Get Updates
Get notified of breaking news, exclusive insights, and must-see stories!

ಮಧುಮೇಹ ನಿವಾರಣೆಗೂ ಮೈಕ್ರೋಚಿಪ್ಸ್‌ : ಕಾಲ ದೂರವಿಲ್ಲ

ಬೆಂಗಳೂರು : ಬರಲಿದೆ ಮೋಡದಷ್ಟು ತೆಳುವಾದ ರಾಡಾರ್‌. ಶತ್ರು ಪಾಳಯದ ಶಸ್ತ್ರದೊಳಕ್ಕೆ ಗೊತ್ತೇ ಆಗದಂತೆ ಪ್ರವೇಶಿಸಿ, ಅದನ್ನು ನಿಷ್ಕಿೃಯಗೊಳಿಸುವಷ್ಟು ಶಕ್ತ ಇದು. ಅಷ್ಟೇ ಅಲ್ಲ, ಸೂಕ್ಷ್ಮಾತಿಸೂಕ್ಷ್ಮ ತಾಂತ್ರಿಕ ವಸ್ತುಗಳೂ ಮಾರುಕಟ್ಟೆಗೆ ಬರಲಿದ್ದು, ಮಧುಮೇಹದಿಂದ ಬಳಲುತ್ತಿರುವವರ ದೇಹದಲ್ಲಿ ಇವನ್ನಿರಿಸಿ, ರಕ್ತದಲ್ಲಿ ಸಕ್ಕರೆ ಅಂಶ ತೀರಾ ಕಡಿಮೆಯಾದಾಗ ತಂತಾನೇ ಇನ್ಸುಲಿನ್‌ ಸ್ರವಿಸುವಂತೆ ಮಾಡಬಹುದು. ಬೃಹತ್‌ ಸೇತುವೆಗೆ ಅಳವಡಿಸಿದರೆ ಬಿರುಕು ಬಂದಾಕ್ಷಣ ಅದನ್ನು ಪತ್ತೆ ಮಾಡಬಹುದು.

ಭಾರತೀಯ ವಿಜ್ಞಾನ ಮಂದಿರ ಸೇರಿದಂತೆ ಹಲವಾರು ಸಂಶೋಧನಾ ಸಂಸ್ಥೆಗಳು 100 ಕೋಟಿ ರುಪಾಯಿ ವೆಚ್ಚದ ಈ ಯೋಜನೆಯಲ್ಲಿ ತೊಡಗಿದ್ದಾರೆ. ಸ್ಮಾರ್ಟ್‌ ತಂತ್ರಜ್ಞಾನ ಎಂಬ ಹೆಸರಿನ ಈ ಯೋಜನೆಗೆ ಮುನ್ನಾ ಸಂಶೋಧನೆಗಳು ಚುರುಕಾಗಿ ನಡೆದಿದ್ದು, ಜಾಗತಿಕ ಮಟ್ಟದಲ್ಲಿ ಭಾರತ ಸದ್ದು ಮಾಡಲಿದೆ ಎಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ಡಿ.ವಿ.ಆತ್ರೆ ಹೇಳಿದ್ದಾರೆ. ಬೆಂಗಳೂರು ವಿಜ್ಞಾನ ವೇದಿಕೆಯಲ್ಲಿ ಗುರುವಾರ ಅವರು ಉಪನ್ಯಾಸ ನೀಡಿ, ಈ ವಿಷಯ ತಿಳಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+