ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು, ಉಡುಪಿಯಲ್ಲಿ ಭಾರತಿ ಮೊಬೈಲ್‌ ಸೇವೆ ಆರಂಭ

By Staff
|
Google Oneindia Kannada News

ಮಂಗಳೂರು : ಭಾರತಿ ಮೊಬೈಲ್‌ ಸೇವಾ ಸಂಸ್ಥೆಯು ಮಂಗಳೂರು ಹಾಗೂ ಉಡುಪಿಯಲ್ಲಿ ಮೊಬೈಲ್‌ ಸೇವೆಯನ್ನು ಆರಂಭಿಸುವ ಮೂಲಕ ಕರಾವಳಿ ಭಾಗಕ್ಕೂ ತನ್ನ ಸೇವೆಯನ್ನು ವಿಸ್ತರಿಸಿದೆ. ಇತ್ತೀಚೆಗೆ ಮಂಗಳೂರು ಮೈದಾನದ ರಸ್ತೆಯಲ್ಲಿ ಜಗದೀಶ್‌ ಕಿಣಿ ಅವರು ಹೊಸ ಸೇವೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಈ ವಿಸ್ತರಣೆಯಾಂದಿಗೆ ಭಾರತಿ ಮೊಬೈಲ್‌ ಲಿಮಿಟೆಡ್‌ ರಾಜ್ಯದ ಒಟ್ಟು 17 ನಗರಗಳಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಈ ವರ್ಷದಲ್ಲಿ ಇನ್ನೂ ಕೆಲವು ನಗರಗಳಿಗೆ ಸೇವೆಯನ್ನು ವಿಸ್ತರಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಈ ವಿಷಯವನ್ನು ಕಿಣಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಗುಣಮಟ್ಟ ಪ್ರಧಾನ ಪಾತ್ರ ವಹಿಸುತ್ತದೆ ಹೀಗಾಗಿ ತಮ್ಮ ಸಂಸ್ಥೆ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಯನ್ನು ನೀಡಲು ಮೊದಲ ಆದ್ಯತೆ ನೀಡಿದೆ ಎಂದ ಅವರು, ಉತ್ತಮ ಸೇವಾ ಸೌಲಭ್ಯದಿಂದಾಗಿ ಭಾರತಿ ಮೊಬೈಲ್‌ ದೇಶದ ನಂ.1 ಸೆಲ್ಯುಲಾರ್‌ ಸಂಸ್ಥೆಯಾಗಿದೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X