ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಷಿಂಗ್ಟನ್‌ ಡಿಸಿಯ ಕವನ ಪ್ರಶಸ್ತಿ ಸ್ಪರ್ಧೆಗೆ ಬೆಂಗಳೂರಿನ ಉಜ್ವಲ

By Staff
|
Google Oneindia Kannada News

ಬೆಂಗಳೂರು : ಅಮೆರಿಕದ ವಾಷಿಂಗ್ಟನ್‌ ಡಿಸಿಯಲ್ಲಿ ವಿಶ್ವ ಕಿರಿಯರ ಕವನ ಪ್ರಶಸ್ತಿಗಾಗಿ ಆಗಸ್ಟ್‌ ತಿಂಗಳಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕಿರಿಯರ ಕವನ ಸ್ಪರ್ಧೆಯಲ್ಲಿ ಭಾಗವಹಿಸಲು ಬೆಂಗಳೂರಿನ ಉಜ್ವಲ ತಿರುಮೂರ್ತಿ ಆಹ್ವಾನಿತರಾಗಿದ್ದಾರೆ.

ಮೌಂಟ್‌ ಕಾರ್ಮೆಲ್‌ ಕಾಲೇಜಿನ ಪದವೀಧರೆಯಾದ ಉಜ್ವಲ ಪ್ರಸ್ತುತ ಭಾರತೀಯ ವಿದ್ಯಾ ಭವನದಲ್ಲಿ ಪಬ್ಲಿಕ್‌ ರಿಲೇಶನ್ಸ್‌ ಕೋರ್ಸ್‌ ಮಾಡುತ್ತಿದ್ದಾರೆ. ಉಜ್ವಲ ಕವನ ಬರೆಯಲಾರಂಭಿಸಿದ್ದು ಇತ್ತೀಚೆಗಷ್ಟೇ. ಮಾರ್ಚ್‌ ನಲ್ಲಿ ಪೊಯೆಟ್ರಿ ಡಾಟ್‌ಕಾಮ್‌ ವೆಬ್‌ ಸೈಟ್‌ನಲ್ಲಿ ಉಜ್ವಲರ ಕವನ ದ ‘ಪವರ್‌ ಆಫ್‌ ಫ್ರೆಂಡ್‌ಶಿಪ್‌’ ತಿಂಗಳ ಉತ್ತಮ ಕವನವಾಗಿ ಆಯ್ಕೆಯಾಗಿತ್ತು. ಈಗ ವಿಶ್ವ ಕಿರಿಯರ ಕವನ ಪ್ರಶಸ್ತಿಗೆ ಸ್ಪರ್ಧಿಸಲು ಆಹ್ವಾನ ಬಂದಿರುವುದು ಕಂಡು ಉಜ್ವಲ ತುಂಬ ಖುಷಿಯಾಗಿದ್ದಾರೆ. ಆಗಸ್ಟ್‌ನಲ್ಲಿ ನಡೆಯಲಿರುವ ಕವಿಗಳ ಅಂತರರಾಷ್ಟ್ರೀಯ ಸೊಸಾೖಟಿಯ ವಾರ್ಷಿಕೋತ್ಸವದಲ್ಲಿಯೂ ಅವರು ಭಾಗವಹಿಸಲಿದ್ದಾರೆ.

ಹಣದ ತೊಂದರೆ
ಆಹ್ವಾನ ಬಂದಿರುವುದು ಕಂಡು ಖುಷಿಯಾದರೂ ಶುರುವಿಗೆ ಈ ಸೊಸಾೖಟಿಯ ಬಗ್ಗೆ ಸ್ವಲ್ಪ ಸಂಶಯ ಬಂದಿತ್ತು. ಆದರೆ ಅಪ್ಪ ಅಮ್ಮ ಅಮೆರಿಕಾದಲ್ಲಿನ ನೆಂಟರ ಬಳಿ ಇದು ನೋಂದಾಯಿತ ಸೊಸಾೖಟಿ ಎನ್ನುವುದನ್ನು ದೃಢ ಪಡಿಸಿಕೊಂಡಿದ್ದಾರೆ.

ಈ ಸ್ಪರ್ಧೆಗೆ ಪ್ರವೇಶ ಶುಲ್ಕವೇ 500 ಡಾಲರ್‌. ಆಕೆಯ ವಾಷಿಂಗ್ಟನ್‌ ಡಿಸಿ ಪ್ರವಾಸಕ್ಕೆ ಒಟ್ಟು 1.25 ಲಕ್ಷ ರೂ. ಖರ್ಚಾಗುತ್ತದೆ. ಏರ್‌ ಟಿಕೇಟ್‌ ವ್ಯವಸ್ಥೆಯಾಗಿದೆ. ಆದರೆ ಪ್ರವೇಶ ಶುಲ್ಕ ಮತ್ತು ಅಲ್ಲಿನ ವಸತಿಗೆ ಹಣ ಸಾಲದಾಗಿದೆ. ದಾನಿಗಳಿಂದ ಹಣ ನಿರೀಕ್ಷಿಸುತ್ತಿದ್ದೇವೆ ಎಂದು ಉಜ್ವಲರ ಅಪ್ಪ ತಿರುಮೂರ್ತಿ ಹೇಳುತ್ತಾರೆ. ಉಜ್ವಲ ಅವರ ಫೋನ್‌ ನಂ - 080- 8381628.

ಉಜ್ವಲ ಪ್ರಶಸ್ತಿ ಗೆದ್ದರೆ 20 ಸಾವಿರ ಡಾಲರ್‌ನಗದು ಹಾಗೂ ‘ಫ್ಲಾರೆನ್ಸ್‌ ಹೆಂಡರ್‌ಸನ್‌ ಆ್ಯಂಡ್‌ ವಿಲ್ಲಾರ್ಡ್‌ ಸ್ಕಾಟ್‌ ಪ್ರಶಸ್ತಿ ’ ಅವಳದಾಗುತ್ತದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X