ಕೊಡಗು: ಕತ್ತಲು ತಂದ ಮಳೆಗೆ ರಸ್ತೆ, ವಿದ್ಯುತ್, ಪೋನ್‌ಗಳು ಬಂದ್
ಮಡಿಕೇರಿ : ಕೊಡಗಿನಲ್ಲಿ ಮಳೆಯ ರಾಜ್ಯಭಾರ ನಡೆದಿದೆ. ನೂರಾರು ಎಕರೆ ಪ್ರದೇಶಗಳು ನೀರಿನಲ್ಲಿ ಮುಳುಗಿ ಎರಡು ದಿನಗಳು ಕಳೆದಿವೆ. ರೆಚ್ಚೆ ಹಿಡಿದ ಮಳೆ ಇನ್ನೂ ಸಮಾಧಾನವಾಗಿಲ್ಲ.
ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಹಾರಂಗಿ ತುಂಬಿದ್ದಾಳೆ. ಪರಿಣಾಮವಾಗಿ ಭಾಗಮಂಡಲದಲ್ಲಿ ಟ್ರಾಫಿಕ್ ಜ್ಯಾಮ್. ಅಯ್ಯೆಂಗಿರಿ, ಬಲಮುರಿ, ದುಬಾರೆ ಮತ್ತು ಕಾರಡಿಗೋಡಿಗೆ ಹೋಗುವ ರಸ್ತೆಗಳೆಲ್ಲಾ ನೀರಿನಡಿಯಲ್ಲಿ ಮಲಗಿವೆ. ಹೀಗೆ ಧೋಗುಟ್ಟುವ ಮಳೆಗೆ ಫೋನ್, ವಿದ್ಯುತ್ ವೈರ್‌ಗಳು ಕಿತ್ತುಹೋಗಿ ಜೋತಾಡುತ್ತಿರುವುದು ಸಾಮಾನ್ಯತಾನೇ ? ಮನೆಯಂಗಳಕ್ಕಿಳಿದರೆ ಕಾರ್ಮೋಡದೆಡೆಯಿಂದ ಬಿಸಿಲು ಅಂಗಳಕ್ಕೆ ಬಿದ್ದಿಲ್ಲ. ಮನೆಯಾಳಗೆ ವಿದ್ಯುತ್ ಇಲ್ಲದಿರುವುದರಿಂದ ತುಸು ಬೆಳಕಿಲ್ಲ. ಕೊಡಗು ಕತ್ತಲಾಗಿದೆ.
ಮಡಿಕೇರಿ ಜಿಲ್ಲಾಧಿಕಾರಿ ರಾಮಚಂದ್ರಪ್ಪ , ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 160 ಕುಟುಂಬಗಳಿಗೆ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ತೆರಳುವಂತೆ ಸೋಮವಾರ ಹೇಳಿದ್ದಾರೆ. ದುಬಾರೆ ಮತ್ತು ಬಲಮುರಿಯಲ್ಲಿ ಎರಡು ದೋಣಿಗಳು ಯಾವುದೇ ಅಪಾಯವನ್ನೆದುರಿಸಲು ಸಿದ್ಧವಾಗಿವೆ. ಗಂಟೆಯಿಂದ ಗಂಟೆಗೆ ದುಬಾರೆ ಮತ್ತು ಬಲಮುರಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಲೇ ಇದೆ. ಯಾವುದೇ ಕಠಿಣ ಸಂದರ್ಭದಲ್ಲಿ ಶಾಲೆಗಳಿಗೆ ರಜೆಘೋಷಿಸುವ ಅಧಿಕಾರವನ್ನು ಶಾಲೆಗಳ ಮುಖ್ಯೋಪಾದ್ಯಾಯರಿಗೆ ನೀಡಲಾಗಿದೆ.
24 ಗಂಟೆ ಅವಧಿಯಲ್ಲಿ ಭಾಗಮಂಡಲ ಪ್ರದೇಶದಲ್ಲಿ 5 ಇಂಚುಗಳಷ್ಟು ಮಳೆಯಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಮಡಿಕೇರಿಗೆ 36.33 ಇಂಚು ಮಳೆ ಬಂದಿದ್ದರೆ ಈ ಬಾರಿ 38.8 ಇಂಚುಗಳಷ್ಟು ಮಳೆ ಬಂದಿದೆ. ಹಾರಂಗಿ ತುಂಬಿದ್ದು , ನೀರಿನ ಮಟ್ಟ 2837.13 ಮೀಟರ್‌ಗೇರಿದೆ.
ಕುಶಾಲನಗರ ವರದಿ : ಇನ್ನಾರು ತಿಂಗಳಲ್ಲಿ ಹಾರಂಗಿ ಜಲಾಶಯವನ್ನು ಆಧುನಿಕೀಕರಣಗೊಳಿಸಲಾಗುವುದು ಎಂದು ಭಾರೀ ಮತ್ತು ಮಧ್ಯಮ ನೀರಾವರಿ ಖಾತೆ ಸಚಿವ ಎಚ್. ಕೆ. ಪಾಟೀಲ್ ಹೇಳಿದ್ದಾರೆ.
ಅವರು ಕುಶಾಲನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈಗಾಗಲೇ ವಿಶೇಷ ಪರಿಣತಿ ಹೊಂದಿದ ಆರ್ಕಿಟೆಕ್ಟ್‌ಗಳನ್ನು ಮತ್ತು ಡಿಸೈನರ್‌ಗಳ ಜೊತೆ ಈ ಕುರಿತು ಮಾತುಕತೆ ನಡೆಸಲಾಗಿದ್ದು, ನೀಲನಕಾಶೆ ತಯಾರಿಸಲಾಗಿದೆ. ಸದ್ಯದಲ್ಲಿಯೇ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಪಾಟೀಲ್ ಹೇಳಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications