ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವರು ಮುಷರ್ರಫ್‌

By Staff
|
Google Oneindia Kannada News

ಜನನ : 11.08.1943
ಜನ್ಮ ಸ್ಥಳ : ಭಾರತ (ಹಳೆಯ ದೆಹಲಿಯ ರಿಯಾಗಂಜ್‌ನಲ್ಲಿರುವ ನೆಹರ್‌ವಾಲಿ ಹವೇಲಿ). ದೇಶ ವಿಭಜನೆ ಸಂದರ್ಭದಲ್ಲಿ ಮುಷರ್ರಫ್‌ ಕುಟುಂಬ ಪಾಕಿಸ್ತಾನಕ್ಕೆ ವಲಸೆ ಹೋಯಿತು.

ತಂದೆ, ತಾಯಿ : ಜರೀಂ, ಮುಷಾರಪುದ್ದೀನ್‌
ವಿದ್ಯಾರ್ಹತೆ : ಪದವೀಧರ, ರಾಯಲ್‌ ಕಾಲೇಜ್‌ ಆಫ್‌ ಡಿಫೆನ್ಸ್‌ನಿಂದ ವಾರ್‌ ಕೋರ್ಸ್‌.
ವೈವಾಹಿಕ ಜೀವನ : 1968 ರಲ್ಲಿ ಬೇಗೆ ಷೆಬಾ ಅವರೊಂದಿಗೆ ಮದುವೆ. ಇಬ್ಬರು ಮಕ್ಕಳು. ಇಬ್ಬರಿಗೂ ಮದುವೆಯಾಗಿದೆ. ಮಗ ಬಿಲಾಲ್‌ (28) ಅಮೇರಿಕಾದಲ್ಲಿ ವಾಸ. ಮಗಳು ಐಲಾ ಕರಾಚಿಯಲ್ಲಿ .
ಧರ್ಮ, ನಂಬುಗೆ : ಶಿಯಾದಲ್ಲಿ ಜನಿಸಿದರೂ ಸುನ್ನಿ ಮಾರ್ಗ ಅನುಸರಣೆ. ಶಿಯಾಗಳ ಬಗ್ಗೆ ದ್ವೇಷ ಭಾವ. ದಿನಕ್ಕೆ 5 ಬಾರಿ ನಮಾಜು ಮಾಡುವ ನಿಷ್ಠಾವಂತ ಮುಸ್ಲಿಂ.
ಸ್ಫೂರ್ತಿ : ಆಧುನಿಕ ಟರ್ಕಿಯ ಜನಕ ಕಮಾಲ್‌ ಪಾಶಾ
ಬಲ್ಲ ಭಾಷೆಗಳು : ಟರ್ಕಿ ಭಾಷೆಯೆಂದರೆ ನೀರು ಕುಡಿದಷ್ಟು ಸಲೀಸು. ಇಂಗ್ಲೀಷ್‌, ಉರ್ದು ಕೂಡ ಚೆನ್ನಾಗಿ ಗೊತ್ತು.
ಸಂದ ಹುದ್ದೆಗಳು : 1964 ರಲ್ಲಿ ಪಾಕಿಸ್ತಾನ ಸೇನೆ ಸೇರ್ಪಡೆ. 1965, 1971 ರ ಭಾರತ ವಿರುದ್ಧದ ಯುದ್ಧದಲ್ಲಿ ಪಾಲ್ಗೊಂಡ ಅನುಭವ. 1998 ರಲ್ಲಿ ಸೇನೆಯ ಮುಖ್ಯಸ್ಥ . 1999 ರಲ್ಲಿ ಪಾಕ್‌ ಸರ್ವಾಧಿಕಾರಿ. 2001 ರಲ್ಲಿ ಪಾಕ್‌ ಅಧ್ಯಕ್ಷರಾಗಿ ಸ್ವ ಘೋಷಣೆ.
ಇವುಗಳೆಲ್ಲಾ ಇಷ್ಟ : ಟೆನ್ನಿಸ್‌, ಬ್ಯಾಂಡ್‌ಮಿಂಟನ್‌, ಗಾಲ್ಫ್‌ , ಬ್ರಿಡ್ಜ್‌ ಆಟಗಳ ಆಡುತ್ತಾರೆ. ನಾಯಿ ಸಾಕುತ್ತಾರೆ, ನಾಯಿಗಳನ್ನು ನಂಬುತ್ತಾರೆ. ಪಂಜಾಬಿ ಜಾನಪದ ಸಂಗೀತ, ಗಜಲ್‌ಗಳಿಗೆ ಮೈ ಮರೆಯುತ್ತಾರೆ. ಆಗಾಗ ಹಳೆಯ ಇಂಗ್ಲೀಷ್‌ ಸಿನಿಮಾ ನೋಡುವುದೂ ಉಂಟು. ಪಾಶ್ಚಾತ್ಯ ಸಂಗೀತ ಆರನೇ ಪ್ರಾಣ. ವಿಸ್ಕಿ ಕುಡಿಯುತ್ತಾರೆ.
ಅನುಯಾಯಿಗಳು ಹೇಳುವಂತೆ-
ಆಧುನಿಕ ಭಾವಗಳ ಉದಾರವಾದಿ. ನೀತಿಪರ ಅಧಿಕಾರಿ. ಭೂಮಂಡಲದ ಮೇಲೆ ಅಲ್ಲಾನ ಹೊಸದೂತ.
(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X