ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ- ಮುಷರ್ರಫ್‌ ಶೃಂಗಸಭೆಗೆ ತೆರೆ

By Staff
|
Google Oneindia Kannada News

ಆಗ್ರಾ : ಭಾರತದ ಪ್ರಧಾನಿ ವಾಜಪೇಯಿ ಹಾಗೂ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ನಡುವಣ ಮಹತ್ವದ ಶೃಂಗಸಭೆಯ ಅಂತಿಮ ಸುತ್ತಿನ ಮಾತುಕತೆ ಸೋಮವಾರ ಅಪರಾನ್ಹ 1.30ಕ್ಕೆ ಮುಗಿದಿದೆ.

ತೀವ್ರ ನಿರೀಕ್ಷೆಯಿದ್ದ ಭಾರತ- ಪಾಕಿಸ್ತಾನ ಜಂಟಿ ಹೇಳಿಕೆ ಬಿಡುಗಡೆಗೆ ಮಾಧ್ಯಮಗಳು ಇದಿರು ನೋಡುತ್ತಿವೆ. ಸಂಜೆ ಪ್ರಧಾನಿ ವಾಜಪೇಯಿ ಹಾಗೂ ಮುಷರ್ರಫ್‌ ಪ್ರತ್ಯೇಕ ಸುದ್ದಿಗೋಷ್ಠಿಗಳಲ್ಲಿ ಶೃಂಗಸಭೆಯ ಅಂತಿಮ ಫಲಶೃತಿಯನ್ನು ಹೊರಗೆಡಹುವ ಸಾಧ್ಯ-ತೆ-ಯಿ-ದೆ.

ಕಾಶ್ಮೀರ ಸಮಸ್ಯೆ ಪರಿಹಾರಕ್ಕೇ ತನ್ನ ಪಟ್ಟು ಎಂಬ ಪಾಕಿಸ್ತಾನದ ನಿಲುವು ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳಿಗೆ ಭಾನುವಾರ ತ್ರಾಸು ಕೊಟ್ಟಿತು. ಭಾರತದ ವಿದೇಶಾಂಗ ಕಾರ್ಯದರ್ಶಿ ಚೋಕಿಲಾ ಅಯ್ಯರ್‌ ಹಾಗೂ ಪಾಕ್‌ ವಿದೇಶಾಂಗ ಕಾರ್ಯದರ್ಶಿ ಇನಾಂ- ಉಲ್‌- ಹಕ್‌ ಭಿನ್ನಾಭಿಪ್ರಾಯದ ದೆಸೆಯಿಂದ ಶೃಂಗಸಭೆಗೆ ಕುತ್ತು ಬಾರದಿರಲೆಂದು ಭಾನುವಾರ ರಾತ್ರಿ ದೀರ್ಘ ಕಾಲದ ಹೋಂವರ್ಕ್‌ ನಡೆಸಿದರು. ಭಿನ್ನಾಭಿಪ್ರಾಯ ಸಭೆಗೆ ಭಂಗ ತರುವಷ್ಟರ ಮಟ್ಟಿಗೆ ಬೆಳೆಯದಂತೆ ನೋಡಿಕೊಂಡರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X