‘ಕಾಶ್ಮೀರ’- ಮುಷರ್ರಫ್ ನಿಲುವಿಗೆಅಮೇರಿಕಾ ಮಾಧ್ಯಮಗಳ ಟೀಕೆ
ವಾಷಿಂಗ್ಟನ್ : ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಸಲುವಾಗಿ ನಡೆಯಲಿರುವ ಭಾರತ- ಪಾಕ್ ಶೃಂಗಸಭೆಗೆ ಮುನ್ನವೇ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅಪಸ್ವರ ಎತ್ತಿರುವುದನ್ನು ಅಮೆರಿಕಾ ಮಾಧ್ಯಮಗಳು ಖಂಡಿಸಿವೆ.
ಇಂಡಿಯಾ ಅಂಡ್ ಪಾಕಿಸ್ತಾನ್ ಟ್ರೆೃ ಎಗೇನ್ ಎಂಬ ಶೀರ್ಷಿಕೆಯ ಸಂಪಾದಕೀಯ ವಾಷಿಂಗ್ಟನ್ ಟೈಮ್ಸ್‌ನಲ್ಲಿ ಪ್ರಕಟವಾಗಿದೆ. ಕೆಲವು ಮಂದಿ ಶೃಂಗಸಭೆಯಿಂದ ಸತ್ಫಲ ನಿರೀಕ್ಷಿಸುತ್ತಿರುವಾಗಲೇ ಮುಷರ್ರಫ್ ಪಾಕ್ ಪರವಾದ ನಿಲುವನ್ನೇ ಬಲವಾಗಿ ತಳೆದಿದ್ದಾರೆ. ಕಾಶ್ಮೀರ ಸಮಸ್ಯೆಯಾಂದೇ ಶೃಂಗಸಭೆಯ ಚರ್ಚೆಯ ವಸ್ತು ಎಂದು ಹೇಳಿ, ಈ ಮುನ್ನಾ ಆಡಿದ್ದ ಮಾತನ್ನು ಮುರಿದಿದ್ದಾರೆ ಎಂದು ಸಂಪಾದಕೀಯದಲ್ಲಿ ಟೀಕಿಸಿ ಬರೆಯಲಾಗಿದೆ.
ಕಳೆದ 6 ತಿಂಗಳ ಕಾಲ ಭಾರತ ಘೋಷಿಸಿದ್ದ ಕದನ ವಿರಾಮವನ್ನು ಮುಂದುವರೆಸಿ, ಕಾಶ್ಮೀರಿ ನಾಗರಿಕರ ಮೇಲಿನ ಹಿಡಿತ ಸಾಧಿಸಲು ಯತ್ನಿಸಬೇಕು. ಮುಷರ್ರಫ್ ಶಾಂತಿ ನಿಲುವನ್ನು ತಳೆದು, ಕಾಶ್ಮೀರಿ ಉಗ್ರವಾದಿಗಳಿಗೆ ಪಾಕ್ ಸರ್ಕಾರ ನೀಡುತ್ತಿರುವ ಬೆಂಬಲವನ್ನು ಕಡಿಮೆ ಮಾಡಬೇಕು. ಇಂಥಾ ಹೆಜ್ಜೆಗಳಿಂದ ಕಾಶ್ಮೀರದಲ್ಲಿ ತಂತಾನೇ ಶಾಂತಿ ನೆಲೆಸುತ್ತದೆ. ಪಾಕಿಸ್ತಾನ ಕೂಡ ಪ್ರಜಾಪ್ರಭುತ್ವವಾಗಿ ಮರು ರೂಪುಗೊಳ್ಳಲೂ ಸಾಧ್ಯವಾಗುತ್ತದೆ. ಜೊತೆಗೆ ಪಶ್ಚಿಮದೊಟ್ಟಿಗೆ ಸಂಬಂಧ ಉತ್ತಮವಾಗುತ್ತದೆ ಎಂದು ‘ಪೋಸ್ಟ್’ ಉಲ್ಲೇಖಿಸಿದೆ.
ಉಭಯ ರಾಷ್ಟ್ರಗಳೊಡನೆ ಎರಡು ವರ್ಷಗಳ ಉನ್ನತ ಮಟ್ಟದ ಮಾತುಕತೆಗೆ ಎಡರಾಗಿರುವುದೇ ಖುದ್ದು ಪರ್ವೇಜ್ ಮುಷರ್ರಫ್ ಎಂದು ಪತ್ರಿಕೆ ಖಂಡಾತುಂಡಾಗಿ ಟೀಕಿಸಿದೆ.
ಅಮೆರಿಕೆಯ ಹಿರಿಯ ಅಧಿಕಾರಿಯಾಬ್ಬರು ಪತ್ರಿಕೆಗೆ ತಮ್ಮ ಹೇಳಿಕೆ ಕೊಟ್ಟಿದ್ದು, ಆಗ್ರಾ ಶೃಂಗಸಭೆಯಿಂದ ಯಾವುದೇ ಬ್ರೇಕ್ ಥ್ರೂ ಸಿಗಲಾರದು. ಶೃಂಗಸಭೆ ಸತ್ಫಲ ಕಟ್ಟಿಕೊಡುತ್ತದೆ ಎಂದು ಯೋಚಿಸಲು ಪ್ರೇರೇಪಿಸುವ ಯಾವುದೇ ಬಲವಾದ ಕಾರಣಗಳೂ ಇಲ್ಲ ಎಂದಿದ್ದಾರೆ.
ಕಾಶ್ಮೀರದ ವಿಷಯದಲ್ಲಿ ಮುಷರ್ರಫ್ ರಾಜಿಗೆ ಬರುವ ಯಾವುದೇ ಲಕ್ಷಣಗಳೂ ಇಲ್ಲ. ಪಾಕ್ ಪರವೇ ಅವರ ಪಟ್ಟು ಅನ್ನೋದು ಶತಸಿದ್ಧ. ಸಮಸ್ಯೆಗೆ ಪೂರ್ಣ ವಿರಾಮ ಹಾಕುವ ಸಂಪೂರ್ಣ ಅಧಿಕಾರ ಕೂಡ ಮುಷರ್ರಫ್ ಅವರಿಗಿಲ್ಲ. ಹೀಗಿರುವಾಗ ಕಾಶ್ಮೀರ ಬಿಕ್ಕಟ್ಟು ಕಿತ್ತೆಸೆಯುವ ಯಾವುದೇ ಸಾಧ್ಯತೆಗಳೂ ಇಲ್ಲ ಎಂದು ‘ಪೋಸ್ಟ್’ ಟೀಕಿಸಿದೆ.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications