ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಷರ್ರಫ್‌ ಅಂತರಂಗ

By Staff
|
Google Oneindia Kannada News

ಆಗ್ರಾ : ಚುನಾಯಿತ ಪ್ರತಿನಿಧಿಯಲ್ಲದ ನಿಮಗೆ ಪಾಕಿಸ್ತಾನೀಯರ ಹಿತಾಸಕ್ತಿಯ ಬಗ್ಗೆ ಕಾಳಜಿಯೇ ಇಲ್ಲ. ಹೀಗಿರುವಾಗ ಬೇರೆ ದೇಶದ ಸಮಸ್ಯೆಗೆ ಹೇಗೆ ಸ್ಪಂದಿಸುತ್ತೀರಿ?....
ಮಾಧ್ಯಮದ ಪ್ರತಿನಿಧಿಗಳ ಇಂಥಾ ಪ್ರಶ್ನೆಗಳ ಸುರಿಮಳೆಗೆ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಕಿಂಚಿತ್ತೂ ಅಲುಗಾಡದವರಂತೆ ದಿಟ್ಟ ಉತ್ತರ ನೀಡಿದರು. ಅವರ ಪ್ರತಿ ಮಾತಿನಲ್ಲಿಯೂ ಸೈನಿಕನೊಬ್ಬನ ಕದಲಿಕೆಯಿತ್ತು . ಅದರ ತಿರುಳು ಹೀಗಿದೆ...

  • ನಾನು ಈ ಹುದ್ದೆಗೆ ಬಂದದ್ದು ಇದೇ ಸ್ಥಾನದಲ್ಲಿದ್ದ ಪೂರ್ವಾಧಿಕಾರಿಯ ಒಪ್ಪಿಗೆಯ ಮೇರೆಗೆ. ಪಾಕಿಸ್ತಾನದ ಹಿತಾಸಕ್ತಿಯ ಬಗ್ಗೆ ನನಗೆ ಕಾಳಜಿಯಿಲ್ಲ ಅಂತ ಹೇಗೆ ಹೇಳುತ್ತೀರಿ? ನೀವು ಒಮ್ಮೆ ಪಾಕಿಸ್ತಾನಕ್ಕೆ ಬಂದು, ಯಾವುದೇ ಸರ್ಕಾರಿ ಇಲಾಖೆ, ನಿಗಮಕ್ಕೆ ಭೇಟಿ ಕೊಡಿ. ನಾನು ಜನರಿಗಾಗಿ ಏನು ಮಾಡಿಲ್ಲ ಅಂತ ತೋರಿಸಿ. ಏನು ಮಾಡಬೇಕು ಅಂತ ಸಲಹೆ ಕೊಡಿ. ಎಲ್ಲಕ್ಕೂ ನಾನು ಸಿದ್ಧ.
  • ನನ್ನ ಕ್ರಮಗಳಿಗೆ ಬಹುಪಾಲು ಪಾಕಿಸ್ತಾನೀಯರ ಬೆಂಬಲವಿದೆ. ಈವರೆಗೆ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಇರಲಿಲ್ಲ. ಚುನಾವಣೆಗಳನ್ನು ನಡೆಸಲು ನಾನು ತೀರ್ಮಾನಿಸಿದ್ದು, ಆ ಮೂಲಕ ಮೊದಲ ಬಾರಿಗೆ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಪಾಕಿಸ್ತಾನವನ್ನು ರೂಪಿಸಲಿದ್ದೇನೆ.
  • ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ನಾವು ಕುಮ್ಮಕ್ಕು ಕೊಡುತ್ತಿಲ್ಲ. ಪಾಕಿಸ್ತಾನದಲ್ಲಿ ನಾವು ಅದನ್ನು ‘ಸ್ವಾತಂತ್ರ್ಯ ಚಳವಳಿ’ ಎಂದು ಕರೆಯುತ್ತೇವೆ. ಭಾರತದ ಪಡೆಗಳ ಕ್ರೌರ್ಯಕ್ಕೆ ಕಾಶ್ಮೀರಿ ಜನ ತುತ್ತಾಗುತ್ತಿದ್ದಾರೆ ಎಂದು ಪಾಕಿಸ್ತಾನದಲ್ಲಿ ನಾವು ಹೇಳುತ್ತೇವೆ. ಈ ಸಮಸ್ಯೆಗೆ ಒಂದು ಬಲವಾದ ಪರಿಹಾರ ಹುಡುಕಿದಲ್ಲಿ ರಕ್ತ ಹರಿಯುತ್ತಿರುವ ಕಣಿವೆಯಲ್ಲಿ ತದ್ವಿರುದ್ಧ ಪರಿಸ್ಥಿತಿ ನೆಲೆಸಲು ಸಾಧ್ಯ.
  • ‘ಈ ಮನುಷ್ಯನನ್ನು ಹೇಗೆ ನಂಬುವುದು’ ಅಂತ ಟೀವಿಯಲ್ಲಿ ಒಬ್ಬ ಹೆಂಗಸು ನನ್ನನ್ನು ಕುರಿತು ಹೇಳಿದಾಗ ನನ್ನ ಕರಳು ಚುರ್ರೆಂದಿತು. ಕಾರ್ಗಿಲ್‌ ಯುದ್ಧದ ರೂವಾರಿ ನಾನು ಎನ್ನಲಾಗುತ್ತಿದೆ. ಹೌದು, ಆಗ ನಾನು ಯುದ್ಧ ಪಡೆಗಳ ಮುಖ್ಯಸ್ಥನಾಗಿದ್ದೆ. ಕಾರ್ಗಿಲ್‌ ಯುದ್ಧ ಸಾಕಷ್ಟು ಜನರನ್ನು ನುಂಗಿಹಾಕಿದೆ, ನಿಜ. ಅದರಲ್ಲಿ ಮುಜಾಹಿದ್ದೀನ್‌ ಸಹ ಭಾಗಿಯಾಗಿತ್ತು.
  • ಕಾರ್ಗಿಲ್‌ ಬಗ್ಗೆ ಮಾತನಾಡುವ ನೀವುಗಳು- 1971ರ ಯುದ್ಧದಲ್ಲಿ ಏನಾಯಿತು? ಪಾಕಿಸ್ತಾನದ ವಿರುದ್ಧ ಕಾದಾಡಲು ಮುಕ್ತಿ ವಾಹಿನಿಗೆ ತರಪೇತಿ ಕೊಟ್ಟಾಗ, ಆದ ಅವಘಡಗಳೇನು? ಸಿಯಾಚಿನ್‌ ಮೇಲೆ ಭಾರತ ದಾಳಿ ನಡೆಸಿದಾಗ ಆದ ಲುಕಸಾನು ಎಂತಹುದು? ಎನ್ನುವುದನ್ನು ಏಕೆ ಹೇಳುವುದಿಲ್ಲ . ಇವೆಲ್ಲಕ್ಕೂ ಮೂಲ ಕಾಶ್ಮೀರ ಸಮಸ್ಯೆಯೇ. ಭಾರತ ಒಪ್ಪಲಿ ಬಿಡಲಿ ಕಾಶ್ಮೀರವೇ ಉಭಯ ರಾಷ್ಟ್ರಗಳ ನಡುವಣ ವೈಮನಸ್ಯದ ಕೇಂದ್ರ. ಅದನ್ನು ಬಗೆಹರಿಸುವುದೇ ಈಗ ನಮ್ಮ ಮುಂದಿರುವ ದೊಡ್ಡ ಸವಾಲು.
  • ಸಮಸ್ಯೆಯನ್ನು ಕಾಶ್ಮೀರ ವಿವಾದ ಎಂದು ಹೆಸರಿಸಲು ಭಾರತ ಮುಜುಗರ ಪಟ್ಟುಕೊಳ್ಳುವುದಾದರೆ, ಅದನ್ನು ಪ್ರಕರಣ ಎಂದು ಹೇಳಲು ನಾನು ಸಿದ್ಧ .
  • ಭಾರತ ಹಾಗೂ ಪಾಕಿಸ್ತಾನ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಆಗದಿದ್ದಲ್ಲಿ , ಮುಂದಿನ ಫ್ಲೈಟ್‌ನಲ್ಲೇ ನಾನು ವಾಪಸ್ಸಾಗಬೇಕು. ಇಲ್ಲವೇ, ದೆಹಲಿಯಲ್ಲಿನ ನೆಹರ್‌ವಾಲಿ ಹವೇಲಿಯನ್ನು ಖರೀದಿಸಿ, ಇಲ್ಲೇ ವಾಸಿಸಬೇಕು.
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X