ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ ಜಿಲ್ಲೆಯಲ್ಲಿ 500 ಕೋಟಿ ರುಪಾಯಿಗಳ ಸಾಲ ವಿತರಣೆ

By Staff
|
Google Oneindia Kannada News

ಚಿತ್ರದುರ್ಗ: 2000-01ನೇ ಸಾಲಿನಲ್ಲಿ ಚಿತ್ರದುರ್ಗ ಜಿಲ್ಲೆಯ ವಾಣಿಜ್ಯ ಬ್ಯಾಂಕ್‌ಗಳು 500 ಕೋಟಿ ರುಪಾಯಿಗಳ ಸಾಲವನ್ನು ವಿತರಿಸಿವೆ. ಇಲ್ಲಿ ನಡೆದ ಆರ್ಥಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಪ್ರಮುಖ ಬ್ಯಾಂಕ್‌ ಆದ ಕೆನರಾ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಟಿ.ವಿ.ಬಿ. ರಾಜನ್‌ ಅವರು ಈ ವಿಷಯ ತಿಳಿಸಿದರು.

ಇದರಿಂದಾಗಿ, ಜಿಲ್ಲೆಯಲ್ಲಿ 2000-01ನೇ ಸಾಲಿನ ಸಾಲ ನೀಡಿಕೆ ಪ್ರಮಾಣದಲ್ಲಿ ಶೇಕಡಾ 23.23ರಷ್ಟು ಪ್ರಗತಿ ಸಾಧಿಸಲಾಗಿದೆ. ಬ್ಯಾಂಕ್‌ಗಳು ಇದೇ ಅವಧಿಯಲ್ಲಿ 498.65 ಕೋಟಿ ರುಪಾಯಿಗಳಷ್ಟು ಠೇವಣಿಯನ್ನು ಸಂಗ್ರಹಿಸಿವೆ. ಇದು ಕಳೆದ ಸಾಲಿನ ಪ್ರಗತಿಗೆ ಹೋಲಿಸಿದರೆ, ಶೇ.15.98ರಷ್ಟು ಏರಿಕೆಯನ್ನು ಕಂಡಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಲೀಡ್‌ ಬ್ಯಾಂಕ್‌ (ಕೆನರಾ) ಒಂದೇ 125.06 ಕೋಟಿ ರುಪಾಯಿಗಳನ್ನು 2000-01ನೇ ಆರ್ಥಿಕ ವರ್ಷದಲ್ಲಿ ಆದ್ಯತಾ ವಲಯಕ್ಕೆ ನೀಡಿದೆ. 2000-01ನೇ ಆರ್ಥಿಕ ವರ್ಷದಲ್ಲಿ 84.29 ಕೋಟಿ ರುಪಾಯಿಗಳ ಕೃಷಿ ಸಾಲ ನೀಡುವ ಗುರಿಹೊಂದಲಾಗಿತ್ತು. ಈ ಗುರಿಯನ್ನು ಶೇ.99ರಷ್ಟು ತಲುಪುವಲ್ಲಿ ಯಶಸ್ವಿಯಾಗಿದ್ದು 84.23 ಕೋಟಿ ರುಪಾಯಿಗಳನ್ನು ಸಾಲ ರೂಪದಲ್ಲಿ ನೀಡಲಾಗಿದೆ ಎಂದು ಅವರು ಹೇಳಿದರು.

ಸಣ್ಣ ಕೈಗಾರಿಕೆ ಕ್ಷೇತ್ರದಲ್ಲಿ 12.65 ಕೋಟಿ ರುಪಾಯಿ ನೀಡಲಾಗಿದೆ. ಇದು ಗುರಿ ಮೀರಿದ ಸಾಧನೆ ಎಂದ ಅವರು ಈ ಕ್ಷೇತ್ರದಲ್ಲಿ 12.09 ಕೋಟಿ ರುಪಾಯಿಗಳ ಗುರಿ ಹೊಂದಲಾಗಿತ್ತು ಎಂದರು. ಸೇವಾ ವಲಯಗಳಲ್ಲಿ 29.21 ಕೋಟಿ ರುಪಾಯಿ ಸಾಲ ವಿತರಿಸಲಾಗಿದೆ (ಗುರಿ 28.12 ಕೋಟಿ) ಹಾಗೂ ಪಿ.ಎಂ.ಆರ್‌.ವೈ. ಯೋಜನೆಯಡಿ 559 ಫಲಾನುಭವಿಗಳಿಗೆ ನೆರವು ನೀಡಲಾಗಿದೆ ಎಂದೂ ವಿವರಿಸಿದರು.

ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೊಳಕಲ್ಮೂರು ಶಾಸಕ ಎನ್‌.ವೈ. ಗೋಪಾಲಕೃಷ್ಣ, ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪ್ರತಿನಿಧಿ ಎ.ಎನ್‌. ಸುಧೀಂದ್ರ, ನಬಾರ್ಡ್‌ನ ಚಿತ್ರದುರ್ಗ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಎಂ.ಎಸ್‌. ನಾರಾಯಣ್‌ ಪಾಲ್ಗೊಂಡಿದ್ದರು.

ಜಡ್‌.ಪಿ. ಸಿ.ಇ.ಓ ಅದೋನಿ ಸೈಯದ್‌ ಸಲೀಮ್‌, ಉಪ ಕಾರ್ಯದರ್ಶಿ ಪಿ. ಶಿವಶಂಕರ್‌, ಸಿಂಡಿಕೇಟ್‌ ಬ್ಯಾಂಕ್‌ನ ಸ್ಥಳೀಯ ವ್ಯವಸ್ಥಾಪಕ ಕೆ.ಟಿ. ಮಂಜುನಾಥ್‌, ಎಸ್‌.ಬಿ.ಎಂ. ಸ್ಥಳೀಯ ವ್ಯವಸ್ಥಾಪಕ ಎಂ.ಎಸ್‌. ಆಂಜನೇಯ ಹಾಗೂ ಇತರರು ಕೂಡ ಈ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.

(ಇನ್‌ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X