Get Updates
Get notified of breaking news, exclusive insights, and must-see stories!

ಡಾ. ರಾಜ್‌ ಅಪಹರಣಕ್ಕೆ 1 ವರ್ಷ, ಬಿಡುಗಡೆಯಾಗಿ ನವಮಾಸ

*ಚಿತ್ರಗುಪ್ತ

ಬೆಂಗಳೂರು : ಇಂದು ಜುಲೈ 20 ಶುಕ್ರವಾರ, ಆಷಾಢ ಮಾಸ, ಕೃಷ್ಣ ಪಕ್ಷ ಅಮಾವಾಸ್ಯೆ. ಅದೂ ಭೀಮನ ಅಮಾವಾಸ್ಯೆ. ಭೀಮನ ಅಮಾವಾಸ್ಯೆ ಬಂದರೆ, ಕರ್ನಾಟಕದಲ್ಲಿ ಸಂಭ್ರಮವೋ ಸಂಭ್ರಮ. ಅದಕ್ಕೆ ಕಾರಣವೂ ಇದೆ.

ತವರಿಗೆ ಹೋದ ಹೆಂಡತಿ ನಾಳೆಯೇ ಬರುವಳೆಂಬ ನವವಿವಾಹಿತರ ತವಕ, ವಿರಹಗೀತೆಗೆ ಅಂತ್ಯ. ನಾನ್‌ವೆಜ್‌ ನಾಲಗೆಯ ಜಾತಿಗೆ ಸೇರಿದವರಾದರೆ ಹೊಟ್ಟೆತುಂಬ ಮಾಂಸದ ಊಟ , ಮದ್ಯ ಕುಡಿಯಬಹುದೆಂಬ ಆನಂದ. ಸಂಪ್ರದಾಯಸ್ಥ ಹಿಂದೂಗಳಾದರೆ ಆದರೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶ್ರಾವಣದ ತೋರಣ ಕಟ್ಟಿ ಸಂಭ್ರಮಿಸುವ ಋತು ಸಮೀಪಿಸಿದ ಸಂಭ್ರಮ. ಆದರೆ ಕಳೆದ ವರ್ಷದ ಭೀಮನ ಅಮಾವಾಸ್ಯೆ ಸ್ಮರಿಸಿದರೆ, ಕನ್ನಡಿಗರ ಮೈ ಜುಂ ಎನ್ನುತ್ತದೆ. ಕೆಲವರಿಗೆ ರೋಷ ಉಕ್ಕಿ ಹರಿದೀತು. ನಮ್ಮ ರಕ್ಷಣಾ ವ್ಯವಸ್ಥೆಯ ಬಗ್ಗೆ ಹಲವರಿಗೆ ಛೆಛೆ ಎನಿಸೀತು. !

ಏಕೆ ? ನಿಮಗೆ ನೆನಪಿರಬಹುದು.. .. ಕನ್ನಡದ ವರನಟ ಡಾ. ರಾಜ್‌ಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪನ್‌ ಅಪಹರಿಸಿದ್ದು, ಭೀಮನ ಅಮಾವಾಸ್ಯೆಯಂದೇ. ಇಂಗ್ಲಿಷ್‌ ಕ್ಯಾಲೆಂಡರ್‌ ರೀತ್ಯ ರಾಜ್‌ ಅಪಹರಣವಾದದ್ದು, ಜುಲೈ 30ರಂದು. ಹಿಂದೂ ಪಂಚಾಂಗದ ರೀತ್ಯ ಇಂದಿಗೆ ಒಂದು ವರ್ಷ.

ರಾಜ್‌ ಅಪಹರಣವಾಗಿ ಒಂದು ವರ್ಷವಾದರೂ, ಬಿಡುಗಡೆಯಾಗಿ 9 ತಿಂಗಳೇ ತುಂಬುತ್ತಾ ಬಂದಿದ್ದರೂ, ರಾಜ್‌ ಅಪರಣ ವಾದದ್ದು ಏಕೆ? ರಾಜ್‌ ಅಪಹರಣದ ಹಿಂದಿನ ಉದ್ದೇಶವೇನಿತ್ತು?, ರಾಜ್‌ ಬಿಡುಗಡೆ ಬೇಷರತ್ತಾಗಿ ಹೇಗಾಯ್ತು? ನಿಜವಾಗಿಯೂ ರಾಜ್‌ರನ್ನು ಬಿಡುಗಡೆ ಮಾಡಿಸಿದವರು ಯಾರು? ಎಂಬಿತ್ಯಾದಿ ಎಲ್ಲ ಪ್ರಶ್ನೆಗಳೂ ಪ್ರಶ್ನೆಗಳಾಗಿಯೇ ಉಳಿದಿವೆ.

ಕಂಬಾಲಪಲ್ಲಿ ನರಮೇಧ, ಗಡಿ ಪ್ರದೇಶದಲ್ಲಿ ಎಸ್‌ಟಿಎಫ್‌ ದೌರ್ಜನ್ಯ, ಟಾಡಾ ಬಂದಿಗಳ ಬಿಡುಗಡೆ, ತಿರುವಳ್ಳುವರ್‌ ಪ್ರತಿಮೆ, ತಮಿಳು ಕರ್ನಾಟಕದಲ್ಲಿ ದ್ವಿತೀಯ ಭಾಷೆಯಾಗಬೇಕು ಎಂಬಿತ್ಯಾದಿ ಬೇಡಿಕೆಗಳು ಹೇಗೆ ಬಂದವು? ಏಕೆ ಬಂದವು? ವೀರಪ್ಪನ್‌ ಹಿಂದೆ ಇದ್ದ ಕಾಣದ ಕೈ ಯಾವುದು ಎಂಬುದು ಇನ್ನೂ ನಿಗೂಢವಾಗೇ ಇದೆ.

ಕಹಿನೆನಪು : ಕಳೆದ ವರ್ಷ ಡಾ. ರಾಜ್‌ಕುಮಾರ್‌, ತಮ್ಮ ಹುಟ್ಟೂರಾದ ಗಾಜನೂರಿನ ತೋಟದ ಮನೆಯಲ್ಲಿ ಭೀಮನ ಅಮಾವಾಸ್ಯೆಯಂದು ತಲೆ ಮಾಂಸದ ಊಟ ಮಾಡಿ, ಟೀವಿಯಲ್ಲಿ ಚಲನಚಿತ್ರ ನೋಡುತ್ತಿದ್ದಾಗ, ಬರ ಸಿಡಿಲಿನಂತೆ ಎರಗಿದ ವೀರಪ್ಪನ್‌ ಹಾಗೂ ತಂಡದವರು, ರಾಜ್‌, ರಾಜ್‌ ಅವರ ಅಳಿಯ ಗೋವಿಂದರಾಜ್‌, ನಾಗೇಶ್‌ ಹಾಗೂ ನಾಗಪ್ಪ ಅವರುಗಳನ್ನು ತನ್ನ ಬೇಡಿಕೆಗಳ ಈಡೇರಿಕೆಗಾಗಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳಲು ಅಪಹರಿಸಿದ್ದ.

ರಾಜ್‌ ಬಿಡುಗಡೆ ಇಂದು, ನಾಳೆ ಎಂದು 108 ದಿನವೇ ಕಳೆಯಿತು. ಈ ಮಧ್ಯೆ ನಾಗಪ್ಪ ಮಾರಡಗಿ ಕಾಡಿನಿಂದ ಊರಿಗೆ ಓಡಿಬಂದರೆ, ಮತ್ತೊಮ್ಮೆ ರಾಜ್‌ ಬಿಡುಗಡೆಯಾಗುತ್ತಾರೆ ಎಂಬ ಬಲವಾದ ನಂಬಿಕೆಯ ಊಹಾ ಪೋಹಗಳ ನಡುವೆ ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+