Get Updates
Get notified of breaking news, exclusive insights, and must-see stories!

ಪ್ರಥಮ ತ್ರೆೃಮಾಸಿಕ : ವಿಪ್ರೋ ಲಾಭದಲ್ಲಿ97 ಪ್ರತಿಶತ ಹೆಚ್ಚಳ

ಬೆಂಗಳೂರು : ಭಾರತದ 3ನೇ ಅತಿ ದೊಡ್ಡ ಸಾಫ್ಟ್‌ವೇರ್‌ ಕಂಪನಿ ವಿಪ್ರೋ ಪ್ರಸಕ್ತ ವಿತ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ 97 ಪ್ರತಿಶತ ಹೆಚ್ಚಳ ಸಾಧಿಸಿದೆ. ಕಂಪನಿ ಮಾಡಿರುವ ನಿವ್ವಳ ಲಾಭ 214 ಕೋಟಿ ರುಪಾಯಿ.

ಕಳೆದ ವಿತ್ತ ವರ್ಷದ ಮೊದಲ ತ್ರೆೃಮಾಸಿಕದ ದುಪ್ಪಟ್ಟಿನಷ್ಟು ಲಾಭವನ್ನು ಕಂಪನಿ ಗಳಿಸಿದೆ. ಒಟ್ಟು ವಹಿವಾಟಿನಲ್ಲೂ ಪ್ರತಿಶತ 28ರಷ್ಟು ಹೆಚ್ಚಳವಾಗಿದ್ದು, ಮೊದಲ ತ್ರೆೃಮಾಸಿಕದಲ್ಲಿ 798 ಕೋಟಿ ರುಪಾಯಿ ಬೆಲೆಯ ಸಾಫ್ಟ್‌ವೇರ್‌ ಮಾಲನ್ನು ಕಂಪನಿ ಮಾರಾಟ ಮಾಡಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಂಪನಿಯ ಅಧ್ಯಕ್ಷ ಅಜೀಂ ಪ್ರೇಂಜಿ, ಅಮೆರಿಕೆಯ ಆರ್ಥಿಕ ಹಿನ್ನಡೆಯಿಂದ ನಮ್ಮ ಮಾರುಕಟ್ಟೆಗೆ ಯಾವುದೇ ಹಾನಿಯುಂಟಾಗಿಲ್ಲ. ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕಂಪನಿ ಇನ್ನಷ್ಟು ಯಶಸ್ಸಿನ ದಾಪುಗಾಲು ಹಾಕಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+