‌ಆರ್‌ಟಿಸಿ ಬಸ್‌ ಬಾಡಿಗೆ ದರ ಇಂತಿದೆ
ಸಾಮಾನ್ಯ ಬಸ್‌- ಪ್ರತಿ ಕಿ.ಮೀ.ಗೆ 15 ರುಪಾಯಿ ಅಥವಾ ಒಂದು ದಿನಕ್ಕೆ ಕನಿಷ್ಠ 3,750 ರುಪಾಯಿ
ಸೆಮಿ ಡಿಲಕ್ಸ್‌- ಪ್ರತಿ ಕಿ.ಮೀ.ಗೆ 16 ರುಪಾಯಿ ಅಥವಾ ಒಂದು ದಿನಕ್ಕೆ ಕನಿಷ್ಠ 4000 ರುಪಾಯಿ
ಡಿಲಕ್ಸ್‌ - ಪ್ರತಿ ಕಿ.ಮೀ.ಗೆ 18 ರುಪಾಯಿ ಅಥವಾ ಒಂದು ದಿನಕ್ಕೆ ಕನಿಷ್ಠ 4500 ರುಪಾಯಿ

ಸೂಪರ್‌ ಡಿಲಕ್ಸ್‌- ಪ್ರತಿ ಕಿ.ಮೀ.ಗೆ 20 ರುಪಾಯಿ ಅಥವಾ ಒಂದು ದಿನಕ್ಕೆ ಕನಿಷ್ಠ 5000 ರುಪಾಯಿ

ಹೊಸ ಸೌಕರ್ಯ ಇರುವ ಜಾಗೆಗಳು : ಜಯನಗರ 4ನೇ ಬ್ಲಾಕ್‌, ವಿಜಯನಗರ, ಶಿವಾಜಿನಗರ, ಕೋರಮಂಗಲ, ವಿಲ್ಸನ್‌ ಗಾರ್ಡನ್‌, ಜೆ.ಪಿ.ನಗರ, ಚಾಮರಾಜಪೇಟೆ, ಕಲಾಸಿಪಾಳ್ಯ, ಆರ್‌.ಟಿ.ನಗರ, ಕತ್ರಿಗುಪ್ಪೆ, ಜೀವನ ಭೀಮಾ ನಗರ ಮೊದಲಾದವು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X