ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಷರ್ರಫ್‌ರ ಇಸ್ಲಾಮಾಬಾದ್‌ ಆಹ್ವಾನ ಅಂಗೀಕರಿಸಿದ ಅಟಲ್‌

By Staff
|
Google Oneindia Kannada News

ಆಗ್ರಾ : ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಮುಷರ್ರಫ್‌ ಅವರು, ಇಸ್ಲಾಮಾಬಾದ್‌ಗೆ ಭೇಟಿ ನೀಡುವಂತೆ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಆಹ್ವಾನ ಇತ್ತಿದ್ದಾರೆ. ಪಾಕ್‌ ಅಧ್ಯಕ್ಷರ ಈ ಆಹ್ವಾನವನ್ನು ವಾಜಪೇಯಿ ಅವರು ಆನಂದದಿಂದ ಸ್ವೀಕರಿಸಿದ್ದಾರೆ.

ಆದರೆ, ಪ್ರಾಥಮಿಕ ಮಾಹಿತಿಗಳ ರೀತ್ಯ ಅಟಲ್‌ಜೀ ಅವರ ಇಸ್ಲಾಮಾಬಾದ್‌ ಭೇಟಿಯ ದಿನಾಂಕದ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ. ಉನ್ನತ ಮಟ್ಟದ ಸಭೆಯ ಸಮಾಲೋಚನೆಯ ನಂತರ ಪಾಕ್‌ಭೇಟಿಯ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಮೂಲಗಳು ತಿಳಿಸಿವೆ.

ಈ ಮಧ್ಯೆ ಆಗ್ರಾದ ಜೈಪೀ ಪ್ಯಾಲೆಸ್‌ನಲ್ಲಿ ಭಾನುವಾರ ಬೆಳಗ್ಗೆ ನಡೆದ ಅಟಲ್‌ - ಮುಷರ್ರಫ್‌ ನಡುವಣ ಮೊದಲ ಸುತ್ತಿನ ನೇರ ಮಾತುಕತೆ ಆಶಾದಾಯಕವಾಗಿದ್ದು, ಯಶಸ್ವಿಯಾಗಿದೆ ಎಂದು ಎರಡೂ ರಾಷ್ಟ್ರಗಳ ನಿಯೋಗದಲ್ಲಿರುವ ಉನ್ನತಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಕೇವಲ 15 ನಿಮಿಷಗಳ ಮಾತುಕತೆಗೆ ಕುಳಿತ ಎರಡೂ ದೇಶಗಳ ನಾಯಕರು, ಮಹತ್ವದ ವಿಷಯಗಳ ಬಗ್ಗೆ ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘವಾಗಿ ಚರ್ಚಿಸಿದರು.

ಭಾನುವಾರ ಸಂಜೆ 6-30ಕ್ಕೆ ಎರಡನೇ ಸುತ್ತಿನ ಮಾತುಕತೆಗಳು ಆರಂಭವಾಗಲಿವೆ. ಈ ಮಧ್ಯೆ ಭಾನುವಾರ ಸಂಜೆ ಮುಷರ್ರಫ್‌ ಅವರು ಸಪತ್ನೀಕರಾಗಿ ತಾಜ್‌ಮಹಲ್‌ಗೆ ಭೇಟಿ ನೀಡುವ ಕಾರ್ಯಕ್ರಮ ಇದ್ದು, ಆಗ್ರಾ ನಗರದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಸಾರ್ವಜನಿಕರಿಗೆ ತಾಜ್‌ ಮಹಲ್‌ ಪ್ರವೇಶ ನಿರಾಕರಿಸಲಾಗಿದೆ.

ಇಬ್ಬರು ನಾಯಕರೂ ಕಾಶ್ಮೀರ ವಿವಾದವೂ ಸೇರಿದಂತೆ ಎರಡೂ ರಾಷ್ಟ್ರಗಳ ವಾಣಿಜ್ಯ - ವ್ಯವಹಾರ ಹಾಗೂ ದ್ವಿಪಕ್ಷೀಯ ಬಾಂಧವ್ಯ ವರ್ಧನೆಯ ಕುರಿತು ಚರ್ಚೆ ನಡೆಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X