ಪಿಟಿವಿಯಲ್ಲಿ ಮುಷರ್ರಫ್ ಭಾರತ ಭೇಟಿಯ ನೇರ ಪ್ರಸಾರ
ಇಸ್ಲಮಾಬಾದ್ : ಜುಲೈ 14 ರಿಂದ ಪ್ರಾರಂಭವಾಗುವ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರ ಮೂರು ದಿನಗಳ ಭಾರತ ಭೇಟಿಯ ಮುಖ್ಯಾಂಶಗಳನ್ನು ಪಾಕ್ ಟೆಲಿವಿಷನ್ (ಪಿಟಿವಿ) ನೇರ ಪ್ರಸಾರ ಮಾಡಲಿದೆ.
ಜುಲೈ 14 ರಿಂದ 16 ರವರೆಗಿನ ನವದೆಹಲಿ, ಆಗ್ರಾ, ಜೈಪುರ ಹಾಗೂ ಅಜ್ಮೀರ್ಗಳಲ್ಲಿನ ಮುಷರ್ರಫ್ ಅವರ ಕಾರ್ಯಕ್ರಮಗಳ ಮುಖ್ಯ ಭಾಗಗಳನ್ನು ನೇರ ಪ್ರಸಾರ ಮಾಡುವುದಕ್ಕಾಗಿ ಪಿಟಿವಿ ಎರಡು ವಿಶೇಷ ತಂಡಗಳನ್ನು ರಚಿಸಿದೆ. ಆನ್ಲೈನ್ ಸುದ್ದಿ ಸಂಸ್ಥೆ ಈ ವಿಷಯವನ್ನು ವರದಿ ಮಾಡಿದೆ.
ಭಾರತ ಸರ್ಕಾರಿ ಸ್ವಾಮ್ಯದ ದೂರದರ್ಶನದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿರುವ ಪಿಟಿವಿ, ಸ್ಟಾರ್ ಟಿವಿಯಾಂದಿಗೂ ಮುಷರ್ರಫ್ ಅವರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ ಸಂಪರ್ಕ ಸಾಧಿಸಿದೆ. ಪಿಟಿವಿ ರೂಪಿಸಿರುವ ತಂಡಗಳಲ್ಲಿ ಮೊದಲನೆ ತಂಡ ಜುಲೈ 11 ರಂದೇ ದೆಹಲಿಗೆ ಬಂದು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಲಿದೆ. ಮುಷರ್ರಫ್ ಅವರ ಸುದ್ದಿಗೋಷ್ಠಿಗಳು, ಸಭೆಗಳು, ಭಾರತದ ಅಧಿಕಾರಿಗಳೊಂದಿಗೆ ಮಾತುಕತೆ ಮುಂತಾದ ಕಾರ್ಯಕ್ರಮಗಳನ್ನು ಪಿಟಿವಿ ಬಿತ್ತರಿಸಲಿದೆ ಎಂದು ಹಿರಿಯ ಅಧಿಕಾರಿಯಾಬ್ಬರು ಹೇಳಿದ್ದಾರೆ.
ಭಾರತದ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಹಾಗೂ ಗೃಹ ಸಚಿವ ಎಲ್.ಕೆ. ಅಡ್ವಾಣಿ ಅವರ ಸಂದರ್ಶನ ನಡೆಸಲಿರುವ ಪಿಟಿವಿ, ಸಮಿತ್ ಸದಸ್ಯರೊಂದಿಗೆ ಸರಣಿ ಟಾಕ್ ಷೋಗಳನ್ನು ನಡೆಸಲಿದೆ.
(ಐಎಎನ್ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications