Get Updates
Get notified of breaking news, exclusive insights, and must-see stories!

ಪಾಕಿಸ್ತಾನ ಬಿಗಿಪಟ್ಟು‘ಆಗ್ರಾ ಶೃಂಗ’ಕ್ಕೆ ಪೆಟ್ಟು

ಆಗ್ರಾ: ಗಡಿ ಭಾಗದಲ್ಲಿನ ಭಯೋತ್ಪಾದಕತೆಯನ್ನು ಚರ್ಚೆಯ ವಿಷಯವಾಗಿ ಒಪ್ಪಿಕೊಳ್ಳದಿರುವ ಹಾಗೂ ಒಂದೇ ವಿಷಯಕ್ಕೆ ಜೋತುಬಿದ್ದು ಪೂರ್ವ ಒಪ್ಪಂದಗಳಿಗೆ ಬದ್ಧವಾಗದಿರುವ ಪಾಕಿಸ್ತಾನದ ಹಟಮಾರಿ ಧೋರಣೆಯೇ ಆಗ್ರಾ ಶೃಂಗಸಭೆ ವಿಫಲವಾಗಲು ಕಾರಣ ಎಂದು ವಿದೇಶಾಂಗ ಸಚಿವ ಜಸ್ವಂತ್‌ಸಿಂಗ್‌ ಹೇಳಿದ್ದಾರೆ.

ಆಗ್ರಾ ಶೃಂಗಸಭೆಯ ಮಾತುಕತೆಯ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳು ಒಪ್ಪಂದವೊಂದಕ್ಕೆ ಬರುವ ವಿಷಯ ಕಗ್ಗಂಟಾಗಿದೆ ಎನ್ನುವುದನ್ನು ಒಪ್ಪಿಕೊಂಡಿರುವ ಅವರು, ಮಾತುಕತೆಗಳು ಸಂಪೂರ್ಣ ವಿಫಲವಾಗಿವೆ ಎನ್ನುವುದನ್ನು ಅಲ್ಲಗಳೆದರು. ಮುಂದಿನ ಮಾತುಕತೆಗಳಿಗೆ ಆಗ್ರಾ ಶೃಂಗಸಭೆ ಪೂರಕ ವಾತಾವರಣವನ್ನು ಕಲ್ಪಿಸಿದೆ. ಪರಸ್ಪರ ದೃಷ್ಟಿಕೋನ- ಅಭಿಪ್ರಾಯಗಳನ್ನು ಅರ್ಥೈಸಿಕೊಳ್ಳಲು ಆಗ್ರಾ ಶೃಂಗಸಭೆ ಸಹಾಯಕವಾಯಿತು. ಪ್ರಧಾನಿ ವಾಜಪೇಯಿ ಶಾಂತಿಯ ಹೆದ್ದಾರಿಯಲ್ಲಿ ನಡೆಯುತ್ತಿದ್ದಾರೆ ಎಂದು ಅವರು ಬಣ್ಣಿಸಿದರು.

ಮಂಗಳವಾರ (ಜುಲೈ 17) ಬೆಳಗ್ಗೆ ಆಗ್ರಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿದ್ಧಪಡಿಸಿದ ಹೇಳಿಕೆಯನ್ನು ಓದಿದ ಅವರು, ಜಮ್ಮು ಮತ್ತು ಕಾಶ್ಮೀರ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನ ನಡುವಣ ಮಾತುಕತೆ ನಡೆಯಲು ಸಾಧ್ಯವಿಲ್ಲ ಹಾಗೂ ಒಂದೇ ವಿಷಯಕ್ಕೆ ಅಂಟಿಕೊಂಡ ಪಾಕಿಸ್ತಾನದ ನಡವಳಿಕೆ ಗಡಿಭಾಗದಲ್ಲಿನ ಭಯೋತ್ಪಾದಕತೆ ಬಗ್ಗೆ ಚರ್ಚೆ ನಡೆಸಲು ಅಡ್ಡಿಯಾಗಿದೆ ಎಂದು ಹೇಳಿದರು.

ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿರುವ ಮುಷರ್ರಫ್‌ ಅವರ ಆಹ್ವಾನವನ್ನು ವಾಜಪೇಯಿ ಒಪ್ಪಿಕೊಂಡಿದ್ದಾರೆ. ಭೇಟಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ . ಆಗ್ರಾದಲ್ಲಿನ ಕೊಂಡಿಗಳನ್ನು ಎತ್ತಿಕೊಂಡು ಮಾತುಕತೆಗಳನ್ನು ಮುಂದುವರಿಸುವ ಬಗ್ಗೆ ಭಾರತ ಆಶಾಭಾವ ಹೊಂದಿದೆ ಎಂದು ಜಸ್ವಂತ್‌ ಹೇಳಿದರು. ಆಗ್ರಾ ಶೃಂಗಸಭೆ ವಿಫಲತೆಯ ಕುರಿತು ಸಿದ್ಧ ಹೇಳಿಕೆಯನ್ನು ಓದಿದ ನಂತರ ಜಸ್ವಂತ್‌ಸಿಂಗ್‌ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಅವರ ಸುದ್ದಿಗೋಷ್ಠಿಯ ಮುಖ್ಯಾಂಶಗಳು-

  • ಆಗ್ರಾ ಶೃಂಗಸಭೆಯನ್ನು ಶಿಮ್ಲಾ ಒಪ್ಪಂದ ಹಾಗೂ ಲಾಹೋರ್‌ ಘೋಷಣೆಯ ಮುಂದುವರಿದ ಭಾಗ ಎಂದು ಒಪ್ಪಿಕೊಳ್ಳಲು ಪಾಕಿಸ್ತಾನ ತಯಾರಿಲ್ಲ .
  • ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಜಂಟಿ ಘೋಷಣೆಗೆ ಭಾರತ ಮುಜುಗರ ಪಟ್ಟಿಲ್ಲ . ಸ್ಪಷ್ಟವಾದ ಯಾವುದೇ ಒಪ್ಪಂದ ಅಥವಾ ಘೋಷಣೆ ಸಾಧ್ಯವಾಗದೆ ಇರುವುದಕ್ಕೆ ನಮಗೆ ನಿರಾಶೆಯಾಗಿದೆ. ಆದರೆ, ಸಂಕುಚಿತ ಹಾಗೂ ಏಕ ವಿಷಯಕ್ಕೆ ಜೋತುಬೀಳುವ ಹಟಮಾರಿ ಧೋರಣೆ ಮಾತುಕತೆಗೆ ಪೂರಕವಾಗಿರುವುದಿಲ್ಲ ಅನ್ನುವುದನ್ನು ಮನವರಿಕೆ ಮಾಡಿಕೊಡುವಲ್ಲಿ ಭಾರತ ಯಶಸ್ವಿಯಾಗಿದೆ.
  • ಭದ್ರತಾ ಕಾರಣಗಳಿಗಾಗಿ ಮುಷರ್ರಫ್‌ ಅವರ ಸುದ್ದಿಗೋಷ್ಠಿ ಸಾಧ್ಯವಾಗಲಿಲ್ಲ .
  • ಉಭಯತ್ರರ ನಡುವೆ ಪರಸ್ಪರ ನಂಬಿಕೆಯನ್ನು ಮೂಡಿಸುವ ಚರ್ಚೆ- ಮಾತುಕತೆಗಳು ಮುಂದೆಯೂ ನಡೆಯಲಿವೆ.
  • ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮೂರನೇ ಮಧ್ಯಸ್ಥಿಕೆಯ ಪ್ರಶ್ನೆಯೇ ಇಲ್ಲ .
  • ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎಲ್ಲ ವಿಷಯಗಳು ಮಾತುಕತೆಯ ಸಂದರ್ಭದಲ್ಲಿ ಅವಕಾಶ ಪಡೆಯಲೇಬೇಕು. ಕಾಶ್ಮೀರವೇ ಕೇಂದ್ರ ಎನ್ನುವ ಪಾಕಿಸ್ತಾನದ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ .
  • ಕಾಶ್ಮೀರದ ಬಗ್ಗೆ ಸುಷ್ಮಾ ಸರಿಯಾಗಿಯೇ ಮಾತನಾಡಿದ್ದಾರೆ. ಅವರು ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರು, ತಪ್ಪು ಅನ್ನುವಂತದ್ದೇನೂ ಹೇಳಿಲ್ಲ .
  • ಯುದ್ಧ ಖೈದಿಗಳ ಬಗ್ಗೆ ಖುದ್ದಾಗಿ ಪರಿಶೀಲಿಸುವುದಾಗಿ ಮುಷರ್ರಫ್‌ ಭರವಸೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪುನರುಚ್ಛರಿಸುವುದರೊಂದಿಗೆ ಜಸ್ವಂತ್‌ ಸುದ್ದಿಗೋಷ್ಠಿ ಮುಕ್ತಾಯ.

(ಇನ್ಫೋ ವಾರ್ತೆ)

What do you think about this article?

ಮುಖಪುಟ / ಆಗ್ರಾ ಶೃಂಗಸಭೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+