ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ - ಫಾಕಿಸ್ತಾನ್‌ ಶೃಂಗಸಭೆ: ಶನಿವಾರದ ಮುಖ್ಯಾಂಶಗಳು

By Staff
|
Google Oneindia Kannada News

ನವದೆಹಲಿ : ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಮುಷರ್ರಫ್‌ ಅವರು ಶನಿವಾರ ಮಧ್ಯಾಹ್ನ 3-35ರಿಂದ ಸುಮಾರು 25 ನಿಮಿಷಗಳ ಕಾಲ ಭರತಭೂಮಿಯ ನೆನಪಿನಂಗಳದಲ್ಲಿ ವಿಹರಿಸಿದರು. ನಿಗದಿತ ವೇಳಾಪಟ್ಟಿಯಂತೆ ತಮ್ಮ ಪೂರ್ವಿಕರು ವಾಸಿಸುತ್ತಿದ್ದ ಹಳೆ ದೆಹಲಿಯ ಧರಿಯಾಗಂಜ್‌ನ - ನೆಹರ್‌ ವಾಲಿ ಹವೇಲಿಗೆ ಸಪತ್ನೀಕರಾಗಿ ಆಗಮಿಸಿದ ಅವರು, ತಮ್ಮ ಮುಂದಿನ ಕಾರ್ಯಕ್ರಮಕ್ಕೆ ಸಮಯ ಮೀರುತ್ತಿದ್ದರೂ ಕೂಡ ಸಾವಧಾನದಿಂದ ಪೂರ್ವಿಕರಿದ್ದ ನಿವಾಸದಲ್ಲಿ ಕೆಲ ಕಾಲ ಕಳೆದರು.

ಅಲ್ಲಿ ಏರ್ಪಡಿಸಲಾಗಿದ್ದ ಹವೇಲಿಯ ಹಿಂದಿನ ಹಾಗೂ ಇಂದಿನ ಛಾಯಾಚಿತ್ರ ಪದರ್ಶನವನ್ನು ವೀಕ್ಷಿಸಿದ ಅವರು, ಹವೇಲಿಯ ಇತಿಹಾಸವನ್ನೂ ಆಲಿಸಿದರು, ಅದೇ ಬಡಾವಣೆಯ ಹಿರಿಯ ನಾಗರಿಕರೊಂದಿಗೂ ಮಾತನಾಡಿದರು.

ನಿಗದಿತ ಸಮಯಕ್ಕಿಂತಲೂ ಹೆಚ್ಚು ಕಾಲವನ್ನು ಇಲ್ಲಿ ಕಳೆದ ಅವರು, ಭಾರತದ ಬುದ್ಧಿಜೀವಿಗಳೊಂದಿಗೆ ಹಾಗೂ ಹುರಿಯತ್‌ ನಾಯಕರೊಂದಿಗೆ ನಡೆಯಲಿರುವ ಭೇಟಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಒಲ್ಲದ ಮನಸ್ಸಿನಿಂದಲೇ ಹವೇಲಿಯಿಂದ ಹೊರನಡೆದರು.

ಶಾಂತಿ ಮಾತುಕತೆಗಾಗಿ ಜನರಲ್‌ ಮುಷರ್ರಫ್‌ ಭಾರತಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲೇ ಕಾಶ್ಮೀರ ಕಣಿವೆಯಲ್ಲಿ ಭಾರತ ಹಾಗೂ ಪಾಕ್‌ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇಬ್ಬರು ಗಾಯಗೊಂಡಿದ್ದಾರೆ ಎಂದೂ ವರ್ತಮಾನ ಬಂದಿದೆ. ಆದರೆ, ಆಸ್ತಿ ಪಾಸ್ತಿ, ಸಾವು- ನೋವಿನ ವಿವರ ತಿಳಿದುಬಂದಿಲ್ಲ. ಶನಿವಾರದ ಕೆಲವು ಮುಖ್ಯಾಂಶಗಳು.

  • ಮುಖಪುಟ / ಆಗ್ರಾ ಶೃಂಗಸಭೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X