ನಿಧಾನವಾಗಿ ಸಾಯುತ್ತಿರುವ ಏಷ್ಯಾದ ನಗರಗಳ ಬಗ್ಗೆ ವಿಶ್ವಸಂಸ್ಥೆ ಕಳವಳ
ಬೆಂಗಳೂರು : ಮಿತಿ ಮೀರಿದ ವಾಯು ಮಾಲಿನ್ಯದಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಏಷ್ಯಾದ ನಗರಗಳು ನಿಧಾನವಾಗಿ ಸಾಯುತ್ತಿದ್ದು, ಗ್ಯಾಸೋಲಿನ್ ಬಳಸಿ ಓಡಿಸುವ ವಾಹನಗಳು ಈ ನಗರಗಳಲ್ಲಿ ಅತಿ ಹೆಚ್ಚು ವಾಯುಮಾಲಿನ್ಯ ಉಂಟುಮಾಡುತ್ತಿವೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.
ಬೆಂಗಳೂರಿನಲ್ಲಿ ತ್ರಿಚಕ್ರ ವಾಹನಗಳನ್ನು ಕಾನೂನು ಬಾಹಿರವಾಗಿ ಎಲ್‌ಪಿಜಿ ಬಳಸುವಂತೆ ಮಾಡಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ಆದರೆ, ಈ ಆಪಾದನೆಯನ್ನು ನಿರಾಕರಿಸಿರುವ ಸಾರಿಗೆ ಆಯುಕ್ತ ತಿಮ್ಮೇಗೌಡ ಅವರು ವಾಹನಗಳಿಗೆ ಎಲ್‌ಪಿಜಿ ಬಳಕೆ ಬೆಂಗಳೂರಿನಲ್ಲಿ ಕಾನೂನು ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್‌ಪಿಜಿಯನ್ನು ಇಂಧನ ಮಾರಾಟ ಸಂಸ್ಥೆಗಳು ವಿಶೇಷ ಕಂಟೈನರ್‌ಗಳಲ್ಲಿ ನೀಡುವ ವ್ಯವಸ್ಥೆ ಮಾಡಬೇಕು. ಎಲ್‌ಪಿಜಿ ಬಳಕೆಗೆ ಅನುಕೂಲವಾಗುವಂತೆ ಆಟೋರಿಕ್ಷಾ, ಇಂಧನ ಮಾರಾಟ ಕಂಪೆನಿಗಳು, ಮತ್ತು ಉತ್ಪನ್ನ ಕಂಪೆನಿಗಳೊಂದಿಗೆ ಸದ್ಯದಲ್ಲೇ ಮಾತುಕತೆ ನಡೆಸುವುದಾಗಿ ತಿಮ್ಮೇಗೌಡರು ಹೇಳಿದ್ದಾರೆ. ಅವರು ವಿಶ್ವಬ್ಯಾಂಕ್ ವರದಿಗೆ ಪ್ರತಿಕ್ರಿಯಿಸುತ್ತಾ ಈ ಹೇಳಿಕೆ ನೀಡಿದರು.
ದಕ್ಷಿಣ ಏಷ್ಯಾದ ಮಹಾನಗರಗಳಲ್ಲಿ ವಾಹನಗಳಿಂದಾಗುತ್ತಿರುವ ವಾಯು ಮಾಲಿನ್ಯವನ್ನು ತಡೆಗಟ್ಟುವ ಉಪಾಯಗಳನ್ನೂ ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.
ಅವುಗಳೆಂದರೆ-
- ವಾಹನಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ಮತ್ತು ಉತ್ತಮ ಲ್ಯೂಬ್ರಿಕೆಂಟ್ ಬಳಕೆ
- ದೆಹಲಿಯಲ್ಲಿ 2 ಟಿ ಆಯಿಲನ್ನು 1998 ಡಿಸೆಂಬರ್‌ನಲ್ಲಿಯೇ ನಿಷೇಧಿಸಿತ್ತು. ಆದರೆ ಬೆಂಗಳೂರಿನಲ್ಲಿ ಇದು ಇನ್ನೂ ಬಳಕೆಯಲ್ಲಿದೆ. ಸಾರಿಗೆ ಇಲಾಖೆ ಇಂತಹ ವಿಷಯಗಳ ಮೇಲೆ ನಿಯಂತ್ರಣ ಹೊಂದಿರಬೇಕು.
- ಸೂಚಿಸಿರುವ ಇಂಧನಗಳನ್ನೇ ವಾಹನಗಳು ಬಳಸುವುದು
- ಸಾಧ್ಯವಾದಷ್ಟೂ ಹಳೆಯ ಗಾಡಿಗಳನ್ನು ಬಳಸುವುದಿರುವುದು ಮತ್ತು ಅಂತಹವರಿಗೆ ತೆರಿಗೆ ಕಟ್ಟುವಾಗ ರಿಯಾಯಿತಿ ನೀಡುವುದು
- ಸಾರ್ವಜನಿಕರಲ್ಲಿ ವಾಯುಮಾಲಿನ್ಯ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವುದು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications