Get Updates
Get notified of breaking news, exclusive insights, and must-see stories!

ವೀರಪ್ಪನ್‌ ತಂಡದ ಬಗ್ಗೆ ಮತ್ತಷ್ಟು ಸುಳಿವು, ಶಿಕಾರಿಗೆ ಸಜ್ಜಾದ ಪಡೆ

ಮೈಸೂರು : ಕಾಡುಗಳ್ಳ ವೀರಪ್ಪನ್‌ ಬಗ್ಗೆ ಈಗ ಮತ್ತಷ್ಟು ಮಹತ್ವದ ಸುಳಿವು ಜಂಟಿ ಕಾರ್ಯಪಡೆ ಪೊಲೀಸರಿಗೆ ದೊರಕಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಪ್ರವೇಶಿಸಲು, ಸತ್ಯಮಂಗಲದ ಕರಟ್ಟೂರು ಕೇಂದ್ರದ ಸುಮಾರು ಸಾವಿರಕ್ಕೂ ಹೆಚ್ಚು ಎಸ್‌.ಟಿ.ಎಫ್‌. ಯೋಧರು ಸಜ್ಜಾಗಿದ್ದಾರೆ.

ಮಂಗಳವಾರ ಯಾವುದೇ ಕ್ಷಣದಲ್ಲಿ ಈ ಯೋಧರು ಅರಣ್ಯಕ್ಕೆ ನುಗ್ಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಾರ್ಯಪಡೆಯ ವರಿಷ್ಠಾಧಿಕಾರಿಗಳಿಗೆ ವೀರಪ್ಪನ್‌ ಹಾಗೂ ಅವನ ಸಹಚರರು ಬೀಡುಬಿಟ್ಟಿರುವ ಸ್ಥಳದ ಸುಳಿವು ದೊರೆತಿದೆ. ಆದರೆ, ವೀರಪ್ಪನ್‌ ಎಲ್ಲಿ ಅಡಗಿದ್ದಾನೆ ಎಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

ತಮಗೆ ದೊರೆತಿರುವ ಸ್ಪಷ್ಟ ಹಾಗೂ ನಿಖರ ಮಾಹಿತಿಯ ಮೇರೆಗೆ ತಮಿಳುನಾಡಿನ ಪ್ರತಿ ಜಿಲ್ಲೆಯಿಂದ 50 ಯೋಧರನ್ನು ಎಸ್‌.ಟಿ.ಎಫ್‌. ಬಲವರ್ಧನೆಗೆ ಕರೆಸಿಕೊಳ್ಳಲಾಗಿದ್ದು, ಮಂಗಳವಾರ ಬಣ್ಣಾರಿ, ಗುಂಡೇರಿಪಳ್ಳಂ, ಕಡಂಬೂರು ಅರಣ್ಯ ವ್ಯಾಪ್ತಿಯಲ್ಲಿ ಬಿರುಸಿನ ಕಾರ್ಯಾಚರಣೆ ಆರಂಭವಾಗಲಿದೆ.

ಕರ್ನಾಟಕ ಆರಣ್ಯ ಪ್ರದೇಶವನ್ನು ಈಗಾಗಲೇ ಎಸ್‌.ಟಿ.ಎಫ್‌. ಯೋಧರು ಸುತ್ತುವರಿದಿದ್ದು, ಕೇರಳ ಕಾಡಿಗೆ ವೀರಪ್ಪನ್‌ ಪಲಾಯನ ಮಾಡದಂತೆ ತಡೆಯಲು ಶಿರುಮುಗೈ, ಗಾಂಧವಯಲ್‌ ಹಾಗೂ ಪಿಲ್ಲೂರು ಡ್ಯಾಂ ಕಾನನ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ ಎಂದು ಎಸ್‌.ಟಿ.ಎಫ್‌. ಮೂಲಗಳು ಹೇಳಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+