Get Updates
Get notified of breaking news, exclusive insights, and must-see stories!

ಗಂಗಾ- ಯಮುನಾ-ಗೋಮೂತ್ರದಿಂದತಾಜ್‌ಮಹಲ್‌ಗೆ ಅಭಿಷೇಕ

ಲಕ್ನೋ : ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಕಾಲಿಟ್ಟಿದ್ದರಿಂದ ಅಪವಿತ್ರವಾಯಿತು ಎಂಬ ಕಾರಣಕ್ಕೆ ಕ್ರುದ್ಧ ಶಿವಸೇನೆ ಕಾರ್ಯಕರ್ತರು ಗಂಗಾ- ಯಮುನಾ ನೀರು ಹಾಗೂ ಹಸುವಿನ ಗಂಜಲದಿಂದ ಪ್ರೇಮಸೌಧ ತಾಜ್‌ಮಹಲ್‌ ಶುದ್ಧೀಕರಣ ಮಾಡಿದ್ದಾರೆ !

ಬಾಟಲಿ ಕೈಲಿ ಹಿಡಿದಿದ್ದ ಶಿವಸೇನೆಯ ಕೆಲವರು ರಕ್ಷಣಾ ಪಹರೆಯವರನ್ನು ಬೇಧಿಸಿ, ತಾಜ್‌ ಮಹಲ್‌ ಒಳಗೆ ನುಗ್ಗಿ ಅದರಲ್ಲಿದ್ದ ಗಂಗಾ- ಯಮುನಾ ನದಿಯ ನೀರು ಹಾಗೂ ಹಸುವಿನ ಗಂಜಲ ಸಿಂಪಡಿಸಿದರು. ಈ ಕೆಲಸ ಮಾಡಿದ 12 ಮಂದಿಯನ್ನು ಬಂಧಿಸಿ, ನಂತರ ವೈಯಕ್ತಿಕ ಕಾರಣಗಳಿಂದಾಗಿ ಬಿಡುಗಡೆ ಮಾಡಲಾಯಿತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಮುಷರ್ರಫ್‌ ಅಡಿಯಿಟ್ಟಿದ್ದ ಜಾಗೆಗಳಿಗೆಲ್ಲಾ ಗಂಗಾ- ಯಮುನಾ ಪವಿತ್ರ ಜಲ ಹಾಗೂ ಗೋವಿನ ಗಂಜಲವನ್ನು ಶಿವಸೇನೆ ಕಾರ್ಯಕರ್ತರು ಚುಮುಕಿಸಿದರು. ವಿಶೇಷವಾಗಿ ಪತ್ನಿ ಷೇಬಾ ಜೊತೆ ಮುಷರ್ರಫ್‌ ಕುಳಿತಿದ್ದ (ಮಾಧ್ಯಮಗಳಲ್ಲಿ ಈ ಚಿತ್ರ ಪ್ರಕಟವಾಗಿದೆ) ಸ್ಥಳಕ್ಕೆ ಶುದ್ಧೀಕರಣ ಕಾರ್ಯದಲ್ಲಿ ಆದ್ಯತೆ ನೀಡಲಾಯಿತು.

ಮಹಾತ್ಮ ಗಾಂಧಿ ಸಮಾಧಿಗೆ ಮುಷರ್ರಫ್‌ ಪುಷ್ಪಗುಚ್ಛ ಅರ್ಪಿಸಿದ ನಂತರ ಆ ಜಾಗವನ್ನೂ ಶಿವಸೇನೆಯ ಕಾರ್ಯಕರ್ತರು ಶುದ್ಧ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+