Get Updates
Get notified of breaking news, exclusive insights, and must-see stories!

ಗಂಗೂಲಿ ಅವರನ್ನು ಮದುವೆಯಾಗುವ ಪ್ರಶ್ನೆಯೇ ಇಲ್ಲ - ನಗ್ಮಾ

ನವದೆಹಲಿ : ಭಾರತ ಕ್ರಿಕೆಟ್‌ ತಂಡದ ನಾಯಕ ಸೌರವ್‌ ಗಂಗೂಲಿ ಅವರನ್ನು ಮದುವೆಯಾಗುವ ವದಂತಿಗಳನ್ನು ಬಾಲಿವುಡ್‌ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಸಿನಿಮಾ ನಟಿ ನಗ್ಮಾ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

ಗಂಗೂಲಿ ಅವರನ್ನು ಮದುವೆಯಾಗುವ ಪ್ರಶ್ನೆಯೇ ಇಲ್ಲ . ನಾನವರನ್ನು ಪ್ರೇಮಿಸುತ್ತಿಲ್ಲ ಅಥವಾ ಅವರ ಪ್ರೇಮದಲ್ಲಿ ಬಿದ್ದಿಲ್ಲ ಎಂದು ಆಂಧ್ರಪ್ರದೇಶದ ಪುಣ್ಯಕ್ಷೇತ್ರ ತಿರುಮಲದಲ್ಲಿ ನಗ್ಮಾ ಹೇಳಿರುವುದಾಗಿ ಜನಪ್ರಿಯ ಇಂಗ್ಲೀಷ್‌ ದೈನಿಕವೊಂದು ವರದಿ ಮಾಡಿದೆ.

ಈ ಮುನ್ನ ಗಂಗೂಲಿ ಅವರೊಂದಿಗೆ ಕಾಳಹಸ್ತಿಯಲ್ಲಿ ಜಂಟಿಯಾಗಿ ನಡೆಸಿದ ಪೂಜೆಯ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ಹಳೆಯ ವಿಷಯಗಳ ಬಗೆಗೆ ಚರ್ಚಿಸಲು ತಮಗೆ ಆಸಕ್ತಿಯಿಲ್ಲ ಎಂದು ಹೇಳಿರುವುದಾಗಿ ದೈನಿಕ ತಿಳಿಸಿದೆ. ಗಂಗೂಲಿ ಅವರು ಶಾಸ್ತ್ರೀಯ ನೃತ್ಯಗಾತಿ ಡೋನಾ ಅವರನ್ನು ವಿವಾಹವಾಗಿದ್ದು , ಪ್ರಸ್ತುತ ಚೊಚ್ಚಿಲ ಮಗುವಿನ ನಿರೀಕ್ಷೆಯಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದು.

(ಐಎಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+