• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಡಿತರ ವ್ಯವಸ್ಥೆ : ಅಕ್ಕಿ-ಗೋಧಿ ಬೆಲೆಯಲ್ಲಿ ಶೇ 30ರಷ್ಟು ಕಡಿತ

By Staff
|

ನವದೆಹಲಿ : ಬಡತನ ರೇಖೆಗಿಂತ ಮೇಲಿನ ವರ್ಗದವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನೀಡುವ ಅಕ್ಕಿ ಮತ್ತು ಗೋಧಿಯ ಬೆಲೆಯನ್ನು ಸರಕಾರವು ಶೇ 30ರಷ್ಟು ಇಳಿಸಿದೆ.

ಆಹಾರ ಧಾನ್ಯ ದಾಸ್ತಾನನ್ನು ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಗೋಧಿ ಉತ್ಪನ್ನಗಳ ರಫ್ತಿಗಾಗಿ, ರೋಲರ್‌ ಹಿಟ್ಟಿನ ಗಿರಣಿಗಳಿಗೆ 20 ಲಕ್ಷ ಟನ್‌ ವರೆಗೆ ಗೋಧಿ ಒದಗಿಸಲು ಭಾರತೀಯ ಆಹಾರ ನಿಗಮಕ್ಕೆ ಸರಕಾರ ಅನುಮತಿ ನೀಡಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್‌ ಮಹಾಜನ್‌, ಈ ವ್ಯವಸ್ಥೆ 2002ರ ಮಾರ್ಚ್‌ 31ರವರೆಗೆ ಜಾರಿಯಲ್ಲಿರುತ್ತದೆ. ಆದರೆ ಅದಕ್ಕೆ ಮುಂಚೆಯೇ ದಾಸ್ತಾನು ಮುಗಿದರೆ ತಕ್ಷಣ ಈ ವ್ಯವಸ್ಥೆಯನ್ನು ನಿಲ್ಲಿಸಲಾಗುವುದು ಎಂದರು.

ಹೊಸ ವ್ಯವಸ್ಥೆಯ ಪ್ರಕಾರ ಗೋಧಿ ಬೆಲೆ ಕ್ವಿಂಟಾಲ್‌ಗೆ 220 ರೂಗಳಷ್ಟು ಕಡಿಮೆಯಾಗಿ 610 ರೂ. ಹಾಗೂ ಅಕ್ಕಿ ಬೆಲೆ ಕ್ವಿಂಟಾಲ್‌ಗೆ 300ರಷ್ಟು ಇಳಿದು 830 ರೂ. ಆಗಲಿದೆ. ಈ ವ್ಯವಸ್ಥೆಯಿಂದಾಗಿ ಬಡತನ ರೇಖೆಗಿಂತ ಕೆಳಗಿನವರಿಗೆ ನೀಡುತ್ತಿರುವ ಪಡಿತರ ಗೋಧಿ ಮತ್ತು ಅಕ್ಕಿ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X