Get Updates
Get notified of breaking news, exclusive insights, and must-see stories!

ಕಸ್ತೂರಿ ಮಾತ್ರೆ, ಭೃಂಗಾಮಲಕ ತೈಲ ಖ್ಯಾತಿಯ ಡಾ.ಸೀತಾರಾಂ ಇನ್ನಿಲ್ಲ

ಮೈಸೂರು : ಪ್ರಸಿದ್ಧ ಕಸ್ತೂರಿ ಮಾತ್ರೆ ತಯಾರಿಕೆ ಸಂಸ್ಥೆಯಾದ ಶ್ರೀ ಸೀತಾರಾಘವ ವೈದ್ಯಶಾಲೆಯ ಡಾ.ಪಿ.ಆರ್‌.ಸೀತಾರಾಂ(77) ಬುಧವಾರ ಹೃದಯಾಘಾತದಿಂದ ನಿಧನರಾದರು. ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಮೃತರು ಅಗಲಿದ್ದಾರೆ.

ವೈದ್ಯವಾರ್ತಾ ಪತ್ರಿಕೆಯ ಸಂಪಾದಕರಾಗಿ, ಕರ್ನಾಟಕ ಪ್ರಾದೇಶಿಕ ಆಯುರ್ವೇದ ಮಂಡಲ ಹಾಗೂ ಆಯುರ್ವೇದ ಪ್ರಚಾರ ಟ್ರಸ್ಟ್‌ನ ಅಧ್ಯಕ್ಷರಾಗಿ ಸೀತಾರಾಂ ಅಪಾರ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ಸಂಗೀತ ಕ್ಷೇತ್ರದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಅವರು, ಅನಂತಸ್ವಾಮಿ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು.

ತಮ್ಮ ತಾತ ವೆಂಕಟಾಚಲ ಪಂಡಿತ್‌ ಸ್ಥಾಪಿಸಿದ್ದ ಸೀತಾರಾಘವ ವೈದ್ಯಶಾಲೆಯನ್ನು ಮುಂದುವರಿಸಿಕೊಂಡು ಬಂದ ಅವರು, ತಮ್ಮ ಸಂಸ್ಥೆಯ ಪ್ರಸಿದ್ಧ ಉತ್ಪನ್ನಗಳಾದ ಕಸ್ತೂರಿ ಮಾತ್ರೆ ಹಾಗೂ ಭೃಂಗಾಮಲಕ ತೈಲದ ಕೀರ್ತಿಯನ್ನು ವಿದೇಶಗಳಿಗೂ ತಲುಪಿಸಿದ್ದರು. ಕಸ್ತೂರಿ ಮಾತ್ರೆ ಪಾಕಿಸ್ತಾನ ಹಾಗೂ ಶ್ರೀಲಂಕಾಕ್ಕೆ ಈಗಲೂ ರಫ್ತಾಗುತ್ತಿದೆ. ಮೃತರ ನಿಧನಕ್ಕೆ ಸಾಹಿತಿಗಳಾದ ಪ್ರೊ. ಎಚ್ಚೆಸ್ಕೆ, ಡಾ.ಎಂ.ಜಿ.ಆರ್‌. ಅರಸ್‌ ಹಾಗೂ ಶಾಸಕ ಗುರುಸ್ವಾಮಿ ಶೋಕ ಸೂಚಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+