ಅಹಿಂಸೆಗಾಗಿ ಜೀವನವಿಡೀ ಹೋರಾಡಿದ ವ್ಯಕ್ತಿ ಗಾಂಧೀಜಿ- ಮುಷರ್ರಫ್
ನವದೆಹಲಿ : ತುಂತುರು ಮಳೆಯ ನಡುವೆ ರಾಜ್ಘಾಟ್ಗೆ ಪತ್ನಿಯಾಂದಿಗೆ ಆಗಮಿಸಿದ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಗಾಂಧಿ ಅವರ ಸಮಾಧಿಗೆ ಗೌರವ ಪೂರ್ವಕವಾಗಿ ಪುಷ್ಪಗುಚ್ಛ ಸಲ್ಲಿಸಿದರು.
ಅಹಿಂಸೆಗಾಗಿ ಜೀವನಪೂರ್ತಿ ಹೋರಾಟ ನಡೆಸಿದ ವ್ಯಕ್ತಿ ಗಾಂಧೀಜಿ . ಅವರ ಜೀವನ ಹಾಗೂ ಧ್ಯೇಯ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಆದರ್ಶವಾಗಿವೆ ಎಂದು ಮುಷರ್ರಫ್ ಗಾಂಧೀಜಿ ಅವರ ಬಗೆಗೆ ಸಂದೇಶ ಪುಸ್ತಕದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದರು. ಅಂದಹಾಗೆ, ರಾಜ್ಘಾಟ್ಗೆ ಆಗಮಿಸಿದ ಮೊದಲ ಪಾಕಿಸ್ತಾನ ನಾಯಕ ಎನ್ನುವ ಗೌರವ ಮುಷರ್ರಫ್ ಅವರದು.
ಗಾಂಧೀಜಿ ಅವರ ಸಮಾಧಿಗೆ ಗುಲಾಬಿ ಪಕಳೆಗಳನ್ನು ಸಲ್ಲಿಸಿದ ಮುಷರ್ರಫ್ ಒಂದು ನಿಮಿಷ ಕಾಲ ಶ್ರದ್ಧಾಂಜಲಿ ಸಲ್ಲಿಸಿದರು. ಫೋಟೋ ಕ್ಲಿಕ್ಕಿಸಲು ಅನುಕೂಲವಾಗುವಂತೆ ಪತ್ರಕರ್ತರ ಕೋರಿಕೆಯ ಮೇರೆಗೆ ಮುಷರ್ರಫ್ ಮತ್ತಷ್ಟು ಗುಲಾಬಿ ಪಕಳೆಗಳನ್ನು ಸಮಾಧಿಗೆ ಸಲ್ಲಿಸಿದರಾದರೂ, ಸುದ್ದಿಗಾರರ ಯಾವುದೇ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಅವರ ಒಂದು ಸಾಲಿನ ಉತ್ತರ- ‘ಪ್ರಶ್ನೆಗಳು ಆನಂತರ’.
ಇದೇ ಸಂದರ್ಭದಲ್ಲಿ ಹಿರಿಯ ಗಾಂಧಿವಾದಿ ನಿರ್ಮಲಾ ದೇಶಪಾಂಡೆ ಅವರು- ‘ದಿ ಮೈಂಡ್ ಆಫ್ ಮಹಾತ್ಮಗಾಂಧಿ’ ಸೇರಿದಂತೆ ಗಾಂಧೀಜಿ ಲೇಖನಗಳು, ಗಾಂಧಿ ಬಗೆಗಿನ ಸಿಡಿ ರೋಮ್ ಹಾಗೂ ಚರಕವೊಂದನ್ನು ಮುಷರ್ರಫ್ ಅವರಿಗೆ ಸ್ಮರಣಿಕೆಯಾಗಿ ನೀಡಿದರು.
(ಏಜೆನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications