ಜಾಗತಿಕ ತಾಂತ್ರಿಕ ಸೃಜನಶೀಲತೆಯಲ್ಲಿ ಬೆಂಗಳೂರಿಗೆ 4ನೇ ರ್ಯಾಂಕ್
ವಿಶ್ವಸಂಸ್ಥೆ : ಜಾಗತಿಕ ಮಟ್ಟದ ತಾಂತ್ರಿಕ ಸೃಜನಶೀಲತೆಯಲ್ಲಿ ಬೆಂಗಳೂರಿಗೆ 16ಕ್ಕೆ 13 ಅಂಕ !
ವಿಶ್ವಸಂಸ್ಥೆ ಮಂಗಳವಾರ ಪ್ರಕಟಿಸಿದ ಪ್ರಕಟಣೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ವರದಿಯಲ್ಲಿ 46 ಜಾಗೆಗಳನ್ನು ಜಾಗತಿಕ ಕೇಂದ್ರಗಳೆಂದು ಗುರುತಿಸಲಾಗಿದ್ದು, ತಾಂತ್ರಿಕ ಸೃಜನಶೀಲತೆಯಲ್ಲಿ ಅಮೆರಿಕೆಯ ಸಿಲಿಕಾನ್ ಕಣಿವೆಗೆ 16ಕ್ಕೆ ಹದಿನಾರೂ ಅಂಕಗಳು ಲಭಿಸಿವೆ.
ಬೋಸ್ಟನ್ (ಅಮೆರಿಕ), ಸ್ಟಾಕ್‌ಹೋಮ್- ಕಿಸ್ತಾ (ಸ್ವೀಡನ್) ಹಾಗೂ ಇಸ್ರೇಲಿಗೆ ತಲಾ 15 ಅಂಕಗಳು ಸಂದಿವೆ. 14 ಅಂಕ ಗಳಿಸಿರುವ ಅಮೆರಿಕೆಯ ರಲೀ-ದರ್ಹ್ಯಾಮ್-ಚಾಪೆಲ್ ಹಾಗೂ ಲಂಡನ್‌ಗೆ ಮೂರನೇ ಸ್ಥಾನ. ಆ್ಯಸ್ಟಿನ್, ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ತಯ್ಪೀ ನಾಲ್ಕನೇ ಸ್ಥಾನವನ್ನು ಬೆಂಗಳೂರು ನಗರಿಯಾಟ್ಟಿಗೆ ಹಂಚಿಕೊಂಡಿವೆ. ಟುನಿಸಿಯಾದ ಎಲ್ ಘಝಾಲ, ಹಾದೂ ದಕ್ಷಿಣ ಆಫ್ರಿಕದ ಗೌಟೆಂಗ್‌ಗೆ ಅತಿ ಕಡಿಮೆ ಅಂಕಗಳು ಸಿಕ್ಕಿವೆ.
ವಿಶ್ವವಿದ್ಯಾಲಯಗಳಲ್ಲಿ ಬೋಧನಾ ಕ್ಷೇತ್ರಗಳ ವಿಸ್ತರಣೆ, ಸಂಶೋಧನೆಗೆ ಒತ್ತು, ಹೊಸತನದ ತುಡಿತ ತುಂಬುವ ಶಿಕ್ಷಣ, ಚಾಕಚಕ್ಯ ಸಿಬ್ಬಂದಿಗಳ ತಯಾರಿ, ಸೃಜನಶೀಲತೆಯ ನಡೆಯಲ್ಲಿ ತ್ರಾಸಿಗೆ ಬೆನ್ನುತೋರದಿರುವುದು, ಪರಿಣತಿ ಸಿಬ್ಬಂದಿ ಹಾಗೂ ಆರ್ಥಿಕ ಸ್ಥಿರತೆ ಕಟ್ಟಿಕೊಡಬಲ್ಲ ಬಹುರಾಷ್ಟ್ರೀಯ ಕಂಪನಿಗಳು, ವೆಂಚರ್ ಬಂಡವಾಳ ಹೂಡಲು ಸಿದ್ಧವಿರುವ ಜನಸಂಖ್ಯೆ, ಪ್ರಸ್ತುತ ಹೂಡಲಾಗಿರುವ ವೆಂಚರ್ ಬಂಡವಾಳ... ಇವನ್ನೆಲ್ಲಾ ಸಾಕಷ್ಟು ಹುದುಗಿಸಿಟ್ಟಿಕೊಂಡಿರುವ ನಗರಿಗಳಿಗೆ ರ್ಯಾಂಕಿನ ಯಾದಿಯಲ್ಲಿ ಪ್ರಾಶಸ್ತ್ಯ ಕೊಡಲಾಗಿದೆ.
(ಏಜೆನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications