Get Updates
Get notified of breaking news, exclusive insights, and must-see stories!

‘ಆಗ್ರಾ ಶೃಂಗಸಭೆ ಶಾಂತಿಸೌಧಕ್ಕೆ ಮೆಟ್ಟಿಲು’- ನೊಬೆಲ್‌ ವಿಜೇತರು

ನವದೆಹಲಿ : ನೊಬೆಲ್‌ ಪ್ರಶಸ್ತಿ ವಿಜೇತ ದಲೈ ಲಾಮಾ ಆಗ್ರಾ ಶೃಂಗಸಭೆಯನ್ನು ಸ್ವಾಗತಿಸಿದ್ದು, ಭಾರತ ಹಾಗೂ ಪಾಕ್‌ ನಡುವಣ ಬಾಂಧವ್ಯ ಉತ್ತಮ ಪಡಿಸುವಲ್ಲಿ ಅದು ಯಶಸ್ವಿಯಾಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ನಾನು 42 ವರ್ಷಗಳ ಕಾಲ ವಾಸ ಮಾಡಿದ್ದೇನೆ. ಭಾರತ ಮತ್ತು ಪಾಕಿಸ್ತಾನ ಪರಸ್ಪರ ಅರ್ಥ ಮಾಡಿಕೊಂಡು, ಸಂಬಂಧವನ್ನು ಉತ್ತಮ ಪಡಿಸಿಕೊಳ್ಳುವುದು ಅತ್ಯವಶ್ಯ ಎಂಬುದು ಬಹು ವರ್ಷಗಳ ಕಾಲ ನನ್ನನ್ನು ಬಲವಾಗಿ ಕಾಡಿತ್ತು. ಬಹುತೇಕ ಸ್ಪಷ್ಟ ಕಾರಣಗಳನ್ನು ತಳಕು ಹಾಕಿ ನೋಡಿದಾಗ, ಉಭಯ ರಾಷ್ಟ್ರಗಳ ನಡುವೆ ಸೌಹಾರ್ದಯುತ ಸಂಬಂಧ ಇಲ್ಲದಿರುವುದರಲ್ಲಿ ಯಾವುದೇ ಅರ್ಥವಿಲ್ಲ ಅನಿಸುತ್ತದೆ. ಎರಡೂ ರಾಷ್ಟ್ರಗಳ ನಡುವಣ ಪರಸ್ಪರ ಗುಮಾನಿ ಹಾಗೂ ಹೊಂದಾಣಿಕೆಯ ಭಾವನೆ ಇಲ್ಲದಿರುವುದನ್ನು ಮಾಧ್ಯಮಗಳಲ್ಲಿ ಕೇಳಿ, ನೋಡಿದಾಗ ಹೃದಯ ಭಾರವಾಗುತ್ತದೆ. ಅದರಲ್ಲೂ ಸರ್ಕಾರಿ ಮಟ್ಟದಲ್ಲಿ ಹೊಂದಾಣಿಕೆ ಇಲ್ಲವಾಗಿರುವುದು ತುಂಬಾ ಖೇದಕರ ಎಂದು ಲಾಮಾ ಹೇಳಿದ್ದಾರೆ.

ಜುಲೈ 12ರಂದು ನಡೆದ ಭಾರತೀಯರ-ಪಾಕಿಸ್ತಾನೀಯರ ಸೌಹಾರ್ದ ಸಮ್ಮೇಳನದಲ್ಲಿ -ಲಾ-ಮಾ ಈ ಸಂದೇಶ ನೀಡಿದರು. ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಸಂಬಂಧ ಚೆನ್ನಾಗೇ ಇದೆ. ಈ ವಿಷಯದಲ್ಲಿ ಜನರ ಕೊಡು- ಕೊಳ್ಳುವಿಕೆ ಉತ್ತಮವಾಗಿವೆ. ಇದು ಸರ್ವತೋಮುಖವಾಗಿ ನೆಲೆಸುವಂತೆ ಮಾಡುವಲ್ಲಿ, ಉಭಯ ರಾಷ್ಟ್ರಗಳ ನಡುವೆ ನಂಬುಗೆ ಹುಟ್ಟಿಸುವಲ್ಲಿ ಶೃಂಗಸಭೆ ಯಶಸ್ವಿಯಾಗಲಿ ಎಂದು ಲಾಮಾ ಹಾರೈಸಿದರು.

ಶಾಂತಿ ಬೇಕು : ಮತ್ತೊಬ್ಬ ನೊಬೆಲ್‌ ಪ್ರಶಸ್ತಿ ವಿಜೇತ, ಪೂರ್ವ ಟೈಮೋರ್‌ನ ವಿದ್ವಾಂಸ ರಾಮೋಸ್‌- ಹೋರ್ಟಾ ಹೀಗೆಂದಿದ್ದಾರೆ : ಭಾರತ ಮತ್ತು ಪಾಕಿಸ್ತಾನದ ಜನರಿಗೆ ಶಾಂತಿ, ಸೌಹಾರ್ದತೆ, ಹೊಂದಾಣಿಕೆ ಈಗ ಅತ್ಯಗತ್ಯವಾಗಿದೆ. ಬಿಕ್ಕಟ್ಟುಗಳ ಬುಡ ಸಮೇತ ಕಿತ್ತೊಗೆಯಲು ಅನುವಾಗುವಂತೆ ನೀತಿಗಳನ್ನು ರೂಪಿಸುವಲ್ಲಿ ಜಗತ್ತಿನ ನಾಗರಿಕ ಸಮಾಜ ಮುಖ್ಯ ಪಾತ್ರ ವಹಿಸುತ್ತಿದೆ. ಭಾರತ- ಪಾಕ್‌ ಶೃಂಗಸಭೆ ಯಶಸ್ವಿಯಾಗಲಿದೆ.

ಸಾವಿನಾಟ ಸಾಕು : ದಕ್ಷಿಣ ಏಷ್ಯಾದಲ್ಲಿ ಬಿಕ್ಕಟ್ಟುಗಳು ಅತಿಯಾಗಿವೆ. ಎರಡು ದೇಶಗಳು ಪರಮಾಣು ಶಕ್ತವಾಗುವುದು ಇಡೀ ಜಗತ್ತಿಗೇ ಎಚ್ಚರಿಕೆಯ ಕರೆಗಂಟೆ. ಈಗಾಗಲೇ ಸಾಕಷ್ಟು ಜೀವಗಳು ಉರುಳಿವೆ. ಆಸ್ತಿ- ಪಾಸ್ತಿಗಳು ಹಾಳಾಗಿವೆ. ಇನ್ನು ಮುಂದಾದರೂ ಹೀಗೆ ಆಗದಿರಲಿ. ಹೊಂದಾಣಿಕೆ ನೆಲೆಯೂರಲಿ ಎಂದು ಹಾಗ್‌ ಅಪೀಲ್‌ ಫಾರ್‌ ಪೀಸ್‌ ಅಧ್ಯಕ್ಷ ಕೋರಾ ವೀಸ್‌ ಹಾರೈಸಿದ್ದು, ಭಾರತ- ಪಾಕ್‌ ಶೃಂಗಸಭೆಗೆ ಬೆಂಬಲ ಸೂಚಿಸಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+