ಬೀಜಿಂಗ್ಗೆ 2008 ನೇ ಸಾಲಿನ ಒಲಂಪಿಕ್ಸ್ ಆತಿಥ್ಯ
ಮಾಸ್ಕೋ : ಚೀನಾದ ರಾಜಧಾನಿ ಬೀಜಿಂಗ್ನಲ್ಲಿ 2008 ನೇ ಸಾಲಿನ ಒಲಂಪಿಕ್ಸ್ ಕ್ರೀಡಾಕೂಟ ನಡೆಸಲು ಅಂತರರಾಷ್ಟ್ರೀಯ ಒಲಂಪಿಕ್ ಸಮಿತಿ ಒಪ್ಪಿಕೊಂಡಿದೆ.
ಮಾಸ್ಕೋದಲ್ಲಿ ಶುಕ್ರವಾರ ಸಭೆ ಸೇರಿದ ಅಂತರರಾಷ್ಟ್ರೀಯ ಒಲಂಪಿಕ್ಸ್ ಸಮಿತಿಯ ಸದಸ್ಯರು ಒಲಂಪಿಕ್ಸ್ ಕ್ರೀಡಾಕೂಟದ ಆತಿಥ್ಯವನ್ನು ಚೀನಾಕ್ಕೆ ವಹಿಸಿಕೊಡಲು ಒಪ್ಪಿಕೊಂಡರು. ಕ್ರೀಡಾಕೂಟದ ಆತಿಥ್ಯ ವಹಿಸಲು ಬೀಜಿಂಗ್ನೊಂದಿಗೆ ಪ್ಯಾರಿಸ್, ಟೊರಾಂಟೊ ಹಾಗೂ ಒಸಾಕ ತೀವ್ರ ಸ್ಪರ್ಧೆ ಒಡ್ಡಿದ್ದವು.
ಒಲಂಪಿಕ್ಸ್ ನಡೆಸುವ ಸ್ಥಳವನ್ನು ನಿರ್ಧರಿಸಲು ಅಂತರರಾಷ್ಟ್ರೀಯ ಒಲಂಪಿಕ್ಸ್ ಸಮಿತಿಯ 105 ಸದಸ್ಯರು ಮತ ಚಲಾಯಿಸಿದರು. ಮೊದಲ ಸುತ್ತಿನಲ್ಲಿ ಯಾವುದೇ ನಗರಕ್ಕೆ ಸ್ಪಷ್ಟ ಬಹುಮತ ಕಂಡು ಬರಲಿಲ್ಲವಾದ್ದರಿಂದ ಎರಡನೆ ಸುತ್ತಿನಲ್ಲಿ ಮತ ಚಲಾವಣೆ ಮಾಡಲಾಯಿತು. ಅಂತಿಮವಾಗಿ ಬೀಜಿಂಗ್ 56 ಮತಗಳನ್ನು ಪಡೆದರೆ, ಟೊರಾಂಟೊ 22 ಮತಗಳನ್ನು ಹಾಗೂ ಪ್ಯಾರಿಸ್ 18 ಮತಗಳನ್ನು ಪಡೆದವು. ಇಸ್ತಾನ್ಬುಲ್ಗೆ 9 ಮತಗಳು ದೊರೆತರೆ, ಜಪಾನಿನ ಒಸಾಕ ಮೊದಲ ಸುತ್ತಿನಲ್ಲಿಯೇ ಸ್ಪರ್ಧೆಯಿಂದ ನಿರ್ಗಮಿಸಿತು.
ಚೀನಾದಲ್ಲಿ ಸಂಭ್ರಮ : 2008 ನೇ ಸಾಲಿನ ಒಲಂಪಿಕ್ಸ್ ನಡೆಸುವ ಗೌರವ ಬೀಜಿಂಗ್ಗೆ ದೊರೆತ ಸುದ್ದಿ ಪ್ರಕಟವಾದ ಕೂಡಲೇ, ಚೀನಾದಲ್ಲಿ ಸಂಭ್ರಮ ಹುಚ್ಚು ಹೊಳೆಯಾಗಿದೆ. ವಿಶ್ವ ನಮ್ಮನ್ನು ಗುರ್ತಿಸಿದೆ, ನಾವು ಗೆದ್ದೆವು ಎಂದು ಘೋಷಣೆಗಳನ್ನು ಕೂಗಿದ ಚೀನೀಯರು, ಬೀದಿಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಸುದ್ದಿಗಳು ಬೀಜಿಂಗ್ನಿಂದ ವರದಿಯಾಗಿವೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications