ಮುಷರ್ರಫ್ ಉದ್ವೇಗಗೊಂಡಿದ್ದರೇ? ಸಿಗಾರ್ ಅಂತೂ ಸೇದಿದರು
ಆಗ್ರಾ : ಅಮರ ವಿಲಾಸ ಹೊಟೇಲಿನ ವೈಭವಯುತ ಕೊಹಿನೂರ್ ಕೋಣೆಯಲ್ಲಿ ಮುಷರ್ರಫ್ ಸಿಗಾರ್ ಸೇವಿಸಿದರು. ಅದೂ ಸೋಮವಾರ ನಡು ಮಧ್ಯಾಹ್ನದ ಹೊತ್ತಿನಲ್ಲಿ !
ಮುಷರ್ರಫ್ ನಿರಂತರ ಧೂಮಪಾನ ಮಾಡುವ ಜಾತಿಗೆ ಸೇರಿದವರೇನಲ್ಲ . ಆದರೆ ಏನು ಮಾಡುವುದು, ಬೆಳಗ್ಗೆ ಪ್ರಮುಖ ಸುದ್ದಿ ಮಾಧ್ಯಮಗಳ ಸಂಪಾದಕರೊಂದಿಗಿನ ಮುಖಾಮುಖಿ ಹಾಗೂ ಮಾತುಕತೆಗಳಲ್ಲಿ ಕಾಣದ ಫಲಶ್ರುತಿ ಅವರನ್ನು ಹಣ್ಣು ಮಾಡಿತ್ತು . ಕೊನೆಗುಳಿದದ್ದು ಸಿಗಾರ್. ಕ್ಯುಬನ್ ಸಿಗಾರೊಂದನ್ನು ಮುಷರ್ರಫ್ ಸೇದಿದರು. ಉದ್ವೇಗ ಶಮನವಾಯಿತೊ ಇಲ್ಲವೊ ತಿಳಿಯಲಿಲ್ಲ .
1999 ರ ಅಕ್ಟೋಬರ್ 12 ರಂದು, ಕೊಲಂಬೊದಿಂದ ಮುಷರ್ರಫ್ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಕರಾಚಿಯಲ್ಲಿ ಇಳಿಯಲು ಅವಕಾಶ ನಿರಾಕರಿಸಿದಾಗ ಮುಷರ್ರಫ್ ಸಿಗಾರ್ ಸೇದಿದ್ದರು. ಅದು ಅವರಲ್ಲಿನ ಉದ್ವೇಗ ಸೂಚಿಸುತ್ತಿತ್ತು ಎಂದು ತದನಂತರ ಅವರ ಪತ್ನಿ ಷೇಬಾ ತಿಳಿಸಿದ್ದರು.
ವಿಮಾನ ಇಳಿಯಲು ಅವಕಾಶ ನಿರಾಕರಿಸಿದ ಅವಮಾನವನ್ನು ಮುಷರ್ರಫ್ ಅವರೇನೂ ಬಚ್ಚಿಟ್ಟುಕೊಳ್ಳಲಿಲ್ಲ . ತಮ್ಮನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಆಪಾದಿಸಿದರು. ಅಂದಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ರಕ್ತ ರಹಿತ ಕ್ರಾಂತಿಯಲ್ಲಿ ಕೆಳಗಿಳಿಸಿ, ಪಾಕ್‌ನ ಮುಖ್ಯ ಕಾರ್ಯ ನಿರ್ವಾಹಕರಾದರು. ಅದು ಇತಿಹಾಸ. ಈ ಬಾರಿ ಸಿಗಾರ್ ಸೇವಿಸಿದ ಮುಷರ್ರಫ್ ಮಾಡುವಂತದ್ದೇನೂ ಇರಲಿಲ್ಲ . ಕೈಲಿದ್ದುದು ಮಾತುಕತೆಯನ್ನು ಮುರಿದುಕೊಳ್ಳುವುದು. ಅದರಲ್ಲಿ ಅವರು ಯಶಸ್ವಿಯಾದರು.
(ಇನ್ಫೋ ವಾರ್ತೆ)
What do you think about this article?
ಮುಖಪುಟ / ಆಗ್ರಾ ಶೃಂಗಸಭೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications