ಆಗಸ್ಟ್ ನಲ್ಲಿ ಚೀನಾಕ್ಕೆ ಭಾರತೀಯ ಐಟಿ ನಿಯೋಗ ಭೇಟಿ
ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ಚೀನಾ ಸರಕಾರ ಆಸಕ್ತಿ ಹೊಂದಿದ್ದು, ಐಟಿ ರಫ್ತಿಗೆ ಸಂಬಂಧಿಸಿದ ಭಾರತೀಯ ಸಮಿತಿಯು(ಇಎಸ್ಸಿ) ಆಗಸ್ಟ್ ತಿಂಗಳಿನಲ್ಲಿ ಪ್ರತಿನಿಧಿಗಳ ನಿಯೋಗವನ್ನು ಚೀನಾಕ್ಕೆ ಕಳುಹಿಸಿಕೊಡಲಿದೆ.
ಚೈನೀಸ್ ಎಕ್ಸ್ಪೋರ್ಟ್ ಕಮಿಷನ್ ಭಾರತೀಯ ಪ್ರತಿನಿಧಿಗಳ ಚೀನಾ ಭೇಟಿಯನ್ನು ಆಯೋಜಿಸಿದೆ. ಇತ್ತೀಚೆಗೆ ಚೀನಾದ ಪ್ರತಿನಿಧಿಗಳ ತಂಡ ಬೆಂಗಳೂರು ಮತ್ತು ಚೆನ್ನೈಯ ಐಟಿ ಕಂಪೆನಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಡಂಬಡಿಕೆಗಳ ಬಗ್ಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು.
ಸುಮಾರು ಹತ್ತಕ್ಕೂ ಹೆಚ್ಚು ಐಟಿ ಕಂಪೆನಿಗಳನ್ನು ಪ್ರತಿನಿಧಿಸುವ ಭಾರತೀಯ ನಿಯೋಗದ ನೇತೃತ್ವವನ್ನು ಇಎಸ್ಸಿ ಪ್ರಾದೇಶಿಕ ನಿರ್ವಹಣಾಕಾರ, ನಾಗರಾಜ ರಾವ್ ವಹಿಸಲಿದ್ದಾರೆ. ಸ್ಕೆನ್ಷೆನ್, ಗುಂಜ್ಗಾವೋ, ಷಾಂಗಾ ೖಗೆ ನಿಯೋಗವು ಭೇಟಿ ನೀಡಲಿದ್ದು, ಷಾಂಗಾೖಯಲ್ಲಿ ಸಿಇಬಿಐಟಿ ಏಷ್ಯಾ ಫೇರ್ ಒಂದರಲ್ಲಿ ಭಾಗವಹಿಸಲಿದೆ.
ವಿಯೆಟ್ನಾಂನ ಹಾಷಿಮೆನ್ ಸಿಟಿಯಲ್ಲಿ 6ನೇ ವಿಯೆಟ್ನಾಂ ಐಟಿ ಮೇಳ ಮತ್ತು ವಿಶ್ವ ಕಂಪ್ಯೂಟರ್ ರಫ್ತು ಮೇಳದಲ್ಲಿ ಭಾಗವಹಿಸಿದ ನಂತರ ತಂಡ ಭಾರತಕ್ಕೆ ವಾಪಾಸಾಗಲಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications