ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಟಿಐ ಬ್ಯಾಂಕ್‌ ಸಹಯೋಗದಲ್ಲಿ ಅಂಚೆ ಕಚೇರಿಯಲ್ಲೂ ಎಟಿಎಂ

By Staff
|
Google Oneindia Kannada News

ಬೆಂಗಳೂರು : ಕೆಲವು ಬ್ಯಾಂಕ್‌ಗಳಿಗೆ ಮಾತ್ರ ಸೀಮಿತವಾಗಿರುವ ಎಟಿಎಂ ಕೌಂಟರ್‌ಗಳನ್ನು ಅಂಚೆ ಕಚೇರಿಗಳಲ್ಲಿ ಯೂ ಆಂಭಿಸಲಾಗುವುದು ಎಂದು ಅಂಚೆ ಇಲಾಖೆಯ ಉಳಿತಾಯ ಬ್ಯಾಂಕ್‌ನ ಉಪನಿರ್ದೇಶಕ ವಿನೋದ್‌ ಮಖೀಜ ಹೇಳಿದ್ದಾರೆ.

ಅವರು ಸೋಮವಾರ ಅಂಚೆ ಕಚೇರಿಗಳಲ್ಲಿ ಮ್ಯೂಚುವಲ್‌ ಫಂಡ್‌ಗಳ ವಿತರಣೆ ಸಂಬಂಧ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದರು. ಈ ವರ್ಷದ ಕೊನೆಯ ವೇಳೆಗೆ ಒಂದು ಸಾವಿರ ಅಂಚೆ ಕಚೇರಿಗಳಲ್ಲಿ ಎಟಿಎಂ ಕೌಂಟರ್‌ಗಳನ್ನು ಆರಂಭಿಸುವ ಯೋಚನೆ ಇಲಾಖೆಗಿದೆ ಎಂದ ವಿನೋದ್‌, ಈ ಸಂಬಂಧ ಯುಟಿಐ ಬ್ಯಾಂಕ್‌ ಜೊತೆ ಮಾತುಕತೆ ನಡೆದಿದೆ ಎಂದರು.

ಯುಟಿಐ ಬ್ಯಾಂಕ್‌ ಎಟಿಎಂ ಕೌಂಟರ್‌ಗಳನ್ನು ನೋಡಿಕೊಳ್ಳಲಿದ್ದು, ಈ ಕುರಿತ ಅಂತಿಮ ನಿರ್ಧಾರವನ್ನು ಸದ್ಯದಲ್ಲಿಯೇ ಕೈಗೊಳ್ಳಲಾಗುವುದು ಎಂದರು. ಅಂಚೆ ಇಲಾಖೆ ಪ್ರಸ್ತುತ 16,000 ಕೋಟಿ ರೂಪಾಯಿ ಕೊರತೆ ಎದುರಿಸುತ್ತಿದ್ದು, ಇದನ್ನು ನಿವಾರಿಸಲು ಇನ್ನಷ್ಟು ಹೊಸ ಯೋಜನೆಗಳನ್ನು ಆರಂಭಿಸಲಾಗುವುದು ಎಂದು ವಿನೋದ್‌ ತಿಳಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X