Get Updates
Get notified of breaking news, exclusive insights, and must-see stories!

ಆಗ್ರಾದಲ್ಲಿ ಐತಿಹಾಸಿಕ ಭಾರತ -ಪಾಕ್‌ ಶೃಂಗಸಭೆ ಆರಂಭ

ಆಗ್ರಾ : ಬಿಗಿ ಭದ್ರತೆಯ ನಡುವೆ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಮುಷರ್ರಫ್‌ ಅವರ ನಡುವೆ ಇಲ್ಲಿನ ಜೈಪೀ ಪ್ಯಾಲೇಸ್‌ ಹೊಟೆಲ್‌ನಲ್ಲಿ ಭಾನುವಾರ ಬೆಳಗ್ಗೆ 11-05ಕ್ಕೆ ಶೃಂಗಸಭೆಯ ಮಾತುಕತೆಗೆ ಚಾಲನೆ ದೊರೆತಿದೆ.

ಇದಕ್ಕೂ ಮುನ್ನ ಭಾನುವಾರ ಬೆಳಗ್ಗೆ 9.55ರ ಹೊತ್ತಿಗೆ ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್‌ ಅವರು ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನದಲ್ಲಿ ತಮ್ಮ 19 ಮಂದಿ ನಿಯೋಗದೊಂದಿಗೆ ಆಗ್ರಾದ ಕೇರಿಯಾ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಮುಷರ್ರಫ್‌ ಅವರನ್ನು ಉತ್ತರ ಪ್ರದೇಶದ ರಾಜ್ಯಪಾಲರಾದ ವಿಷ್ಣುಕಾಂತ್‌ ಶಾಸ್ತ್ರೀ, ಮುಖ್ಯಮಂತ್ರಿ ರಾಜನಾಥ್‌ ಸಿಂಗ್‌ ಹಾಗೂ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲು ವಾಜಪೇಯಿ ಅವರ ಸಚಿವ ಸಂಪುಟದ ಹಿರಿಯ ಸಚಿವರಾದ ಎಲ್‌.ಕೆ. ಆಡ್ವಾಣಿ, ಮುರಸೋಳಿ ಮಾರನ್‌, ಜಸ್ವಂತ್‌ ಸಿಂಗ್‌, ಯಶವಂತ ಸಿನ್ಹ, ಸುಷ್ಮಾ ಸ್ವರಾಜ್‌ ಮೊದಲಾದವರು ಈಗಾಗಲೇ ಆಗ್ರಾಕ್ಕೆ ಆಗಮಿಸಿದ್ದಾರೆ.

ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್‌ ಅವರೊಂದಿಗೆ ಅವರ ಪತ್ನಿ ಬೇಗಂ ಶೇಭಾ ಹಾಗೂ ವಿದೇಶಾಂಗ ಸಚಿವ ಅಬ್ದುಸ್‌ ಸತ್ತಾರ್‌ ಹಾಗೂ ಇತರ ಸದಸ್ಯರು ಆಗ್ರಾಕ್ಕೆ ಆಗಮಿಸಿದ್ದು, ಅವರಿಗೆ ಇಲ್ಲಿನ ಅಮರ್‌ ವಿಲಾಸ್‌ ಹೊಟೆಲ್‌ನಲ್ಲಿ ಬಿಡದಿ ಏರ್ಪಡಿಸಲಾಗಿದೆ.

ಅಮರ್‌ ವಿಲಾಸ್‌ನಿಂದ ಜೈಪೀ ಪ್ಯಾಲೇಸ್‌ಗೆ ಆಗಮಿಸಿದ ಮುಷರ್ರಫ್‌ ಅವರನ್ನು ಅಟಲ್‌ ಬಿಹಾರಿ ವಾಜಪೇಯಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಆಡ್ವಾಣಿ, ಯಶವಂತ್‌ ಸಿನ್ಹ ಮೊದಲಾದ ಹಿರಿಯ ಸಚಿವರು ಹಾಜರಿದ್ದರು. ಈಗ ಎರಡೂ ರಾಷ್ಟ್ರಗಳ ಪ್ರಮುಖರ ನಡುವೆ ಮಾತುಕತೆ ಆರಂಭವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+