ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೋಮವಾರದಿಂದ ತೆರೆಯಲಿದೆ ಶಬರಿಗಿರಿ ಅಯ್ಯಪ್ಪನ ದೇವಾಲಯ
ಪತನಂತಿಟ್ಟು : ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾ ಸ್ಥಳವಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಸೋಮವಾರದಿಂದ ಬಾಗಿಲು ತೆರೆಯಲಿದೆ. ಮಲೆಯಾಳಂ ಮಾಸವಾದ ಕರ್ಕಾಟಕಮ್ ದಿನವಾದ ಸೋಮವಾರ ಪ್ರಥಮ ಪೂಜೆಯಾಂದಿಗೆ ಅಯ್ಯಪ್ಪನ ದರ್ಶನ ಆರಂಭವಾಗಲಿದೆ.
ದೇಗುಲದ ಪ್ರಮುಖ ಪೂಜಾರಿ ವಿ.ಪಿ. ಶಂಭು ವಾದ್ಯಾರ್ ನಂಬೂದರಿ ಅವರು ಸೋಮವಾರ ಸಂಜೆ 5.50ಕ್ಕೆ ಗರ್ಭಗುಡಿಯ ಬಾಗಿಲು ತೆರೆದು ಸಾಂಪ್ರದಾಯಿಕ ದೀಪಗಳನ್ನು ಬೆಳಗಿಸುತ್ತಾರೆ. ನಿತ್ಯ ಪೂಜೆಗಳು ಜುಲೈ 17ರಿಂದ ವಿದ್ಯುಕ್ತವಾಗಿ ಆರಂಭವಾಗಲಿವೆ.
ಉದಯಾಸ್ತಮಾನ ಪೂಜೆ, ಪಡಿ ಪೂಜೆಯು ಜುಲೈ 21ರವರೆಗೆ ನಿತ್ಯವೂ ನಡೆಯಲಿದೆ. ವಿಶೇಷ ಪೂಜೆಗಳಾದ ಸಹಸ್ರ ಕಳಶಂ ಮತ್ತು ಕಲಭಾಭಿಷೇಕಂ ಪೂಜೆಗಳು ಜುಲೈ 21ರಂದು ನಡೆಯಲಿದೆ. ಗಿರಿ ಶಿಖರದಲ್ಲಿರುವ ಈ ದೇವಾಲಯವನ್ನು ಅತಳ ಪೂಜೆಯ ನಂತರ ಮತ್ತೆ ಜುಲೈ 21ರಂದು ರಾತ್ರಿ 10 ಗಂಟೆಗೆ ಮುಚ್ಚಲಾಗುವುದು.
(ಯು.ಎನ್.ಐ)
ಮುಖಪುಟ / ಇವತ್ತು... ಈ ಹೊತ್ತು...