ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಕಾನನದಲ್ಲಿ ಕಳೆದ 3 ವರ್ಷದಲ್ಲಿ 37 ಆನೆಗಳ ಹತ್ಯೆ

By Staff
|
Google Oneindia Kannada News

ಬೆಂಗಳೂರು : ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕದ ಕಾಡಿನಲ್ಲಿ ಹತ್ಯೆಯಾಗಿರುವ ಆನೆಗಳ ಸಂಖ್ಯೆ ಎಷ್ಟು ಗೊತ್ತೆ? ವರ್ಷಕ್ಕೆ ಸರಾಸರಿ ಎಷ್ಟು ಆನೆಗಳನ್ನು ದಂತಚೋರರು ಕೊಲ್ಲುತ್ತಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಕರ್ನಾಟಕ ಸರಕಾರದ ಅಧಿಕೃತ ಹೇಳಿಕೆಯ ರೀತ್ಯ ಕಳೆದ 3 ವರ್ಷಗಳಲ್ಲಿ 37 ಆನೆಗಳ ಹತ್ಯೆ ನಡೆದಿದೆ.

ಅಂದರೆ, ವರ್ಷಕ್ಕೆ ಸರಾಸರಿ ಒಂದು ಡಜನ್‌ ಆನೆಗಳನ್ನು ದಂತಚೋರರು ಕೊಲ್ಲುತ್ತಿದ್ದಾರೆ. ರಾಜ್ಯದ ಅರಣ್ಯ ಸಚಿವ ಕೆ.ಎಚ್‌. ರಂಗನಾಥ್‌ ಈ ವಿಷಯವನ್ನು ಬುಧವಾರ ವಿಧಾನಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಈ ಪೈಕಿ ಬಹುತೇಕ ಆನೆಗಳ ಹತ್ಯೆ ರಾಜ್ಯದ ಗಡಿ ಪ್ರದೇಶದಲ್ಲಿ ನಡೆದಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಅರಣ್ಯ ರಕ್ಷಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡಿ, ಸಜ್ಜುಗೊಳಿಸಲು ನಿರ್ಧರಿಸಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಾಡುಗಳ್ಳತನ ಹಾಗೂ ಪ್ರಾಣಿಗಳ ಹತ್ಯೆ ತಡೆಗೆ ಶಿಬಿರಗಳ್ನು ನಿಯೋಜಿಸಲಾಗಿದೆ. ಮಿಗಿಲಾಗಿ ಪೊಲೀಸರೊಂದಿಗೆ ಸಂಪರ್ಕ ಸಾಧಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ವಿಧಾನಸಭೆಗೆ ತಿಳಿಸಿದ್ದಾರೆ.

(ಯು.ಎನ್‌.ಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X