ಕರ್ಣಂ ಮಲ್ಲೇಶ್ವರಿ ಅಮ್ಮ ಆದರು, ಸ್ಟೆಫಿ ಅಮ್ಮ ಆಗುವರು
ಲಾಸ್ ವೇಗಾಸ್ : ಒಂದು ವರ್ಷ ಕಾಲ ಕಣದಿಂದ ಹೊರಕ್ಕುಳಿದಿರುವ ಭಾರತಕ್ಕೆ ಸಿಡ್ನಿ ಒಲಂಪಿಕ್ಸ್‌ನಲ್ಲಿ ಏಕೈಕ ಕಂಚಿನ ಪದಕ ಗೆದ್ದು ತಂದ ವೇಟ್‌ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಗುರುವಾರ ಅಮ್ಮನಾಗಿದ್ದಾರೆ. ಇದೇ ದಿನ ಬಂದ ಇನ್ನೊಂದು ಸುದ್ದಿ ಎಂದರೆ, ಟೆನಿಸ್ ತಾರೆಯರಾದ ಸ್ಟೆಫಿ ಗ್ರಾಫ್ ಹಾಗೂ ಆ್ಯಂಡ್ರೆ ಅಗಾಸ್ಸಿ ಅಮ್ಮ-ಅಪ್ಪ ಆಗಲಿದ್ದಾರೆ. ನವೆಂಬರ್ ತಿಂಗಳಲ್ಲಿ ಸ್ಟೆಫಿ ಮಗುವಿಗೆ ಜನ್ಮ ನೀಡಲಿದ್ದಾರೆ.
ಹರ್ಯಾಣದ ಯಮುನಾ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ಕೊಟ್ಟ ಕರ್ಣಂ ಮಲ್ಲೇಶ್ವರಿ, ಗುಡ್‌ವಿಲ್ ಮತು ಆಫ್ರೋ- ಏಷ್ಯನ್ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದಿಲ್ಲ. ತಾಯಿ- ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. 2002ನೇ ಇಸವಿಯಲ್ಲಿ ಫುಸಾನ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾ ಕೂಟ ಕರ್ಣಂಗೆ ಕಂ ಬ್ಯಾಕ್ ಆಗುವ ನಿರೀಕ್ಷೆಯಿದೆ.
ಅಮ್ಮ ಸ್ಟೆಫಿ, ಅಪ್ಪ ಅಗಾಸ್ಸಿ
ತಮಗೆ ಅದೃಷ್ಟವಾದ ಸ್ಟೆಫಿ ಅಮ್ಮನಾಗುತ್ತಿರುವುದು ತಮ್ಮ ಜೀವನದ ಇನ್ನೊಂದು ಅದೃಷ್ಟ ಎನ್ನುತ್ತಾರೆ ಅಗಾಸ್ಸಿ. 1997ರಲ್ಲಿ ಅಗಾಸ್ಸಿ ಬ್ರೂಕ್ ಷೀಲ್ಡ್ಸ್ ಎಂಬ ಸಿನಿಮಾ ನಟಿಯನ್ನು ಮದುವೆಯಾದರು. ಮದುವೆಯಿಂದ ಟೆನಿಸ್ ಕೆರಿಯರ್ರಿಗೆ ಕೊಡಲಿ ಪೆಟ್ಟು ಬಿತ್ತು. ಅಗಾಸ್ಸಿ ವಿಶ್ವದ 141ನೇ ರ್ಯಾಂಕಿಗೆ ಇಳಿದುಬಿಟ್ಟರು. 2 ವರ್ಷಗಳ ಕಾಲ ಕಷ್ಟ ಪಟ್ಟು ಸಂಸಾರ ನಡೆಸಿದ ಅಗಾಸ್ಸಿ ಹತಾಶರಾಗಿ ವಿಚ್ಛೇದನ ನೀಡಿದರು.
1999ರಲ್ಲಿ ಗ್ರಾಫ್‌ಗೆ ತುಂಬಾ ಹತ್ತಿರಾದ ಅಗಾಸ್ಸಿ ಕೆರಿಯರ್ ಸುಧಾರಿಸಿತು. ಮರಳಿ ಆಟದ ಮೊನಚು ಕಂಡುಕೊಂಡ ಅವರು ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದರು. ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ ಅಗಾಸ್ಸಿ ಅವರದು 3ನೇ ರ್ಯಾಂಕ್. 1999ರ ವಿಂಬಲ್ಡನ್ ಟೂರ್ನಿಯ ನಂತರ ನಿವೃತ್ತರಾದ ಗ್ರಾಫ್, ಅಗಾಸ್ಸಿ ಅವರೊಟ್ಟಿಗೆ ಜೀವನ ನಡೆಸಲಾರಂಭಿಸಿದರು.
ಅಂದಹಾಗೆ, ಗ್ರಾಫ್ ಹಾಗೂ ಅಗಾಸ್ಸಿ ಇನ್ನೂ ಮದುವೆಯಾಗಿಲ್ಲ. ಮಗು ಆಗುವ ಸುದ್ದಿ ಹೊರಬಿದ್ದಿರುವುದರಿಂದ ಸದ್ಯದಲ್ಲೇ ಮದುವೆಯನ್ನೂ ನಿರೀಕ್ಷಿಸಬಹುದು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications