ಮುಷರ್ರಫ್ ಅವರಿಗಾಗಿ ಕಾತರಿಸುತ್ತಿರುವ ಹುಸೇನರ ಕುದುರೆಗಳು
ಮುಂಬಯಿ : ಗಜಗಾಮಿನಿ ನಂತರ ಮೆತ್ತಗಾಗಿದ್ದ ಎಂ.ಎಫ್. ಹುಸೇನರ ಕುಂಚ ಮತ್ತೆ ಕಳೆಗಟ್ಟಿದೆ. ಮಾಧುರಿಯನ್ನು ಚಿತ್ರಿಸುವುದರಲ್ಲಿ ಸೋರಿ ಹೋದಂತಿದ್ದ ಅವರ ಕಲ್ಪನಾ ವಿಲಾಸವೂ ಗರಿಗೆದರಿದೆ. ಅವರ ಯಾವತ್ತಿನ ಪ್ರೀತಿಯ ಕುದುರೆಗಳು ಮತ್ತೆ ಮೂಡಿಬಂದಿವೆ, ಹುಚ್ಚಿನಿಂದಲ್ಲ - ಶಾಂತಿಯ ಸಂದೇಶದೊಂದಿಗೆ.
ಹುಸೇನರ ಹುಮ್ಮಸ್ಸಿಗೂ ಒಂದು ಕಾರಣವಿದೆ. ಶಾಂತಿಯ ಸಂದೇಶವನ್ನು ಬಿಂಬಿಸುವ ಕುದುರೆಗಳನ್ನು ಚಿತ್ರಿಸುವ ಜವಾಬ್ದಾರಿಯನ್ನು ಅವರಿಗೆ ಹೊರಿಸಿದ್ದು ಪ್ರಧಾನಿ ವಾಜಪೇಯಿ. ಹುಸೇನರ ಚಿತ್ರವನ್ನು ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ಅವರಿಗೆ ವಾಜಪೇಯಿ ಕಾಣಿಕೆಯಾಗಿ ನೀಡುತ್ತಿದ್ದಾರೆ.
ಇಂಥದೊಂದು ಕಲಾಕೃತಿ ರಚಿಸಿಕೊಡುವಂತೆ ಪ್ರಧಾನಿ ಕೇಳಿದರು, ಅದರಂತೆ ರಚಿಸಿದ್ದೇನೆ ಎನ್ನುವ ಹುಸೇನ್- ಶಾಂತಿಯ ಸಂದೇಶ ತಮ್ಮ ಚಿತ್ರದ ಮುಖ್ಯಾಂಶ ಎನ್ನುವುದನ್ನು ಒತ್ತಿ ಹೇಳುತ್ತಾರೆ. ಕಲಾಕೃತಿಯಲ್ಲಿ ಎರಡು ಕುದುರೆಗಳಿವೆ. ಒಂದಕ್ಕೆ ಕೇಸರಿ ಬಣ್ಣದ ಲಗಾಮು, ಮತ್ತೊಂದು ಕುದುರೆಯ ಲಗಾಮಿನ ಬಣ್ಣ ಹಸುರು. ಭಾರತ ಹಾಗೂ ಪಾಕಿಸ್ತಾನವನ್ನು ಈ ಬಣ್ಣಗಳುು ಬಿಂಬಿಸುತ್ತವಂತೆ.
ಕೊಕ್ಕಿನಲ್ಲಿ ಆಲೀವ್ ಟೊಂಗೆ ಕಚ್ಚಿ ಹಿಡಿದಿರುವ ಪಕ್ಷಿ ಎರಡೂ ಕುದುರೆಗಳ ಲಗಾಮನ್ನು ಹಿಡಿದಿದೆ. ಪಕ್ಷಿ ಆಕಾಶವನ್ನು ಸೂಚಿಸುತ್ತಿದೆ ಎಂದು ತಮ್ಮ ಕಲಾಕೃತಿಯನ್ನು ಹುಸೇನ್ ಬಣ್ಣಿಸುತ್ತಾರೆ. ಪಕ್ಷಿ ಶಾಂತಿಯ ಸಂಕೇತ, ಕುದುರೆಯ ಬಿಳಿ ಬಣ್ಣ ಸ್ವಚ್ಛಚೆಯ ಪ್ರತೀಕ ಎನ್ನುವ ಹುಸೇನ್, ಇಬ್ಬರೂ ನಾಯಕರು ಶಾಂತಿಗಾಗಿ ಭೇಟಿ ಮಾಡುತ್ತಿದ್ದಾರೆ ಎನ್ನುತ್ತಾರೆ. ಶಾಂತಿ, ಗೆಳೆತನ ಹಾಗೂ ಜ್ಞಾನ ಕುರಿತು ಹೇಳುವ ಅರೇಬಿಕ್ ನುಡಿಗಟ್ಟು ಕೂಡ ಕ್ಯಾನ್ವಾಸ್‌ನಲ್ಲಿದೆ.
ವಿದೇಶಿ ಗಣ್ಯರೊಬ್ಬರಿಗೆ ಹುಸೇನರ ಕಲಾಕೃತಿ ಕೊಡುಗೆಯಾಗಿ ಹೋಗುತ್ತಿರುವುದು ಇದೇ ಮೊದಲೇನಲ್ಲ . ಈ ಮುನ್ನ ಅಮೇರಿಕಾ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಹಾಗೂ ರೊನಾಲ್ಡ್ ರೇಗನ್ ಅವರಿಗೂ ಹುಸೇನರ ಮಾಸ್ಟರ್ ಪೀಸ್‌ಗಳನ್ನು ಕೊಡುಗೆಯಾಗಿ ನೀಡಲಾಗಿತ್ತು . ಅಂದಹಾಗೆ, ಆಗ್ರಾ ಶೃಂಗಸಭೆಯ ಫಲಶ್ರುತಿಯ ಬಗ್ಗೆ ಹುಸೇನರು ಏನನ್ನೂ ಹೇಳುವುದಿಲ್ಲ . ನಾನು ಹೇಳಬೇಕಾದುದೆಲ್ಲವನ್ನು ಕಲಾಕೃತಿಯಲ್ಲೇ ಹೇಳಿದ್ದೇನೆ ಅನ್ನುವುದಷ್ಟೆ ಅವರ ಪ್ರತಿಕ್ರಿಯೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications