ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಗಡಿ ವಿವಾದ : ಪ್ರಧಾನಿ ಬಳಿಗೆ ಮತ್ತೆ ಹೋಗೆವು - ಕೃಷ್ಣ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕೆ ಮಹಾಜನ್‌ ವರದಿಯೇ ಅಂತಿಮವಾಗಿದ್ದು, ಮತ್ತೊಮ್ಮೆ ಪ್ರಧಾನಿ ಬಳಿಗೆ ನಿಯೋಗ ಒಯ್ಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಕೃಷ್ಣ ಗುರುವಾರ ಸ್ಪಷ್ಟಪಡಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಯಾವುದೇ ರಾಜಿಗೆ ಸಿದ್ಧವಿಲ್ಲ ಎಂದು ವಿಧಾನಪರಿಷತ್ತಿನಲ್ಲಿ ಕೃಷ್ಣ ಪ್ರಕಟಿಸಿದರು. ಎಂ.ವಿ. ರಾಜಶೇಖರ ಮೂರ್ತಿ ಅವರ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ಅವರು, ಈಗಾಗಲೇ ಮಹಾಜನ್‌ ವರದಿಯೇ ಅಂತಿಮ ಎಂದು ರಾಜ್ಯದ ಉಭಯ ಸದನಗಳೂ ಒಪ್ಪಿ ನೀರ್ಣಯ ಅಂಗೀಕರಿಸಿವೆ. ಹೀಗಾಗಿ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸದು ಎಂದರು.

ಅನವಶ್ಯಕವಾಗಿ ಮಹಾರಾಷ್ಟ್ರ ಗಡಿ ವಿವಾದವನ್ನು ಪದೇ ಪದೇ ಕೆದಕುತ್ತಿದೆ. ಈ ವಿಷಯದಲ್ಲಿ ರಚನಾತ್ಮಕವಾಗಿ ಸಿದ್ಧತೆ ನಡೆಸಿ, ಪೂರ್ವ ಸಿದ್ಧತೆ ಇಲ್ಲದೆ ಎರಡೂ ರಾಜ್ಯಗಳ ಸಭೆ ಕರೆದರೆ, ಪಾಕ್‌-ಭಾರತ ಶೃಂಗಸಭೆಗಾದ ಸ್ಥಿತಿಯೇ ಇದಕ್ಕೂ ಆಗುತ್ತದೆ ಎಂದು ಅವರು ವ್ಯಂಗ್ಯವಾಡಿದರು.

ಪತ್ರಿಕೆಗಳಲ್ಲಿ ಪ್ರಧಾನಿಯವರು ಕರ್ನಾಟಕ- ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆಯುತ್ತಾರೆ ಎಂದು ವರದಿಯಾಗಿದೆ, ಆದರೆ, ತಮಗೆ ಕೇಂದ್ರದಿಂದ ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದೂ ಕೃಷ್ಣ ಸ್ಪಷ್ಟಪಡಿಸಿದರು.

(ಇನ್‌ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X