ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದಿಂದ ರೋಹಿಣೀ ಉಪಗ್ರಹಕ್ಕೆ ಮರುಜೀವ

By Staff
|
Google Oneindia Kannada News

ಬೆಂಗಳೂರು : ಭಾರತೀಯ ಉಪಗ್ರಹ ಸಂಶೋಧನಾ ಕೇಂದ್ರ(ಇಸ್ರೋ ) ಉಡಾಯಿಸಿದ್ದ ರೋಹಿಣಿ ಸರಣಿಯ ಎಸ್‌ಆರ್‌ಓಎಸ್‌ಎಸ್‌- ಸಿ2 ಉಪಗ್ರಹವನ್ನು ಮತ್ತೆ ಒಂದು ವರ್ಷ ಕಾಲ ಮರು ಜೀವ ಪಡೆದುಕೊಂಡಿದೆ.

ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದ ಈ ಉಪಗ್ರಹದ ಅವಧಿ ಕಳೆದ ವರ್ಷದ ಜೂನ್‌ ತಿಂಗಳಿಗೆ ಅಂತ್ಯಗೊಂಡಿತ್ತಾದರೂ ಈಗ ಉಪಗ್ರಹದ ಕಕ್ಷೆಯನ್ನು ಬದಲಾಯಿಸುವ ಮೂಲಕ ಜೀವಿತಾವಧಿಯನ್ನು ಮತ್ತೊಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ.

ಕಕ್ಷೆಯಲ್ಲಿ ಸುಮಾರು ಏಳು ವರ್ಷಗಳ ಅವಧಿಯಲ್ಲಿ ಈ ಉಪಗ್ರಹ ಜಿಆರ್‌ಬಿ ಮತ್ತು ಆರ್‌ಪಿ ಎ ಸಾಧನಗಳ ಮೂಲಕ ಮಹತ್ವದ ವೈಜ್ಞಾನಿಕ ಅಂಕಿ ಅಂಶಗಳನ್ನು ಕಳುಹಿಸಿದ್ದು, ಈಗ ಮತ್ತೆ ಕಾರ್ಯನಿರ್ವಹಣೆಗೆ ಉಪಗ್ರಹ ಸಿದ್ಧವಾಗಿರುವುದಾಗಿ ಇಸ್ರೋ ಪ್ರಕಟಣೆ ತಿಳಿಸಿದೆ.

ಏಳು ವರ್ಷಗಳ ಹಿಂದೆ, 1994ರ ಮೇ 4 ರಂದು ಎಎಸ್‌ಎಲ್‌ವಿ ಉಡಾವಣಾ ವಾಹನದ ಮೂಲಕ ಶ್ರೀ ಹರಿಕೋಟಾದಿಂದ ರೋಹಿಣಿಯನ್ನು ಉಡಾಯಿಸಲಾಗಿತ್ತು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X