ಕಣ್ಣೊಡೆವ ಮುನ್ನವೇ ಕರಕಲಾಗುತ್ತಿರುವ ಬೀಜ
ಮುಖಪುಟ

ಕಣ್ಣೊಡೆವ ಮುನ್ನವೇ ಕರಕಲಾಗುತ್ತಿರುವ ಬೀಜ
ಹೊಟ್ಟೆಗೆ ಹಿಟ್ಟನ್ನು ಸಂಪಾದಿಸಿಕೊಳ್ಳಲು ಕಷ್ಟವಾಗುತ್ತಿರುವ ಹೊತ್ತಿನಲ್ಲಿ ಜಾನುವಾರುಗಳಿಗೆ ಮೇವನ್ನು ಎಲ್ಲಿಂದ ತರುವುದು ? ಬರಗಾಲದಿಂದ ತತ್ತರಿಸಿರುವ ಹುಬ್ಬಳ್ಳಿ, ಕೊಪ್ಪಳ, ಗದಗ, ಗಂಗಾವತಿ ಸುತ್ತುಮುತ್ತಲಿನ ಜನತೆ ಜಾನುವಾರುಗಳನ್ನು ಬಿಕರಿ ಮಾಡಲು ಪ್ರಾರಂಭಿಸಿದ್ದಾರೆ. ಆ ಜಾನುವಾರುಗಳು ಗೋವಾದ ಕಸಾಯಿಖಾನೆ ಸೇರುತ್ತಿವೆ. ಮುದ್ದಿನಿಂದ ಸಾಕಿದ ದನ ಕರುಗಳನ್ನು ಕೈಯ್ಯಾರೆ ಕಸಾಯಿಖಾನೆಗೆ ಕೊಡಲಾಗದವರು ಜಾನುವಾರುಗಳ ಕುತ್ತಿಗೆಯಿಂದ ಹಗ್ಗ ಬಿಚ್ಚಿ ಅವುಗಳ ಪಾಡಿಗೆ ಬಿಟ್ಟು ಬಿಡುತ್ತಿದ್ದಾರೆ. ಇತ್ತ ಬರ ಪರಿಹಾರ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರ ಕೇಂದ್ರದ ನೆರವಿನತ್ತ ಮುಖ ಮಾಡಿದೆ.ಕರಾವಳಿಯ ಹೊರತಾಗಿ ರಾಜ್ಯದ ಬಹುತೇಕ ಜಿಲ್ಲೆಗಳು ಕುಡಿಯುವ ನೀರಿಗೂ ಸಂಚಕಾರ ಎನ್ನುವ ಸಂಕಷ್ಟ ಎದುರಿಸುತ್ತಿವೆ. ಅತ್ತ ಒರಿಸ್ಸಾ , ಕೇರಳಗಳಲ್ಲಿ ನದಿಗಳು ಹುಚ್ಚು ರಭಸದಿಂದ ಹರಿಯುತ್ತಿದ್ದರೆ, ಕರ್ನಾಟಕದ ಬಯಲುಸೀಮೆಯಲ್ಲಿ ಇಂಚು ಮಣ್ಣೂ ತೇವವಾಗದ ದುರಂತ.
ಈ ನಡುವೆ ಕಳೆದೊಂದು ವಾರದಲ್ಲಿ ಬಿದ್ದ ತುಂತುರಿಗೆ, ಹೊಂಚಿಕೊಂಡಿದ್ದ ಬೀಜವನ್ನು ಕೋಲಾರ, ತುಮಕೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ರೈತರು ಬಿತ್ತಿದ್ದಾರೆ. ಬೀಜ ಕಣ್ಣೊಡೆಯುವುದನ್ನೇ ದಿನವೂ ಕಾಯುತ್ತಿದ್ದಾರೆ. ಆದರೆ, ಮಳೆ ಮತ್ತೆ ಮುಖಮಾಡಿಲ್ಲ . ಕ್ಷಣದಿಂದ ಕ್ಷಣಕ್ಕೆ ಬೀಜ ಕರಕಲಾಗುತ್ತಿದೆ.
ಶುಕ್ರವಾರದ ಹವಾಹವಾ
ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲಗೊಂಡಿದೆ. ಉಳಿದಂತೆ ಕರಾವಳಿಯ ಹಲವೆಡೆ ಸಾಧಾರಣ ಮಳೆಬಿದ್ದಿದೆ.
ಮಳೆ ಪ್ರವರ :
ಆಗುಂಬೆ - 9 ಸೆಂಮೀ
ಭಾಗಮಂಡಲ, ಕಮ್ಮರಡಿ, ತಾಳಗುಪ್ಪ, ಕೊಲ್ಲೂರು- ತಲಾ 3 ಸೆಂಮೀ
ಧರ್ಮಸ್ಥಳ, ಬೆಳ್ತಂಗಡಿ, ಮಾಣಿ, ಸಿದ್ಧಾಪುರ, ಕುಂದಾಪುರ, ಮೂಡಬಿದರೆ, ಕಾರವಾರ, ಮಂಗಳೂರು ವಿಮಾನ ನಿಲ್ದಾಣ, ಪಣಂಬೂರು, ಶೃಂಗೇರಿ, ಹೊಸನಗರ ಹಾಗೂ ಮೂರ್ನಾಡು - ತಲಾ 2 ಸೆಂಮೀ.
ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ -
| ಜಲಾಶಯ | ಗರಿಷ್ಠ ಮಟ್ಟ | ಇಂದಿನಮಟ್ಟ |
| ಲಿಂಗನಮಕ್ಕಿ | 1819.00 | 1777. 25 |
| ಕಬಿನಿ | 2284.00 | 2277.30 |
| ಕೆಆರ್‌ಎಸ್ | 124.80 | 104.78 |
| ಹೇಮಾವತಿ | 2922.00 | 2910.79 |
| ತುಂಗಭದ್ರಾ | 1633.00 | 1617.11 |
| ಹಾರಂಗಿ | 2859.00 | 2858.75 |
| ಸುಪಾ | 1859.39 | 1736.05 |
| ವಾರಾಹಿ | 1950.00 | 1909.34 ಮುಖಪುಟ |
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications