ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತಾಶ ಮುಷರ್ರಫ್‌!

By Staff
|
Google Oneindia Kannada News

ಇಸ್ಲಾಮಾಬಾದ್‌ : ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಮಾನಸಿಕವಾಗಿ ಘಾಸಿಗೊಂಡಿದ್ದಾರೆ, ಹತಾಶರಾಗಿದ್ದಾರೆ. ಕಾಶ್ಮೀರದ ಸಮಸ್ಯೆ ಕುರಿತಂತೆ ಒಪ್ಪಂದವೊಂದು ಕೊನೆ ಗಳಿಗೆಯಲ್ಲಿ ಮುರಿದು ಬಿದ್ದದ್ದೇ ಇದಕ್ಕೆ ಕಾರಣ ಎಂದು ಪಾಕಿಸ್ತಾನದ ವಾರ್ತಾ ಸಚಿವ ಅನ್ವರ್‌ ಮಹಮೂದ್‌ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಅನ್ವರ್‌ ಆಡಿರುವ ಇನ್ನಷ್ಟು ಮಾತುಗಳು ಇಂತಿವೆ...

ಶೃಂಗಸಭೆಯ ಅಂತಿಮ ಕ್ಷಣಗಳಲ್ಲಿ ಮುಷರ್ರಫ್‌ ನಿರಾಶೆ ಮಡುಗಟ್ಟಿತ್ತು. ಅವರು ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ಜಾಯಮಾನದವರಲ್ಲ . ಭಾರತದ ಪ್ರಧಾನಿ ವಾಜಪೇಯಿ ಹಾಗೂ ಮುಷರ್ರಫ್‌ ಎಲ್ಲಕ್ಕೂ ಒಪ್ಪಿದ್ದರು. ಒಪ್ಪಂದ ಇನ್ನೇನು ಆಗಿಯೇ ಬಿಟ್ಟಿತು ಅನ್ನುವಂತಿತ್ತು ಪರಿಸ್ಥಿತಿ. 6 ತಾಸುಗಳ ನಂತರ ಎಲ್ಲಾ ಚಿಂದಿಚಿಂದಿಯಾಯಿತು.

ಕಾಶ್ಮೀರದಲ್ಲಿನ ಉಗ್ರಗಾಮಿಗಳ ಆಟಾಟೋಪ ತಪ್ಪಿಸುವ ಹಾಗೂ ಕಾಶ್ಮೀರ ಒಂದು ವ್ಯಾಜ್ಯವಲ್ಲ ಎಂಬುದನ್ನು ನಿರೂಪಿಸುವ ಮುಷರ್ರಫ್‌ ಉಮೇದಿ ಯಶಸ್ವಿಯಾಗಲಿಲ್ಲ. ಮಾತುಕತೆ ಭಾವನಾತ್ಮಕ ಸ್ವರೂಪ ಪಡೆದುಕೊಂಡಿದ್ದು ಕಳೆದ 50 ವರ್ಷಗಳಲ್ಲಿ ಇದೇ ಮೊದಲು. ಇಂಥಾ ಮಾತುಕತೆ ಸತ್ಫಲ ಕಾಣದಿದ್ದುದು ದುರಾದೃಷ್ಟಕರ.

ವಾಜಪೇಯಿ ಅವರಿಗೆ ಪಾಕ್‌ಗೆ ಬರುವಂತೆ ಮುಷರ್ರಫ್‌ ಕೊಟ್ಟ ಆಮಂತ್ರಣವನ್ನು ಈಗಲೂ ವಾಪಸ್ಸು ಪಡೆದಿಲ್ಲ. ಪಡೆಯೋದೂ ಇಲ್ಲ. ಮಾತುಕತೆ ಮುಂದಿವರೆಯಲಿ ಎಂಬುದೇ ನಮ್ಮ ಆಶಯ. ಆ ಗಳಿಗೆ ಎಂದು ಕೂಡಿಬರಲಿದೆ ಎಂಬುದು ಇನ್ನೂ ನಿರ್ಧರಿತವಾಗಿಲ್ಲ. ಬರುವ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ವಾಜಪೇಯಿ- ಮುಷರ್ರಫ್‌ ಮತ್ತೆ ಭೇಟಿ ಯಾಗುವುದಂತೂ ಬಹುತೇಕ ಖಚಿತ.

ಶೃಂಗಸಭೆ ನಿರೀಕ್ಷಿತ ಯಶಸ್ಸು ಕಂಡಿಲ್ಲವಾದರೂ, ಮಾತುಕತೆಗೆ ಚಾಲನೆ ಸಿಕ್ಕಿದೆ. ಅದು ಮೊಟಕಾಗದೆ ಮುಂದುವರೆಯಲಿ ಎಂದು ಹಾರೈಸುವ.

(ಏಜೆನ್ಸೀಸ್‌)

What do you think about this article?

ಪಾಕಿಸ್ತಾನ ಬಿಗಿಪಟ್ಟು‘ಆಗ್ರಾ ಶೃಂಗ’ಕ್ಕೆ ಪೆಟ್ಟು

ಮುಖಪುಟ / ಆಗ್ರಾ ಶೃಂಗಸಭೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X