Get Updates
Get notified of breaking news, exclusive insights, and must-see stories!

ವಾಜಪೇಯಿ ವಿಚಾರಗಳಲ್ಲಿ ನನಗೆ ಗೌರವವಿದೆ- ಮುಷರ್ರಫ್‌

ಆಗ್ರಾ : ಪಾಕಿಸ್ತಾನ- ಭಾರತದ ಬಹು ಮುಖ್ಯವಾದ ಸಮಸ್ಯೆ ಕಾಶ್ಮೀರ. ಅದಕ್ಕೇ ನನ್ನ ಒತ್ತು. ಹಾಗಂತ ಶೃಂಗಸಭೆಯಲ್ಲಿ ಬೇರೆ ವಿಷಯಗಳನ್ನು ಚರ್ಚಿಸುವುದಿಲ್ಲ ಎಂದು ನಾನು ಖಂಡಿತ ಹೇಳಿಲ್ಲ ಎಂದು ಪಾಕ್‌ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌ ಸ್ಪಷ್ಟಪಡಿಸಿದ್ದಾರೆ.

ಸ್ಟಾರ್‌ ನ್ಯೂಸ್‌ ಚಾನೆಲ್‌ನಲ್ಲಿ ಸೋಮವಾರ ಅವರು ಮಾತಾಡುತ್ತಿದ್ದರು. ನಾನು ಎರಡು ಯುದ್ಧಗಳಲ್ಲಿ ಭಾಗವಹಿಸಿರುವವನು. ಭಾರತ- ಪಾಕಿಸ್ತಾನ ಕಾದಾಡಿ, ಪರಸ್ಪರ ಕೊಂದಾಡಿರುವುದು ಕಾಶ್ಮೀರ ಸಮಸ್ಯೆಗೇ. ಈ ಸಮಸ್ಯೆ ಬಗೆಹರಿಸುವುದು ಎಷ್ಟು ಮುಖ್ಯ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತು. ಮಾತುಕತೆ ಸರಿಯಾದ ದಿಕ್ಕಿನಲ್ಲಿ ಸಾಗಿದೆ. ಭಾರತದ ಪ್ರಧಾನಿ ವಾಜಪೇಯಿ ಅವರ ನಿಲುವು, ವಿಚಾರಗಳು ಸ್ವಾಗತಾರ್ಹವಾದವು. ಅವುಗಳಿಗೆ ನನ್ನ ಗೌರವವಿದೆ ಎಂದು ಮುಷರ್ರಫ್‌ ಹೇಳಿದರು.

ನಾವು ಒಂದಾದ ನಂತರ ಒಂದರಂತೆ ಮೆಟ್ಟಿಲೇರಬೇಕು. ಮಾತುಕತೆ ಪ್ರಾರಂಭವಾಗಿರುವುದು ಮೊದಲ ಮೆಟ್ಟಿಲು. ಕಾಶ್ಮೀರ ಸಮಸ್ಯೆ ಚರ್ಚೆಯ ಮುಖ್ಯವಸ್ತು ಎಂಬುದನ್ನು ಅರಿಯುವುದು 2ನೇ ಮೆಟ್ಟಿಲು. ಹೀಗೇ ಹಂತಹಂತವಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು. ಆಗ ಉಭಯ ರಾಷ್ಟ್ರಗಳ ಸಭೆಯ ಉದ್ದಿಶ್ಯ ಈಡೇರಲಿದೆ ಎಂದು ತಿಳಿಸಿದರು.

ಎತ್ತಿನ ಕೊಂಬು ಹಿಡಿದು ನಿಲ್ಲಿಸಿ, ಅದರ ಮೇಲೆ ಗಾಡಿಯ ನೊಗ ಹೊರಿಸಿದಲ್ಲಿ ಮಾತ್ರ ಪಯಣ ಮುಂದುವರಿಸಲು ಸಾಧ್ಯ. ಚಿಕ್ಕ ರಾಷ್ಟ್ರದ ಹಿತಾಸಕ್ತಿಯನ್ನು ಅದಕ್ಕಿಂತ ದೊಡ್ಡ ರಾಷ್ಟ್ರ ತಿರಸ್ಕರಿಸುವಂತಿಲ್ಲ. ಸಮಾಲೋಚಿಸಿ, ತಾಳ್ಮೆಯಿಂದ ಪರಸ್ಪರ ಚರ್ಚಿಸಿ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಬೇಕು ಎಂದು ಹೇಳಿದ ಮುಷರ್ರಫ್‌, ಸೋಮವಾರದ ಚರ್ಚೆಯಲ್ಲಿ ನಮ್ಮ ಉದ್ದಿಶ್ಯ ಈಡೇರಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+