• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನಸಾಮಾನ್ಯರ ಕೈಗೆಟುಕುವ ದರದಲ್ಲಿ ಬ್ರಾಂಡೆಡ್‌ ಕಂಪ್ಯೂಟರ್‌ಗಳು

By Staff
|

ನವದೆಹಲಿ :ದೇಶದ ಎರಡನೇ ಅತಿ ದೊಡ್ಡ ಕಂಪ್ಯೂಟರ್‌ ತಯಾರಿಕಾ ಕಂಪನಿಯಾದ ಜೆನಿತ್‌ ಕಂಪ್ಯೂಟರ್ಸ್‌ ಲಿಮಿಟೆಡ್‌ ತನ್ನ ಉತ್ಪಾದನೆಗಳಲ್ಲೊಂದಾದ ಜೆನಿತ್‌ ಪಿ 3, 600 ಮೆಗಾಹರ್ಟ್ಸ್ಜ್‌ (ಎಂ.ಎಚ್‌ಜಡ್‌) ಮೆಷಿನ್‌ ಬೆಲೆಯನ್ನು ಕೇವಲ 24,500 ರುಪಾಯಿಗಳೆಂದು ಪ್ರಕಟಿಸುವ ಮೂಲಕ ಬ್ರಾಂಡೆಡ್‌ ಮತ್ತು ಅಸೆಂಬಲ್ಡ್‌ ಕಂಪ್ಯೂಟರ್‌ಗಳ ನಡುವಿನ ಅಂತರವನ್ನು ಕಡಿಮೆ ಮಾಡಿದೆ.

ಇದು ಭಾರತದ ಯಾವುದೇ ಕಂಪನಿ ಪಿ. 3 ಶ್ರೇಣಿಯಲ್ಲಿ ಸೂಚಿಸಿರುವ ದರಕ್ಕಿಂತ ಅತ್ಯಂತ ಕಡಿಮೆ. ಕಂಪ್ಯೂಟರ್‌ ತಂತ್ರಜ್ಞಾನ ಎಲ್ಲರಿಗೂ ನಿಲುಕುವಂತೆ ಮಾಡುವ ಉದ್ದೇಶದಿಂದ ಜೆನಿತ್‌ ಈ ಯೋಜನೆಯನ್ನು ಕೈಗೊಂಡಿದೆ. ಅಂದರೆ, ಪೆಂಟಿಯಂ 3 ಕಂಪ್ಯೂಟರ್‌ ಈಗ ಸೆಲ್ರಾನ್‌ ಬೆಲೆಯಲ್ಲಿ ಲಭ್ಯ. ಈ ಮೂಲಕ ಜೆನಿತ್‌ ಕಂಪ್ಯೂಟರ್ಸ್‌ ಭಾರತದ ಪರ್ಸನಲ್‌ ಕಂಪ್ಯೂಟರ್‌ ಹಾರ್ಡ್‌ವೇರ್‌ ಮಾರುಕಟ್ಟೆಯ ಮೇಲೆ ಪ್ರಭುತ್ವ ಸಾಧಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.

ಜೆನಿತ್‌ನ ಪಿ.3ಯ ಕಾನ್‌ಫಿಗರೇಷನ್‌ ಹೀಗಿದೆ : Intel Pentium III 600 Mhz Processor, MATX form factor, 64 MB SD RAM, Shared Video Memory, 1.44 MB FDD, 20 GB ATA 100 HDD, 52 X Multimedia Kit with speakers, Headphones with microphone, special internet keyboard, Logitech scroll mouse with pad, 36 cm (14") SVGA digital colour monitor(Zenith).

ಬೆಲೆಯನ್ನು ಕಡಿತ ಮಾಡಿರುವ ಸಂಸ್ಥೆ ಕಂಪ್ಯೂಟರ್‌ಗಳ ಗುಣಮಟ್ಟವನ್ನೂ ಕಾಯ್ದುಕೊಳ್ಳುವಲ್ಲಿ ಹೆಚ್ಚಿನ ಗಮನ ನೀಡಿದೆ. ಈಗಾಗಲೇ ಸಂಸ್ಥೆ ಐಎಸ್‌ಓ 9002 ಪ್ರಮಾಣಪತ್ರವನ್ನೂ ತನ್ನದಾಗಿಸಿಕೊಂಡಿದೆ. ಈ ವಿಷಯವನ್ನು ಜೆನಿತ್‌ ಕಂಪ್ಯೂಟರ್‌ ಲಿಮಿಟೆಡ್‌ನ ಸಿ.ಎಂ.ಡಿ. ಸರಾಫ್‌ ಗುರುವಾರ ತಿಳಿಸಿದ್ದಾರೆ.

ಸಾರ್ವಜನಿಕರೆಲ್ಲರಿಗೂ ಕೈಗೆಟುಕುವ ದರದಲ್ಲಿ ಪರ್ಸನಲ್‌ ಕಂಪ್ಯೂಟರ್‌ಗಳನ್ನು ಒದಗಿಸುವುದೇ ತಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಜೆನಿತ್‌ನ ಕಂಪ್ಯೂಟರ್‌ಗಳು ಬ್ರಾಂಡ್‌ ರಹಿತ ಅಸೆಂಬಲ್ಡ್‌ ಕಂಪ್ಯೂಟರ್‌ ಮೆಷಿನ್‌ಗಳಿಗಿಂತಲೂ ಕಡಿಮೆ ದರದಲ್ಲಿ ದೊರಕುತ್ತವೆ ಎಂದೂ ಅವರು ಹೇಳಿದ್ದಾರೆ.

ಜೆನಿತ್‌ನ ಪಿ. 3 1 ಜಿಎಚ್‌ಜಡ್‌ ಬೆಲೆ ಕೇವಲ 32,000ವಾದರೆ, ಪೆಂಟಿಯಮ್‌ 4, 1.4 ಜಿಎಚ್‌ಜಡ್‌ ಬೆಲೆ 47 ಸಾವಿರ ಎಂದೂ ಅವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಜೆನಿತ್‌ ಕಂಪ್ಯೂಟರ್ಸ್‌ನ ಶಿವರಂಜನ್‌ ಗುಲ್ವಾಡಿ ಅವರನ್ನು ದೂರವಾಣಿ ಸಂಖ್ಯೆ 91-022-8377300 ಮೂಲಕ ಸಂಪರ್ಕಿಸಬಹುದು. ಫ್ಯಾಕ್ಸ್‌ ಸಂಖ್ಯೆ - 91-022-8364859.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more