Get Updates
Get notified of breaking news, exclusive insights, and must-see stories!

‘ಸಿಮ್ಲಾ ಒಪ್ಪಂದ- ಲಾಹೋರ್‌ ಘೋಷಣೆ’ಗಳಿಗೆಮುಷರ್ರಫ್‌ ತಿರಸ್ಕಾರ

ದುಬೈ : ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌ ಅವರು ‘ಸಿಮ್ಲಾ ಒಪ್ಪಂದ’ ಹಾಗೂ ‘ಲಾಹೋರ್‌ ಘೋಷಣೆ’ಗಳನ್ನು ತಿರಸ್ಕರಿಸಿದ್ದು , ಪ್ರಮುಖ ಸಮಸ್ಯೆಯನ್ನು ಇತ್ಯರ್ಥ ಪಡಿಸುವಲ್ಲಿ ಅವುಗಳು ವಿಫಲವಾಗಿವೆ ಎಂದು ಹೇಳಿದ್ದಾರೆ. ಆಗ್ರಾ ಶೃಂಗಸಭೆಗೆ ಎರಡು ದಿನಗಳು ಬಾಕಿಯಿರುವ ಮುನ್ನ ಗಲ್ಫ್‌ ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಮುಷರ್ರಫ್‌ ಈ ವಿಷಯ ತಿಳಿಸಿರುವುದು ಗಮನಾರ್ಹ.

ಸಿಮ್ಲಾ ಒಪ್ಪಂದ ಹಾಗೂ ಲಾಹೋರ್‌ ಘೋಷಣೆಗಳು ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ . ಎರಡೂ ದೇಶಗಳ ನಡುವಣ ಪ್ರಮುಖ ವಿಷಯವೆಂದು ತಾವು ಭಾವಿಸುವ ಕಾಶ್ಮೀರವನ್ನು ಇವೆರಡೂ ಕಡೆಗಣಿಸಿರುವುದೇ ಅವುಗಳ ವಿಫಲತೆಗೆ ಕಾರಣವಾಗಿದೆ ಎಂದು ಮುಷರ್ರಫ್‌ ಅಭಿಪ್ರಾಯಪಟ್ಟಿದ್ದಾರೆ. ಉಭಯ ದೇಶಗಳ ನಡುವಣ ಅಂತರರಾಷ್ಟ್ರೀಯ ಗಡಿರೇಖೆ ಕ್ರಮಬದ್ಧತೆಯ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರುವ ಸಾಧ್ಯತೆಯನ್ನೂ ಅವರು ನಿರಾಕರಿಸಿದ್ದಾರೆ.

ಮಾತುಕತೆಗಳೆಷ್ಟೇ ನಡೆದರೂ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ
ಈ ನಡುವೆ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ಸ್ಪಷ್ಟಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಡಾ. ಫರೂಕ್‌ ಅಬ್ದುಲ್ಲಾ - ಎಷ್ಟೇ ಮಾತುಕತೆಗಳು ನಡೆದರೂ ಈ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವ ವಾಸ್ತವ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಶುಕ್ರವಾರ ಬೆಳಗ್ಗೆ ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+