ಪಂಕ್ಚರಾಗದ ಕೈನೆಟಿಕ್ ಟೈರ್, ಇದು ಬೆಂಗಳೂರಿಗರ ಫ್ಯಾಮಿಲಿ ಕಾರ್
ಬೆಂಗಳೂರು : ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಕವಿದಿದ್ದ ಕಾರ್ಮೋಡ ಕರಗಿದೆ. ಅಗ್ಗದ ಚೀನಾ ವಾಹನಗಳ ಭಯ ಪೂರ್ಣ ಮಾಯವಾಗಿದೆ. ಸುಮಾರು 6 ತಿಂಗಳಿಂದ ತಣ್ಣಗಾಗಿದ್ದ ದ್ವಿಚಕ್ರ ವಾಹನ ತಯಾರಕರ ಸದ್ದು ಮತ್ತೆ ಶುರುವಾಗಿದೆ. ಮೊನ್ನೆ ತಾನೆ ಕವಾಸಕಿ ಕಂಪನಿ 2 ಹೊಸ ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸಿತು. ಇದೀಗ ಗೇರ್ ರಹಿತ್ ಸ್ಕೂಟರ್ ತಯಾರಿಕಾ ದಿಗ್ಗಜ ಕೈನೆಟಿಕ್ ಸರದಿ. ಬಂದಿದೆ ಕೈನೆಟಿಕ್ ಝಡ್ ಎಕ್ಸ್ ಝೂಮ್.
ಈಗಿರುವ ಕೈನೆಟಿಕ್ ಹೋಂಡಾವನ್ನು ಅಭಿವೃದ್ಧಿ ಪಡಿಸಿ, ಝಡ್ ಎಕ್ಸ್ ಝೂಮ್ ರೂಪಿ-ಸಲಾಗಿದೆ. ಆಟೋ ಸ್ಟಾರ್ಟ್, ಉತ್ತಮ ಪಿಕ್‌ಅಪ್ ಇರುವ ಈ ಗೇರ್ ರಹಿತ ಸ್ಕೂಟರ್ ಒಂದು ಲೀಟರ್ ಪೆಟ್ರೋಲಿನಿಂದ 50 ಕಿಲೋ ಮೀಟರ್ ಸಂಚರಿಸಲಿದೆ ಎಂದು ಕಂಪನಿಯ ಜಂಟಿ -ವ್ಯವಸ್ಥಾಪಕ ನಿರ್ದೇ-ಶಕಿ ಸೂಲಜ ಮಟ್ವಾನಿ ತಿಳಿಸಿದ್ದಾರೆ.
ಈ ಸ್ಕೂಟರ್‌ನ ವಿಶೇಷ ಏನಪ್ಪಾ ಅಂದರೆ, ಟೈರ್ ಪಂಕ್ಚರ್ ಆಗುವುದಿಲ್ಲ. ಪಂ-ಕ್ಚರ್‌ಲೆಸ್ ಲಿಕ್ವಿಡನ್ನು ಟಯರ್‌ಗೆ ಲೇಪಿಸಲಾಗಿರುತ್ತದೆ. ಅದನ್ನೂ ಮೀರಿ ಪಂಕ್ಚರ್ ಆದರೂ, ಸಮೀಪದ ಸರ್ವಿಸ್ ಸ್ಟೇಷನ್‌ವರೆಗೆ ಓಡಿಸಿಕೊಂಡೇ ಹೋಗಬಹುದು; ತಳ್ಳುವ ಅಗತ್ಯವಿಲ್ಲ. 110 ಸಿಸಿ ಎಂಜಿನ್ ಸಾಮರ್ಥ್ಯವಿರುವ ಈ ಸ್ಕೂಟರ್ ಬೆಲೆ 38,112 ರುಪಾಯಿ.
ಸದ್ಯದಲ್ಲೇ ಸ್ಟೇಬಲ್ ಎಂಬ ಮೋಟಾರ್ ಸೈಕಲ್ಲನ್ನೂ ಮಾರುಕಟ್ಟೆಗೆ ತರಲಿದೆಯಂತೆ ಕೈನೆಟಿಕ್. ಹೊಸ ಮಾದರಿಯ ಎರಡು ಸ್ಕೂಟರ್ ಹಾಗೂ ಮೊಪೆಡ್‌ಗಳನ್ನು ಈ ವರ್ಷವೇ ಬಿಡುಗಡೆ ಮಾಡುವ ಗುರಿ ಕಂಪನಿಯದು. ಪೆಟ್ರೋಲ್ ಕಾರ್ಡನ್ನು ಕೂಡ ಕಂಪನಿ ಪರಿಚಯಿಸಲಿದೆ.
ವಾರ್ಷಿಕ 1200 ಕೋಟಿ ರುಪಾಯಿ ವಹಿವಾಟು ಹೊಂದಿರುವ ಕೈನೆಟಿಕ್, ರಾಜ್ಯದ ಗೇರ್ ರಹಿತ ಸ್ಕೂಟರ್ ಮಾರುಕಟ್ಟೆಯಲ್ಲಿ 65 ಪ್ರತಿಶತ ಷೇರು ಹೊಂದಿದ್ದು, ಕಳೆದ ಕೆಲ ತಿಂಗಳಲ್ಲಿ ಸ್ಕೂಟರ್ ಮಾರಾಟದಲ್ಲಿ ಶೇ. 30ರಷ್ಟು ಹೆಚ್ಚು ವಹಿವಾಟು ನಡೆಸಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications